ಈ ನಗರಗಳಲ್ಲೇ ಹೆಚ್ಚು ಸಂಬಳ ಸಿಗೋದು..!

0
104

ಈ ನಗರಗಳಲ್ಲೇ ಹೆಚ್ಚು ಸಂಬಳ ಸಿಗೋದು..!

ಭಾರತದ ಎಲ್ಲಾ ವಿದ್ಯಾವಂತ ಯುವಕ/ಯುವತಿಯರಿಗೆ ತನ್ನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಪಡೆಯಬೇಕೆಂಬುದು ಎಲ್ಲರ ಬಯಕೆ. ಅದರಲ್ಲೂ ಬೇರೆ ಬೇರೆ ನಗರಗಳಲ್ಲಿ ಅತೀ ಹೆಚ್ಚು ವೇತನ ನೀಡುವ ಕಂಪನಿಗಳಲ್ಲಿ ಕೆಲಸ ಸಿಕ್ಕಿದರಂತು ಬಿಡಿ.. ಅದರಿಂದಾಗುವ ಖುಷಿ ಮತ್ತೊಂದಿಲ್ಲ. ಅದೇ ರೀತಿ ಭಾರತದಲ್ಲಿರುವ ಪ್ರಸಿದ್ದ 10 ನಗರಗಳು ಜನರಿಗೆ ಉದ್ಯೋಗವಕಾಶ ನೀಡುವ ಜೊತೆಯಲ್ಲಿ ಊಹೆಗೂ ಮೀರಿದ ಸಂಭಾವನೆ ನೀಡ್ತಾ ಇವೆ. ಬೇರೆ ಬೇರೆ ರಾಷ್ಟ್ರದ ನಗರಗಳನ್ನು ಹೋಲಿಸಿಕೊಂಡರೆ ಈ ಹತ್ತು ನಗರಗಳಲ್ಲಿನ ಬೆಳವಣಿಗೆಯ ದರ ಹೆಚ್ಚಿದೆ ಎಂದು ವರದಿಯೊಂದು ನೀಡಿದೆ ಈ ಪೇಸ್ಕೇಲ್ ಡಾಟ್ ಕಾಮ್. ಈ ಹತ್ತು ಸೂಪರ್ ಸ್ಯಾಲರಿ ನಗರಗಳಲ್ಲಿ ಕರ್ನಾಟಕ ಸಿಲಿಕಾನ್ ಸಿಟಿ ಬೆಂಗಳೂರು ನಂ.1 ಸ್ಥಾನದಲ್ಲಿರೋದು ಶ್ಲಾಘನೀಯ. ಭಾರತದ ಹತ್ತು ನಗರಗಳಲ್ಲಿನ ಉದ್ಯೋಗಿಗಳ ವಾರ್ಷಿಕ ವೇತನದ ಡೀಟೆಲ್ಸ್ ಇಲ್ಲದೆ ನೋಡಿ.
ಬೆಂಗಳೂರು.
ರಾಜ್ಯ ರಾಜಧಾನಿ ಬೆಂಗಳೂರು ಭಾರತದಲ್ಲೇ ಅತೀ ಹೆಚ್ಚು ವೇತನ ನೀಡುವ ನಗರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇಲ್ಲನ ಉದ್ಯೋಗಿಗಳಿಗೆ ಕಂಪನಿಗಳು ವಾರ್ಷಿಕ 5.85 ಲಕ್ಷ ಹಣ ವೇತನವಾಗಿ ನೀಡ್ತಾ ಇದೆ. ಇನ್ನು ಇಲ್ಲಿನ ನಗರ ಬೆಳವಣಿಗೆ ದರ ಶೇ.29.
ಪುಣೆ.
ಮಹಾರಾಷ್ಟ್ರದ ಪುಣೆ ನಗರ ಅತೀ ಹೆಚ್ಚು ವೇತನ ನೀಡುವ ನಗರದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರ್ಷಿಕ 5.30 ಲಕ್ಷ ರೂ. ವೇತನ ನೀಡ್ತಾ ಇದೆ. ಅಲ್ಲದೇ ಭಾರತದ ಇತರೆ ನಗರಗಳಿಗಿಂತ ಅತೀ ಹೆಚ್ಚು ಉದ್ಯೋಗಿಗಳನ್ನ ಹೊಂದಿರುವ ಏಕೈಕ ನಗರ ಈ ಪುಣೆ.
ನೋಯಿಡಾ.
ನೋಯಿಡಾ ನಗರದಲ್ಲಿ ಉದ್ಯೋಗಿಗಳಿಗೆ ಸಿಕ್ತಾ ಇರೋ ವಾರ್ಷಿಕ ಸಂಭಾವನೆ 5 ಲಕ್ಷ ರೂ. ಇನ್ನು ನಗರದ ಬೆಳವಣಿಗೆ ದರ ಶೇ.14
