21 ರಿಂದ 5 ದಿನಗಳ ಕಾಲ ಬ್ಯಾಂಕ್ ರಜೆ..!!
ಬ್ಯಾಂಕ್ ನೌಕರರು ಹಾಗೆ ಅಲ್ಲಿನ ಅಧಿಕಾರಿಗಳು ಪ್ರತ್ಯೇಕವಾಗಿ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಉದ್ದೇಶಿಸಿದ್ದಾರೆ.. ಇದು ವಾರಾಂತ್ಯ ನಡೆಸಲು ಉದ್ದೇಶಿಸಿರುವುದರಿಂದ 21 ರಿಂದ ಬ್ಯಾಂಕ್ ಬಾಗಿಲು ಮುಚ್ಚುವ ಸಾಧ್ಯತೆಗಳಿವೆ.. 21ರಂದು ಬ್ಯಾಂಕ್ ಆಫೀಸರ್ಸ್ ಯೂನಿಯನ್ ಮುಷ್ಕರಕ್ಕೆ ಕರೆ ನೀಡಿದೆ..
22ರಂದು ನಾಲ್ಕನೇ ಶನಿವಾರ ಇರುವುದರಿಂದ ಬ್ಯಾಂಕ್ ರಜೆ.. 23 ಭಾನುವಾರ.. 25ಕ್ಕೆ ಕ್ರಿಸ್ಮಸ್ ರಜೆ ಇದೆ.. ಈ ನಡುವೆ ಬ್ಯಾಂಕ್ ಒಕ್ಕೂಟಗಳ ವೇದಿಕೆ 26 ರಂದು ಮುಷ್ಕರಕ್ಕೆ ಕರೆ ನೀಡಿದೆ.. ಹೀಗಾಗೆ 24 ನೇ ತಾರೀಕನ್ನ ಹೊರತು ಪಡೆಸಿ, ಉಳಿದ ಐದು ದಿನಗಳು ಬ್ಯಾಂಕ್ ರಜೆ ಇರುವುದರಿಂದ ನಿಮ್ಮ ವ್ಯವಹಾರಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳಿ..