No menu items!
17 C
Munich
Friday, July 24, 2026

ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಮಾಜಿ ಸಚಿವ ಡಾ. ಸುಧಾಕರ್

Must read

ಬೆಂಗಳೂರು:- ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಭೇಟಿ ಮಾಡಿದ್ದಾರೆ. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಭೇಟಿ ಮಾಡಿದ ಸುಧಾಕರ್ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಭೇಟಿ ಬಳಿಕ ಮಾತನಾಡಿದ ಸುಧಾಕರ್, ಚುನಾವಣಾ ಕಾವು ದಿನೇ ದಿನೆ ಹೆಚ್ಚಾಗ್ತಿದೆ.
ಯುಗಾದಿ ಹೊಸದಡಕು ಇದಿದ್ರಿಂದ ನಾಯಕರು ಹೊರ ಬಂದು ಕೆಲಸ ಮಾಡೊದು ಕಷ್ಟ. ಯಡಿಯೂರಪ್ಪನವರನ್ನ ಭೇಟಿ ಮಾಡಿ ಹಬ್ಬದ ಶುಭಾಶಯ ತಿಳಿಸಿದ್ದೇನೆ. ನಮ್ಮ ಕ್ಷೇತ್ರದ ಅಗುಹೋಗುಗಳನ್ನ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಕೂಡ ನಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡೊದಾಗಿ ಹೇಳಿದ್ದಾರೆ. ಮೋದಿಯವರ ಮತ್ತೆ ಯಾವಾಗ ಬರ್ತಾರೆ ಎನ್ನೊದು ಗೊತ್ತಿಲ್ಲ. ಕರ್ನಾಟಕಕ್ಕೆ ಇನ್ನು ಮೂರ್ನಾಲ್ಕುಬಾರಿ ಮೊದಿಯವರು ಬರುವವರಿದ್ದಾರೆ ಎಂದರು.

- Advertisement -spot_img

More articles

- Advertisement -spot_img

Latest article