445 ಕೋಟಿ ನಷ್ಟ ತುಂಬಿಕೊಡಿ ಎಂದು ಬಿಸಿಸಿಐ ನ ಕೇಳಿದ್ದ ಪಾಕ್ ಕ್ರಿಕೆಟ್ ಬೋರ್ಡ್ಗೆ ಐಸಿಸಿ ಕಡೆಯಿಂದ ಆಗಿದ್ದೇನು ಗೊತ್ತಾ..?

0
390

445 ಕೋಟಿ ನಷ್ಟ ತುಂಬಿಕೊಡಿ ಎಂದು ಬಿಸಿಸಿಐ ನ ಕೇಳಿದ್ದ ಪಾಕ್ ಕ್ರಿಕೆಟ್ ಬೋರ್ಡ್ ಐಸಿಸಿ ಕಡೆಯಿಂದ ಆಗಿದ್ದೇನು ಗೊತ್ತಾ..?

ಪಾಕ್ ಹಾಗೆ ಇಂಡಿಯಾ ಟೀಮ್ ಮುಖಾಮುಖಿಯಾದ್ರೆ ಅಲ್ಲಿ ಕ್ರಿಕೆಟ್ ವಾರ್ ಶುರುವಾದಂತೆ.. ಇಡೀ ಕ್ರಿಕೆಟ್ ಇತಿಹಾಸದಲ್ಲಿ ಬದ್ಧ ವೈರಿಗಳ ಕದನ ಅಂದ್ರೆ ಅದು ಈ ಎರಡು ಟೀಮ್ ಗಳದ್ದು.. ಈ ಹೈ ಓಲ್ಟೋಜ್ ಮ್ಯಾಚ್ ನಡೆದ್ರೆ ವಿಶ್ವದ ಎಲ್ಲ ಕ್ರಿಕೆಟ್ ಪ್ರೇಮಿಗಳ ಕಣ್ಣು ಈ ಇಬ್ಬರ ಪಂದ್ಯದ ಮೇಲೆ ಕೇಂದ್ರಿಕೃತವಾಗಿರುತ್ತೆ

ಹೀಗಾಗೆ ಇಂಡೋಪಾಕ್ ಮ್ಯಾಚ್ ಆಯೋಜಿಸಲು ಸ್ವತಃ ಪಾಕ್ ಕ್ರಿಕೆಟ್ ಬೋರ್ಡ್ ತಯಾರಿನ್ನ ನಡೆಸುತ್ತಿದೆ.. ಆದರೆ ಮುಂಬೈ ಬಾಂಬ್ ಸ್ಫೋಟದ ನಂತರ ಭಾರತ ಪಾಕ್ ಜೊತೆಗೆ ಸರಣಿಯನ್ನ ಆಯೋಜಿಸಲು ನಿರಾಕಿಸಿದೆ.. ಇದೇ ಕಾರಣವನ್ನ ಮುಂದಿಟ್ಟುಕೊಂಡ ಪಾಕ್ ಕ್ರಿಕೆಟ್ ಬೋರ್ಡ್ ಅಂತರಾಷ್ಟ್ರೀಯ ಕ್ರಿಕೆಟ್ ಬೋರ್ಡ್ (ಐಸಿಸಿ)ಯ ಬಳಿ ವಾದವನ್ನ ಮಂಡಿಸಿತ್ತು

ಈ ಹಿಂದಿನ ಒಪ್ಪಂದಂತೆ 2014 ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಆರು ಉಭಯ ಸರಣಿಯನ್ನ ನಿಗದಿ ಪಡೆಸಿತ್ತು.. ಆದರೆ, ಮುಂಬೈ ನಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಪಾಕ್ ಜೊತೆಗೆ ಕ್ರಿಕೆಟ್ ಆಯೋಜಿಸಲು ನಿಷೇಧ ಹೇರಲಾಗಿತ್ತು.. ಈ ವಿಚಾರವಾಗಿ ನಿಯಮ ಉಲ್ಲಂಘಿಸಿರುವ ಬಿಸಿಸಿಐ ತನಗೆ ಆಗಿರುವ ನಷ್ಟ 447 ಕೋಟಿಯನ್ನ ಕಟ್ಟಿಕೊಡುವಂತೆ ವಾದವನ್ನ ಮಂಡಿಸಿತ್ತು..

ಈ ಬಗ್ಗೆ ವಿಚಾರಣೆ ನಡೆಸಿದ ಐಸಿಸಿ ತನ್ನ ಅಂತಿಮ ತೀರ್ಪನ್ನ ನೀಡಿದ್ದು, ಪಾಕ್ ಕ್ರಿಕೆಟ್ ಬೋರ್ಡ್ ಗೆ ಮುಖಭಂಗವಾಗಿದೆ.. ಕೇಂದ್ರ ಸರ್ಕಾರ ಅನುಮತಿಯನ್ನ ನೀಡುವವರೆಗೂ ಪಾಕ್ ಜೊತೆಗೆ ಯಾವುದೇ ಸರಣಿಯನ್ನ ಆಯೋಜಿಸದಿರಲು ಬಿಸಿಸಿಐ ತೀರ್ಮಾನಿಸಿದೆ..

LEAVE A REPLY

Please enter your comment!
Please enter your name here