400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಗುರಿ ನಮ್ಮ ವರಿಷ್ಠರಲ್ಲಿದೆ !

Date:

ಬೆಂಗಳೂರು: 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಗುರಿ ನಮ್ಮ ವರಿಷ್ಠರಲ್ಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ”400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಗುರಿ ನಮ್ಮ ವರಿಷ್ಠರಲ್ಲಿದೆ. ಹಾಗಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ದೆಹಲಿಗೆ ಕರೆತರಲಿದ್ದೇನೆ ಎಂದು ಹೇಳಿದ್ದೇನೆ. ಆ ಭರವಸೆ ನನಗಿದೆ. ಅಮಿತ್ ಶಾ ಹಾಗೂ ಮೋದಿ ಅವರಿಗೂ ಇದನ್ನು ಹೇಳಿದ್ದೇನೆ. ಹಾಗಾಗಿ ಈ ಬಾರಿ ನಿಶ್ಚಿತವಾಗಿ ಎಲ್ಲ ಕ್ಷೇತ್ರ ಗೆದ್ದು ನಮ್ಮ ಕೊಡುಗೆ ಕರ್ನಾಟಕದ ಕೊಡುಗೆ ಎಂದು ಮೋದಿ ಅವರಿಗೆ 28 ಸಂಸತ್ ಸ್ಥಾನದ ಉಡುಗೊರೆ ಕೊಡಲಿದ್ದೇವೆ” ಎಂದರು.
”ದೇವರ ಆಶೀರ್ವಾದ, ಜನರ ಬೆಂಬಲ ಮೋದಿಯ ಅಲೆ ಇದೆ ಎಲ್ಲವೂ ಸಹ ನಮಗೆ ಪೂರಕವಾಗಿರಲಿದೆ, ನಮ್ಮ ಗುರಿ ತಲುಪುವಲ್ಲಿ ನಾವು ಸಫಲರಾಗುತ್ತೇನೆ. ಮೋದಿ ಇದೇ 14 ರಂದು ಮಂಗಳೂರು ಬೆಂಗಳೂರಿನಲ್ಲಿ ಪ್ರಚಾರ ಮಾಡುವ ಚಿಂತನೆ ಮಾಡಿದ್ದಾರೆ. ಈ ಬಗ್ಗೆ ಇನ್ನು ಅಂತಿಮವಾಗಿಲ್ಲ” ಎಂದರು. ಇದೇ ವೇಳೆ, ”ಟಿಕೆಟ್ ಹಂಚಿಕೆ ವಿಚಾರದಲ್ಲಿ ತಲೆದೂರಿದ್ದ ಸಣ್ಣಪುಟ್ಟ ಅಸಮಧಾನ ಎಲ್ಲವೂ ಸರಿಯಾಗಿದೆ. ವೈಯಕ್ತಿಕವಾಗಿ ಎಲ್ಲರನ್ನು ಕರೆಸಿ ಮಾತುಕತೆ ನಡೆಸಿದ್ದೇನೆ. ಎಲ್ಲರನ್ನೂ ಮನೆಗೆ ಕರೆದು ಮಾತನಾಡಿ ಒಗ್ಗಟ್ಟಿನಿಂದ ಹೋಗುವಂತೆ ತಿಳಿಸಿದ್ದೇನೆ. ಈಗ ಎಲ್ಲವೂ ಸರಿಯಾಗಿದೆ” ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...