24 ಗಂಟೆ ವ್ಯಾಪಾರಕ್ಕೆ ಅನುಮತಿ ನೀಡಿ: ಹೊಟೇಲ್ ಮಾಲೀಕರ ಆಗ್ರಹ!

Date:

ಬೆಂಗಳೂರು: 24 ಗಂಟೆ ವ್ಯಾಪಾರ ಅನುಮತಿಗೆ ಹೊಟೇಲ್ ಮಾಲೀಕರ ಸಂಘ ಆಗ್ರಹಿಸಿದೆ. ರಾತ್ರಿ 11 ಗಂಟೆ ದಾಟಿದ್ರೆ ಸಾಕು ಊಟ ಎಲ್ಲಿ ಸಿಗುತ್ತೆ ಅಂತಾ ಅಲುದಾಡ್ತಿದ್ದ ಶ್ರಮಿಕರು, ಕಾರ್ಮಿಕರು ಹಾಗೂ ರಾತ್ರಿ ಪಾಳಯದ ಕೆಲಸಗಾರರ ಜೊತೆಗೆ ಹೊಟೇಲ್ ಮಾಲೀಕರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಬಜೆಟ್ ನಲ್ಲಿ ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಉದ್ದೇಶದಿಂದ ತಡರಾತ್ರಿ 1 ಗಂಟೆ ತನಕ ಹೊಟೇಲ್ ಓಪನ್ ಗೆ ಅವಕಾಶ ನೀಡಿರೋದಕ್ಕೆ ಹೊಟೇಲ್ ಮಾಲೀಕರು, ಗ್ರಾಹಕರು ಖುಷ್ ಆಗಿದ್ದಾರೆ.
ಆದರೆ ಈಗ 24 ಗಂಟೆ ವ್ಯಾಪಾರ ಅನುಮತಿಗೆ ಆಗ್ರಹ ಕೇಳಿ ಬಂದಿದೆ. ರಾಜ್ಯದಲ್ಲಿ ತಡರಾತ್ರಿ 1 ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ವ್ಯಾಪಾರ, ವಾಣಿಜ್ಯ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರೋ ಪ್ಲಾನ್ ಗೆ ಸಿಲಿಕಾನ್ ಸಿಟಿ ಮಂದಿ ಫುಲ್ ಖುಷ್ ಆಗಿದ್ದಾರೆ. ಮೊದಲೆಲ್ಲ ರಾತ್ರಿ 10 ,11 ಗಂಟೆಗೆ ಹೊಟೇಲ್ ಬಂದ್ ಆಗ್ತಿದ್ದರಿಂದ ಪರದಾಡ್ತಿದ್ದ ಜನರು, ಇದೀಗ 1 ಗಂಟೆ ತನಕ ಅವಕಾಶ ಕೊಟ್ಟಿರೋದಕ್ಕೆ ಸಂತಸ ವ್ಯಕ್ತಪಡಿಸ್ತಿದ್ದಾರೆ.
ಇನ್ನು ಈ ಹಿಂದೆ 24 ಗಂಟೆಗಳ ಕಾಲ ವ್ಯಾಪಾರಕ್ಕೆ ಅವಕಾಶ ಕೋರಿ ಹೊಟೇಲ್ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಆದ್ರೆ ಸರ್ಕಾರ ಮಾತ್ರ ಈ ಮನವಿಗೆ ಪುರಸ್ಕಾರ ಕೊಡದೇ ಇರೋದಕ್ಕೆ ಹೊಟೇಲ್ ಮಾಲೀಕರು ಅಸಮಾಧಾನ ಹೊರಹಾಕ್ತಿದ್ದಾರೆ. ಇಡೀ ರಾತ್ರಿ ವ್ಯಾಪಾರಕ್ಕೆ ಅವಕಾಶ ಕೊಟ್ಟರೇ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಜೊತೆಗೆ ಕ್ರೈಂ ರೇಟ್ ಕೂಡ ಕಡಿಮೆಯಾಗುತ್ತೆ, ಸರ್ಕಾರ ಈ ಬಗ್ಗೆ ಗಮನಹರಿಸಲಿ ಅಂತಾ ಹೊಟೇಲ್ ಮಾಲೀಕರು ಆಗ್ರಹಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಅಪ್ಪಿತಪ್ಪಿಯೂ ಚಳಿಗಾಲದಲ್ಲಿ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ!

ಅಪ್ಪಿತಪ್ಪಿಯೂ ಚಳಿಗಾಲದಲ್ಲಿ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ! ಇತ್ತೀಚಿನ ದಿನಗಳಲ್ಲಿ ಚಳಿ ದಿನದಿಂದ...

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ ಅಂತ್ಯಕ್ರಿಯೆ 

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ...

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...