ತಂಡದಲ್ಲಿ ಶಿಸ್ತು ಕಾಪಾಡಲು ಕುಂಬ್ಳೆಯವರ ಹೊಸ ತಂತ್ರ – ಬಸ್ ಹತ್ತಲು ತಡ ಮಾಡಿದಲ್ಲಿ 50$ ದಂಡ

Date:

ಟೀಮ್ ಇಂಡಿಯಾದ ಹೊಸ ಕೋಚ್ ಆಗಿರೋ ಅನಿಲ್ ಕುಂಬ್ಳೆಯವರು ತನ್ನ ತಂಡದವರಿಗಾಗಿ ಹೊಸ ತಂತ್ರವೊಂದನ್ನು ರೂಪಿಸಿದ್ದಾರೆ.ಅವರ ಪ್ರಕಾರ ಬಸ್ ಹತ್ತಲು ಯಾರು ತಡ ಮಾಡುತ್ತಾರೋ,ಅವರು 50$ ದಂಡ ಕೊಡಲು ತಯಾರಿರಬೇಕು ಎಂಬುದಾಗಿದೆ.ತಂಡದಲ್ಲಿ ಸಮಯದ ಮಹತ್ವ ಹಾಗೂ ಶಿಸ್ತನ್ನು ಕಾಪಾಡಲು ಕುಂಬ್ಳೆಯವರು ಈ ತಂತ್ರವನ್ನು ಪ್ರಯೋಗಿಸಿದ್ದಾರೆ.ಇದಲ್ಲದೆ,ಅವರು ತೆಗೆದುಕೊಂಡ ಇನ್ನೊಂದು ನಿರ್ಧಾರವೇನೆಂದರೆ,ಪ್ರತೀ ನಾಲ್ಕು ದಿನಗಳಿಗೊಮ್ಮೆ ತಂಡದ ಜೊತೆಗೆ ಅವರು ಒಂದು ಅಫೀಷಿಯಲ್ ಮೀಟಿಂಗ್ ಕರೆಯುತ್ತಾರೆ ಹಾಗೂ ಇದ್ರಲ್ಲಿ ತಂಡದ ಪ್ರತೀ ಆಟಗಾರನ ಉಪಸ್ಥಿತಿ ಇರಲೇಬೇಕು ಎಂದೂ ಅವರು ನುಡಿದಿದ್ದಾರೆ.ವೆಸ್ಟ್ ಇಂಡೀಸ್ ನ ಟೂರ್ ನಲ್ಲಿದೆ ನಮ್ಮ ತಂಡ…

ವೆಸ್ಟ್ ಇಂಡೀಸ್ ಗೆ ಟೀಮ್ ಇಂಡಿಯಾದ ಜೊತೆಗೆ ಬಂದಿರೋ ಕುಂಬ್ಳೆಯು ಮಂಗಳವಾರವೇ ಮೀಟಿಂಗ್ ಆಯೋಜಿಸಿದ್ರು ಅಲ್ಲದೆ,ಮೀಟಿಂಗ್ ಗೆ ಅವರು ಸ್ಪೋರ್ಟ್ಸ್ ಸ್ಟಾಫ್ ನ್ನೂ ಆಹ್ವಾನಿಸಿದ್ರು.

ಕುಂಬ್ಳೆಯವರ ಮಾಹಿತಿಯನ್ವಯ ಅವರು ಪ್ರತೀ ನಾಲ್ಕು ದಿನಗಳಿಗೊಮ್ಮೆ ಮೀಟಿಂಗ್ ಆಯೋಜಿಸಲಿದ್ದು,ಇದರ ನಡುವೆ ಯಾವುದೇ ಪ್ಲೇಯರ್ ತಾನೂ ಮಾತಾಡಬೇಕು ಎಂದು ಇಚ್ಛಿಸಿದಲ್ಲಿ,ಅವರು ಆ ಪ್ಲೇಯರ್ ಜೊತೆಗೆ ಒನ್-ಟೂ-ಒನ್ ಮೀಟಿಂಗ್ ಗೆ ಅವಕಾಶ ಕೊಡುತ್ತಾರಂತೆ.

