ಪ್ರವಾಸ ಹೋಗುವುದೆಂದರೇ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಯಾವುದೇ ಕಿರಿಕಿರಿಯಿಲ್ಲದೇ ಸ್ವಂತ ವಾಹನದಲ್ಲಿ ತೆರಳುವ ಮೂಲಕ ಇಷ್ಟ ಬಂದ ಕಡೆ ಟೆಂಟ್ ಹಾಕಿ ವಾಸ ಮಾಡುವ ಮಜಾವೇ ಬೇರೆ. ಅದಕ್ಕಾಗಿ ರಜಾ ದಿನಗಳಲ್ಲಿ ಹತ್ತಾರು ಕುಟುಂಬಗಳು ಚಿಕ್ಕಪುಟ್ಟ ಪ್ರವಾಸಗಳನ್ನು ಏರ್ಪಡಿಸುತ್ತವೆ. ಒಂದೆಡೆ ತೆರಳಿ ಎಂಜಾಯ್ ಮಾಡುತ್ತವೆ. ಆದರೆ ಇಲ್ಲೊಂದು ಕಂಪನಿ 41 ದೇಶಗಳನ್ನು ಸುತ್ತಿದೆ. ಅದೂ ಕೂಡಾ ಒಂದೇ ಒಂದು ಬೈಕ್ ನಲ್ಲಿ ಎಂಬುದು ವಿಶೇಷ..!
ರೊಮೇನಿಯಾದ ಕುಟುಂಬವೊಂದು 4 ತಿಂಗಳಲ್ಲಿ 41 ದೇಶಗಳನ್ನು ಬೈಕ್ ನಲ್ಲಿ ಸುತ್ತಿ ಬಂದಿದೆ. 2015 ರ ಬೇಸಿಗೆಯಲ್ಲಿ ರೊಮೇನಿಯಾದ ಮಿಹಿ ಬಾರ್ಬು, ಆತನ ಗೆಳತಿ ಒನಾ ಹಾಗೂ ಅವರ 4 ವರ್ಷದ ಪುತ್ರ ವ್ಲಾಡಿಮಿರ್ ಯುರೋಪ್ ಟೂರ್ ಮಾಡಿದ್ದು, ಈ ಅವಧಿಯಲ್ಲಿ 28,000 ಕಿಲೋಮೀಟರ್ ಸುತ್ತಿದ್ದಾರೆ. ಅದೂ ಕೂಡಾ ಒಂದು ಬೈಕ್ ನಲ್ಲಿ ಎಂಬುದು ವಿಶೇಷ.
ಈ ದಂಪತಿ ಟೂರ್ ಗೆ ಹೊರಡುವ ಮುನ್ನ ಯಾವ ಯಾವ ದೇಶಗಳನ್ನು ಹೇಗೆ ಸುತ್ತಬೇಕು. ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಮ್ಯಾಪ್ ಸಿದ್ಧಪಡಿಸಿದ್ದರು. ಅದಕ್ಕಾಗಿ ಅಗತ್ಯವಿರುವ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿತ್ತು. ಆಹಾರ, ವಸತಿಯ ಸಮಸ್ಯೆಯಾಗದಂತೆ ಮೊದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಸೈಡ್ ಕಾರ್ ಹೊಂದಿರುವ 2014ರ ಮಾಡೆಲ್ ನ ಉರಾಲ್ ರೇಂಜರ್ ಬೈಕ್ ನಲ್ಲಿ ಈ ದಂಪತಿಗಳು ಈ ಪ್ರವಾಸ ಕೈಗೊಂಡಿದ್ದು, ಪ್ರವಾಸದ ಅವಧಿಯಲ್ಲಿ ಮಾರ್ಗ ಮಧ್ಯದಲ್ಲೇ ಟೆಂಟ್ ಹಾಕಿ ಅಡುಗೆಯನ್ನೂ ಮಾಡಿಕೊಳ್ಳುವುದು, ವಿವಿಧ ಪ್ರದೇಶಗಳಿಗೆ ತೆರಳುವುದು, ಫೋಟೋ ಕ್ಲಿಕ್ಕಿಸುವುದು, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಈ ಕುಟುಂಬ, ಎಂಜಾಯ್ ಮಾಡಿತ್ತು. ಅಲ್ಲದೇ ತಮ್ಮ ಬೈಕಿಗೆ ಪ್ರೀತಿಯಿಂದ `ಝೈರ್’ ಎಂಬ ಹೆಸರಿಟ್ಟಿದ್ದ ಇವರು ಮಾರ್ಗ ಮಧ್ಯದಲ್ಲೇ ಯಾವುದೇ ತೊಂದರೆಯೂ ಎದುರಾಗಲಿಲ್ಲವೆನ್ನುತ್ತಾರೆ. ಇವರುಗಳ ಪ್ರವಾಸದ ಒಂದಿಷ್ಟು ಚಿತ್ರಗಳು ನಿಮಗಾಗಿ ಇಲ್ಲಿವೆ ನೋಡಿ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!
ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!
ಈತ ಬರೋಬ್ಬರಿ 800ಕ್ಕೂ ಹೆಚ್ಚು ಮಕ್ಕಳ ತಂದೆ..! ಈತನ ದಾಖಲೆ ಕಂಡು ಕೌರವರೇ ಬೆಚ್ಚಿಬಿದ್ದರು..!
ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?
ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!