ವರ್ಷ ಭವಿಷ್ಯ; ಯಾವ ರಾಶಿಗೆ ಏನು ಫಲ

Date:

2017 ಕಳೆದೇ ಹೋಯ್ತು, 2018ನ್ನು ಎಲ್ಲರೂ ಪ್ರೀತಿಯಿಂದ ಬರ ಮಾಡಿಕೊಂಡಿದ್ದೇವೆ. ವರ್ಷಾರಂಭ ಎಂದೊಡನೆ ನಮಗೆ ಈ ವರ್ಷ ಯಾವೆಲ್ಲಾ ಫಲಗಳು ಸಿಗುತ್ತವೆ ಎಂಬ ಕುತೂಹಲ ಇರುತ್ತೆ. ಇಲ್ಲಿ ದ್ವಾದಶ ರಾಶಿಗಳ ಫಲಗಳನ್ನು ನೀಡಲಾಗಿದೆ. ಯಾವ ರಾಶಿಗೆ ಏನ್ ಏನ್ ಫಲವಿದೆ ಅನ್ನೋದನ್ನು ಓದಿ…

ಮೇಷ : 

ಈ ವರ್ಷ ಮೇಷ ರಾಶಿಯವರಿಗೆ ಮಿಶ್ರಫಲ. ಅಕ್ಟೋಬರ್ ಬಳಿಕ ಆರೋಗ್ಯ ವಿಚಾರದಲ್ಲಿ ಹೆಚ್ಚು ಜಾಗೃತರಾಗಿರಬೇಕು. ವರ್ಷಾರಂಭದಲ್ಲಿ ಕೆಲಸ ಬದಲಿಸೋ ಯೋಚನೆ ಅಥವಾ ಹೊಸ ವ್ಯಾಪರ ಆರಂಭಿಸಲು ಸೂಕ್ತಕಾಲ. ಕೆಲಸ ನಿಮಿತ್ತ ವಿದೇಶಕ್ಕೆ ಹೋಗುವ ಸಾಧ್ಯತೆ. ವಿವಾಹಿತರಿಗೆ ಸಂಸಾರಿಕ ನೆಮ್ಮದಿ, ಅವಿವಾಹಿತರಿಗೆ ಮದುವೆಗೆ ಹೆಚ್ಚು ಪ್ರಯತ್ನ ಪಡಬೇಕು.

ವೃಷಭ :

ಅವಿವಾಹಿತರಿಗೆ ವರ್ಷಾಂತ್ಯದಲ್ಲಿ ವಿವಾಹ ಯೋಗ. ಸಾಲ ಮಾಡಿ ಮಾಡಬೇಕಾದ ಕಾರ್ಯಗಳನ್ನು ಮುಂದೂಡಿ. ಷೇರು ಮಾರುಕಟ್ಟೆ ವ್ಯವಹಾರಗಳಲ್ಲಿ ಎಚ್ಚರ.

ಮಿಥುನ :

ಹೆಚ್ಚು ಪ್ರಯಾಣ, ಅಧಿಕ ಖರ್ಚು. ಭೂಮಿ ಖರೀದಿ ಅಥವಾ ಮನೆ ಕಟ್ಟುವ ಯೋಚನೆಗಳಿದ್ದಲ್ಲಿ ಧೈರ್ಯದಿಂದ ಕಾರ್ಯಮಗ್ನರಾಗಿ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಕೆಲಸ ಬದಲಾವಣೆಗೆ ಸೂಕ್ತ ಸಮಯ.

ಕರ್ಕಾಟಕ :

ಅಧಿಕ ಖರ್ಚು, ಆಹಾರ ಸೇವನೆಯಲ್ಲಿ ಎಚ್ಚರಿಕೆ ಹಾಗೂ ಮಿತಿ ಅಗತ್ಯ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗಲಿದೆ. ಉದ್ಯೋಗದಲ್ಲಿ ವರ್ಗಾವಣೆ/ ಬಡ್ತಿ, ಗೌರವ ಸಿಗಲಿದೆ.