ಮುಂಬೈ.
ದೇಶದ ವಾಣಿಜ್ಯ ನಗರಿ ಎಂದು ಪ್ರಖ್ಯಾತಗೊಂಡಿರುವ ಮುಂಬೈ, ಅಲ್ಲಿನ ಕಂಪನಿ ಮಾಲಿಕರು ಉದ್ಯೋಗಿಗಳಿಗೆ ನೀಡ್ತಾ ಇರೋ ವಾರ್ಷಿಕ ವೇತನ 4.98 ಲಕ್ಷ ರೂ. ಇನ್ನು ಈ ನಗರ ವರ್ಷಕ್ಕೆ ಬರೋಬ್ಬರಿ 19,000 ಹೊಸ ಹೊಸ ಉದ್ಯೋಗಿಗಳಿಗೆ ಕೆಲಸ ನೀಡುತ್ತಾ ಬರುತ್ತಿವೆ.
ಹೈದರಾಬಾದ್.
ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್‍ನ ಉದ್ಯೋಗಿಗಳು ಪಡೆಯುತ್ತಿರೋ ವಾರ್ಷಿಕ ಹಣ 4.89 ಲಕ್ಷ. ಇಲ್ಲಿನ ಬೆಳವಣಿಗೆ ದರ ಶೇ.30
ಗುರ್‍ಗಾಂವ್
ಗುರ್ಗಾಂವ್ ಎಂದೆ ಹೆಸರುವಾಸಿಯಾಗಿರೋ ಇಂದಿನ ಗುರ್‍ಗಾಂವ್ ನಲ್ಲಿ ಉದ್ಯೋಗಿಗಳಿಗೆ ಶೇ.4.50 ಲಕ್ಷ ವಾರ್ಷಿಕ ವೇತನ ಸಿಕ್ತಾ ಇದೆ. ಆ ಮುಖೇನ ಈ ನಗರದ ಬೆಳವಣಿಗೆ ದರವೂ ಕೂಡ ಶೇ.11 ರಷ್ಟಿದೆ.
ದೆಹಲಿ.
ರಾಷ್ಟ್ರ ರಾಜಧಾನಿ ದೆಹಲಿಯೂ ಕೂಡ ಅತೀ ಹೆಚ್ಚು ಉದ್ಯೋಗಿಗಳನ್ನು ಹಾಗೂ ಸಾಫ್ಟ್‍ವೇರ್ ಕಂಪನಿಗಳನ್ನು ಹೊಂದಿರುವ ನಗರವಾಗಿದ್ದು, ಇಲ್ಲಿನ ಉದ್ಯೋಗಿಗಳಿಗೆ 4.82 ಲಕ್ಷ ವಾರ್ಷಿಕ ವೇತನ ನೀಡುತ್ತಿದೆ. ಬೆಳವಣಿಗೆ ದರ ಶೇ.32.
ಚೆನ್ನೈ.
ದಕ್ಷಿಣ ಭಾರತದ ಪ್ರಖ್ಯಾತ ನಗರಗಳಲ್ಲಿ ಒಂದಾದ ಚೆನ್ನೈನ ಉದ್ಯೋಗಿಗಳಿಗೆ ಅಲ್ಲಿನ ಕಂಪನಿ ನೀಡುತ್ತಿರೋ ವಾರ್ಷಿಕ ಸಂಭಾವನೆ 4.44 ಲಕ್ಷ ರೂ. ಅಲ್ಲದೇ ಈ ನಗರದಲ್ಲಿ ಅತೀ ಹೆಚ್ಚು ಕೆಲಸ ಹುಡುಕುತ್ತಿರುವ ಯುವಕರು ಹೆಚ್ಚಾಗಿದ್ದು ನಗರ ಬೆಳವಳಿಗೆ ದರ ಮಾತ್ರ ಕೇವಲ ಶೇ.6 ರಷ್ಟು.
ಚಂಡೀಗಡ್
ಚಂಡೀಗಡ್ ನಗರದ ಬೆಳವಣಿಗೆ ದರ ಶೇ. 22. ಇಲ್ಲಿನ ವಾರ್ಷಿಕ ಆದಾಯ ದರ 5.52 ಲಕ್ಷ.
ಅಹಮದಾಬಾದ್.
ಅಹಮದಾಬಾದ್ ಕೂಡ ಸಾಕಷ್ಟು ಉದ್ಯೋಗಿಗಳನ್ನು ಹೊಂದಿರುವ ನಗರ. ಇಲ್ಲಿನ ಉದ್ಯೋಗಿಗಳ ವಾರ್ಷಿಕ ಆದಾಯದ ಕುರಿತಾಗಿ ಹೆಚ್ಚಿ ಮಾಹಿತಿ ಲಭ್ಯವಿಲ್ಲದಿದ್ದರೂ, ನಗರ ಬಗೆಳವಣಿಗೆ ದರ ಮಾತ್ರ ಕೇವಲ ಶೇ.2 ರಷ್ಟು.

 

LEAVE A REPLY

Please enter your comment!
Please enter your name here