No menu items!
12.5 C
Munich
Monday, May 4, 2026

ತನ್ನ ತಂಗಿಯ ಎಂಗೆಜ್ಮೆಂಟ್ ಗೆ ಬರ್ಲಿಲ್ಲ ಎಂದು ಪತಿಯಿಂದ ಪತ್ನಿಗೆ ಚಾಕು ಇರಿತ !

Must read

ಬೆಂಗಳೂರು: ತನ್ನ ತಂಗಿಯ ಎಂಗೇಜ್ಮೆಂಟ್ಗೆ ಬರ್ಲಿಲ್ಲ ಎಂದು ಜಗಳವಾಡುತ್ತಿದ್ದಾಗ ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಜರುಗಿದೆ. ಜಯಪ್ರಕಾಶ್ ತನ್ನ ಪತ್ನಿ‌ ದಿವ್ಯಶ್ರೀ ಗೆ ಚಾಕು ಇರಿದಿದ್ದಾರೆ. ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕೊಲೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿ ಜಯಪ್ರಕಾಶ್ ಬಂಧಿಸಿ ಜೈಲಿಗಟ್ಟಲಾಗಿದೆ.


ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಪೋಷಕರ ವಿರೋಧ ಹಿನ್ನಲೆ ಬೆಂಗಳೂರಲ್ಲಿ ವಾಸವಾಗಿದ್ದರು. ಗಂಡನಿಗೆ ಅನಾರೋಗ್ಯ ಹಿನ್ನಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ತಿದ್ಳು. ಮೊದಲು ಮೂಡಲಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ದಂಪತಿ, ನಂತರ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇವರಿಬ್ಬರೂ ಮನೆಯ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರೂ ಇವರ ನಡುವೆ ಗಲಾಟೆ, ಜಗಳ ಸಾಮಾನ್ಯವಾಗಿತ್ತು.
ಮದುವೆ ಆದಾಗಿನಿಂದಲೂ ಜಯಪ್ರಕಾಶ್ಗೆ ತನ್ನ ಪತ್ನಿ ಮೇಲೆ ಅನುಮಾನವಿತ್ತು. ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಜಯಪ್ರಕಾಶ್ ಗಲಾಟೆ ಮಾಡ್ತಿದ್ದ. ಫೋನಲ್ಲಿ ಯಾರ ಯಾರ ಜೊತೆಗೆ ಮಾತಾಡ್ತಿಯ ಎಂದು ಹಲ್ಲೆ ನಡೆಸುತ್ತಿದ್ದ. ಹೀಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ತನ್ನ ತಂಗಿಯ ಎಂಗೇಜ್ಮೆಂಟ್ಗೆ ಬರ್ಲಿಲ್ಲ ಎಂಬ ಕೋಪ ಕೂಡ ಹೆಚ್ಚಾಗಿದ್ದು ಜಯಪ್ರಕಾಶ್ ಚಾಕು ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಮುಂದಾದಾಗ ಚಾಕು ಕಾಲಿಗೆ ತಾಕಿ ದಿವ್ಯಶ್ರೀಗೆ ಗಾಯಗಳಾಗಿವೆ. ಕಾಲಿಗೆ ಗಾಯ ಆಗಿದ್ದು ಎಂಟು‌ ಹೊಲಿಗೆ ಹಾಕಲಾಗಿದೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ ಎನ್ನಲಾಗಿದೆ.

- Advertisement -spot_img

More articles

- Advertisement -spot_img

Latest article