ಸಿಂಹ :

 

ಈ ವರ್ಷವನ್ನು ಎಷ್ಟು ತಾಳ್ಮೆಯಿಂದ ಕಳೆಯುತ್ತೀರಿ ಅಷ್ಟು ಒಳ್ಳೆಯದು. ಕಷ್ಟಗಳು ಬರುವುದೇ ಎದುರಿಸಲಿಕ್ಕೆ. ನೀವು ಹೆಚ್ಚು ಕಷ್ಟಗಳನ್ನು ಅನುಭವಿಸುವ ವರ್ಷವಿದು. ಮುಂದೆ ಖಂಡಿತಾ ಒಳ್ಳೆಯದಾಗುತ್ತೆ. ಹಣ ಕೈಯಲ್ಲಿ ಉಳಿಯುವುದಿಲ್ಲ. ಅನಗತ್ಯ ಖರ್ಚು. ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆ. ಕುಟುಂಬ ಕಲಹ ಇತ್ಯಾದಿ ಫಲಗಳು ಸಿಂಹ ರಾಶಿಯವರಿಗೆ ಕಾದಿದೆ.

ಕನ್ಯಾ :

ಆರೋಗ್ಯ ಸಮಸ್ಯೆ ಕಾಡಲಿದೆ. ಹಣಕಾಸು ವಿಚಾರದಲ್ಲಿ ಕಿರಿಕಿರಿ. ಅವಿವಾಹಿತರಿಗೆ ಸಂಬಂಧಿಕರಲ್ಲೇ ವಿವಾಹ ಭಾಗ್ಯ. ಉದ್ಯೋಗ, ಸ್ವಯಂ ಉದ್ಯೋಗಳೆರಡೂ ಕೈ ಹಿಡಿಯುತ್ತವೆ.

ತುಲಾ :

ಚರ್ಮವ್ಯಾಧಿ, ಮನಸ್ತಾಪ, ಸಹೋದರರೊಂದಿಗೆ ಕಲಹ, ಲಾಭ ಕಡಿಮೆ, ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುತ್ತವೆ.
ವೃಶ್ಚಿಕ : 

ಕುಟುಂಬದಲ್ಲಿ ನೆಮ್ಮದಿ. ಆದರೆ, ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ. ನಿರುದ್ಯೋಗಿಗಳಿಗೆ ತಾತ್ಕಲಿಕ ಉದ್ಯೋಗಿ ಸಿಗಬಹುದಷ್ಟೇ. ವ್ಯಾಪರಿಗಳಿಗೆ ನಷ್ಟ. ವಿವಾಹ ಅಥವಾ ಸಂತಾನ ಭಾಗ್ಯ ಈ ವರ್ಷ ಇಲ್ಲ.

ಧನು :

2018ರಲ್ಲಿ ಹೆಚ್ಚು ಸೋಮಾರಿಗಳಾಗಿರೋದು ನೀವೇ. ಆದರೆ, ಸರ್ಕಾರಿ ಕೆಲಸ ಸಿಗೋ ಯೋಗವಿದೆ. ಪ್ರಯತ್ನಿಸಿ. ತಾತ್ಕಾಲಿಕ ಉದ್ಯೋಗಿಗಳಾಗಿದ್ದಲ್ಲಿ ಕಾಯಂ ಉದ್ಯೋಗ ಸಿಗೋ ಅವಕಾಶವಿದೆ. , ಉದ್ಯೋಗದಲ್ಲಿ ಬಡ್ತಿ, ಗೌರವ ಪ್ರಾಪ್ತಿ.

ಮಕರ : ಕಷ್ಟಗಳಿರಲ್ಲ. ಆದರೆ, ಅಪವಾದ ತಪ್ಪಲ್ಲ. ಸಾಲದ ಸುಳಿಗೆ ಬೀಳ್ತೀರಿ. ಹೋಟೆಲ್ ಉದ್ಯಮಿಗಳಿಗೆ ಲಾಭ. ಹೊಟ್ಟೆ ನೋವು, ಅಜಿರ್ಣ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾದೀತು.

ಕುಂಭ : ಭೂಮಿ ಅಥವಾ ಮನೆ ಖರೀದಿ ಹಾಗೂ ವಿವಾಹ ಯೋಗ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಒಳ್ಳೆಯ ದುಡಿಮೆ, ಹೆಚ್ಚಿನ ಲಾಭ.

ಮೀನ :ವಿವಾಹಕ್ಕೆ ವಿಘ್ನ. ಜಮೀನು ಖರೀದಿ, ಗೃಹ ನಿರ್ಮಾಣ ಕೆಲಸಕ್ಕೆ ಕೈ ಹಾಕ್ಬೇಡಿ. ಮಕ್ಕಳ ವಿಚಾರದಲ್ಲಿ ಕಿರಿಕಿರಿ. ಉದ್ಯೋಗ ನಿಮಿತ್ತ ದೂರ ಪ್ರಯಾಣ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...