ವಿಕ್ರಾಂತ್ ರೋಣ.. ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ಹಾರಿಸಿದ ಕೀರ್ತಿ ಈ ಚಿತ್ರತಂಡಕ್ಕೆ ಸಲ್ಲುತ್ತದೆ. ಹೌದು ಕಿಚ್ಚ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷಗಳ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ವಿಕ್ರಾಂತ್ ರೋಣ ಟೈಟಲ್ ಲೋಗೋ ಲಾಂಚ್ ಕಾರ್ಯಕ್ರಮವನ್ನು ಬುರ್ಜ್ ಖಲೀಫಾ ಮೇಲೆ ಹಮ್ಮಿಕೊಳ್ಳಲಾಗಿತ್ತು.
ಹೀಗೆ ಲೋಗೋ ಟೀಸರ್ ಲಾಂಚ್ ಮಾಡುವ ವೇಳೆ ವಿಕ್ರಾಂತ್ ರೋಣ ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು 6 ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂಬ ವಿಷಯ ಹೊರಬಿದ್ದಿತು.
ಕನ್ನಡ , ತೆಲುಗು , ತಮಿಳು, ಮಲಯಾಳಂ , ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ವಿಕ್ರಾಂತ್ ರೋಣ ತೆರೆಗೆ ಬರಲಿದೆ. ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ವಿಕ್ರಾಂತ್ ರೋಣ ತೆರೆಗೆ ಬರಲಿದ್ದು ಇದೊಂದು ದೊಡ್ಡ ಮಟ್ಟದ ಬಿಡುಗಡೆ ಆಗಲಿದೆ. ಬಿಡುಗಡೆಗೂ ಮುನ್ನವೇ ಇಷ್ಟೊಂದು ಸದ್ದು ಮತ್ತು ದಾಖಲೆಯನ್ನ ಮಾಡುತ್ತಿರುವ ವಿಕ್ರಾಂತ್ ರೋಣ ಬಿಡುಗಡೆಯಾದ ನಂತರ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಾನೋ ಕಾದು ನೋಡಬೇಕು..