ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮತ್ತು ಚೌಕ ಚಿತ್ರದ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ ಬಿಡುಗಡೆಗೆ ಮುನ್ನವೇ ಸಖತ್ ಸದ್ದು ಮಾಡುತ್ತಿದ್ದು ಪೋಸ್ಟರ್ಗಳಿಂದ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇನ್ನು ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂಬ ಚರ್ಚೆ ಈಗಾಗಲೇ ಸಾಕಷ್ಟು ಬಾರಿ ನಡೆದಿತ್ತು. ಇನ್ನು ಈ ಚಿತ್ರಕ್ಕೆ ದರ್ಶನ್ ಅವರಿಗೆ ನಾಯಕಿಯಾಗಿ ಮೆಹ್ರೀನ್ ಅಥವಾ ಅನುಷ್ಕಾ ಶೆಟ್ಟಿ ಈ ಇಬ್ಬರಲ್ಲಿ ಒಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು.
ಆದರೆ ಇಂದು ಆ ಎಲ್ಲಾ ಸುದ್ದಿಗೆ ಬ್ರೇಕ್ ಬಿದ್ದಿದ್ದು ನಿಜವಾದ ನಾಯಕಿ ಯಾರು ಎಂಬುದನ್ನು ಚಿತ್ರ ತಂಡ ಹೊರಹಾಕಿದೆ. ತರುಣ್ ಸುಧೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಬರ್ಟ್ ಚಿತ್ರದ ನಾಯಕಿ ಯಾರು ಎಂಬುದನ್ನು ಘೋಷಣೆ ಮಾಡಿದ್ದು ಕನ್ನಡದ ಪ್ರತಿಭೆ ಆಶಾ ಭಟ್ ರಾಬರ್ಟ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಿಸ್ ಸೂಪರ್ ನ್ಯಾಷನಲ್ ಆಗಿರುವ ಆಶಾ ಭಟ್ ಅವರು ದರ್ಶನ್ ಅವರಿಗೆ ರಾಬರ್ಟ್ ನಲ್ಲಿ ನಾಯಕಿಯಾಗಲಿದ್ದಾರೆ.