ವೆಸ್ಟ್ ಇಂಡೀಸ್ನಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನಲಾಗುತ್ತಿದೆ.ಕುಂಬ್ಳೆಯವರು ಬಯಸುವುದೇನೆಂದರೆ ಆಟಗಾರರಿಗೆ ತನ್ನದೇ ಆದ ಸ್ವಾತಂತ್ರ್ಯ ವಿರಬೇಕು,ಆದ್ರೆ ಅವರು ಶಿಸ್ಥಿನ ಬಗ್ಗೆನೂ ಅರ್ಥ ಮಾಡಿಕೊಳ್ಳಬೇಕು.ಟೀಮ್ ನಲ್ಲಿ ಒಳ್ಳೆಯ ವಾತಾವರಣವನ್ನುಂಟು ಮಾಡಲು ಅವರು ಪ್ಲೇಯರ್ಸ್ ಗಳನ್ನು ಸ್ಕೂಬಾ ಡೈವಿಂಗ್ ಗೂ ಕರೆದೊಯ್ಯುತ್ತಿದ್ದಾರೆ ಎನ್ನಲಾಗುತ್ತಿದೆ.

ಕುಂಬ್ಳೆಯವರು ಹೊಸ ಹೊಸ ಯೋಜನೆಯನ್ವಯ ನಡೆಯುತ್ತಿದ್ದಾರೆ.ವೆಸ್ಟ್ ಇಂಡೀಸ್ ಕಡೆಗೆ ಪ್ರಯಾಣ ಹೊರಡೋ ಮೊದಲು ಕುಂಬ್ಳೆಯು ಬೆಂಗಳೂರಿನಲ್ಲಿ ಒಂದು ಹೊಸ ಯೋಜನೆಯನ್ನು ತಯಾರು ಮಾಡಿದ್ರು.ಈ ಯೋಜನೆಯು 2001 ರಲ್ಲಿ ಕೋಚ್ ಆಗಿದ್ದ ಜೋನ್ ರೈಟ್ ನ ಯೋಜನೆ ಯ ಒಂದು ಭಾಗವಾಗಿದೆ.ಇದರ ಪ್ರಕಾರ,ಎರಡೆರಡು ಕ್ರಿಕೆಟರ್ಸ್ ಗಳ ಜೋಡಿ ಮಾಡಲಾಗುತ್ತದೆ,ಇದರಿಂದ ಅವರು ಒಟ್ಟಿಗೆ ಇರುವಂತೆ ಆಗುವುದಲ್ಲದೆ,ಪರಸ್ಪರ ಮಾತುಕತೆ,ವಿಚಾರ ವಿನಿಮಯಗಳ ಜೊತೆಗೆ ಪರಸ್ಪರ ಸಹಾಯಕ್ಕಾಗಿ ಫೀಡ್ ಬ್ಯಾಕ್ ಕೊಡಬೇಕಾಗುತ್ತದೆ.

ಕುಂಬ್ಳೆಯು ಚೇತೇಶ್ವರ್ ಪೂಜಾರಾ ಹಾಗೂ ಅಮಿತ್ ಶರ್ಮಾ ಜೋಡಿ ವಿರಾಟ್ ಕೊಹ್ಲಿ ಹಾಗೂ ಭುವನೇಶ್ವರ್ ಜೋಡಿ ಮತ್ತು ಸ್ಟುವರ್ಟ್ ಬಿನ್ನಿ ಹಾಗೂ ರೋಹಿತ್ ಶರ್ಮಾ ಜೋಡಿಯನ್ನು ತಯಾರು ಮಾಡಿದ್ದಾರೆ.

ಈ ಕ್ಯಾಂಪ್ ನಲ್ಲಿ ಕ್ರಿಕೆಟ್ ಬೋರ್ಡ್ ಆಟಗಾರರಿಗೆ ಮುಂದಿನ ತಿಂಗಳಿನ ಶೆಡ್ಯೂಲ್ ಬಗ್ಗೆ ಪೂರ್ಣ ಮಾಹಿತಿ ನೀಡಿಲ್ಲ ಹಾಗೂ ಇದರಿಂದ ಅವರ ವೈಯಕ್ತಿಕ ಕೆಲಸಗಳಿಗೆ ತೊಂದರೆಯುಂಟಾಗುತ್ತದೆ ಎಂದು ಟೀಮ್ ಮೆಂಬರ್ಸ್ ಕುಂಬ್ಳೆಯವರ ಬಳಿ ದೂರು ನೀಡಿದ್ದಾರೆ.ಇದಲ್ಲದೆ,ಅವ್ರು ದೊಡ್ದ ಟೂರ್ನಮೆಂಟ್ ನ ಆಸು ಪಾಸಿನಲ್ಲೇ ಯಾಕೆ I.P.L ಪಂದ್ಯಗಳನ್ನು ಏರ್ಪಡಿಸಲಾಗುತ್ತದೆ ಎಂದೂ ತನ್ನ ತೊಂದರೆಯನ್ನು ಕುಂಬ್ಳೆಯವರ ಬಳಿ ಹೇಳಿಕೊಂಡಿದ್ದಾರೆ.

ಕಠಿಣ ಪರಿಸ್ಥಿತಿಗಳಲ್ಲಿ ಪಂದ್ಯವನ್ನು ಹೇಗೆ ತಮ್ಮದಾಗಿಸಿಕೊಳ್ಳಬೇಕೆಂದು ಕುಂಬ್ಳೆಯವರು ಆಟಗಾರರಿಗೆ ಹೇಳಿಕೊಡುತ್ತಾರೆ ಎಂದು ಸಚಿನ್ ತೆಂಡೂಲ್ಕರ್ ಹೇಳುತ್ತಾರೆ.

ಸಚಿನ್ ಹೇಳೋ ಪ್ರಕಾರ ಕುಂಬ್ಳೆಯು ಒಬ್ಬ ಅತ್ಯುತ್ತಮ ಆಟಗಾರ.ಅವರೊಬ್ಬ ಕಠಿಣ ಪ್ರತಿಸ್ಪರ್ಧಿಯಾಗಿದ್ದು,ಮೈದಾನದಲ್ಲಿ ಯಾವುದೇ ವಿಧವಾದ ಒಪ್ಪಂದವನ್ನೂ ಮಾಡಲಾರರು.ಪ್ರತೀ ಕ್ಷಣ ಗೆಲುವಿಗಾಗಿ ಅವರು ಹೋರಾಡುತ್ತಾರೆ.ಇದನ್ನು ಸಾಬೀತು ಪಡಿಸಲು ಅನಿಲ್ ಬಳಿ ಬೇಕಾದಷ್ಟು ಜ್ನಾನವಿದೆ,ಅದೆಲ್ಲವನ್ನೂ ಅವರು ತನ್ನ 20  ವರುಷದ ಈ ಕ್ರಿಕೆಟ್ ಪಯಣದಲ್ಲಿ ಆಟವಾಡುತ್ತಾ ಕಲಿತಿದ್ದಾರೆ.

ಮ್ಯಾಚ್ ನಲ್ಲಿ ಹಲವು ಅವಕಾಶಗಳು ನಮಗೆ ಲಭಿಸುತ್ತವೆ,ಆದ್ರೆ ಈ ಅವಕಾಶಗಳನ್ನು ನಾವು ಹೇಗೆ ಉಪಯೋಗಿಸಬೇಕೆಂಬುದು ತುಂಬಾ ಮಹತ್ತರವಾದ ವಿಚಾರ.ನಾವು ಅದೆಷ್ಟೋ ವಿಧವಾದ ಸ್ಟ್ರೇಟಜಿ ಮಾಡುತ್ತೇವೆ,ಆದ್ರೆ ಅದರಲ್ಲಿ ನಾವು ಹೇಗೆ ನಮ್ಮನ್ನು ಸಾಬೀತು ಪಡಿಸುತ್ತೇವೊ ಅದು ಮುಖ್ಯ.ಪಂದ್ಯಗಳಿಂದ ನಮಗೆ ಅದೆಷ್ಟೋ ವಿಷ್ಯಗಳನ್ನು ತಿಳಿಯುವಂತಾಗುತ್ತದೆ,ಪ್ರತೀ ದಿನ ನಿಮಗೆ ಜಯ ಸಿಗಲಾರದು,ಕೆಲವೊಮ್ಮೆ ನಿಮಗೆ ಸೋಲನ್ನೂ ಎದುರಿಸಬೇಕಾಗುತ್ತದೆ.ಎಂದೂ ಸಚಿನ್ ಹೇಳಿದರು

ವೆಸ್ಟ್ ಇಂಡೀಸ್ ನಲ್ಲಿ ನಮ್ಮ ಟೀಮ್ ಇಂಡಿಯಾದ ಶೆಡ್ಯೂಲ್ ಈ ರೀತಿಯಾಗಿದೆ.

ಟೀಮ್ ಇಂಡಿಯಾವು ತನ್ನ 49 ದಿನಗಳ ಈ ಟೂರ್ ನಲ್ಲಿ 2 Practice match ಹಾಗೂ 4 Test match ಆಡುತ್ತಿದೆ.

ವಾರ್ನರ್ ಪಾರ್ಕ್ ನಲ್ಲಿ 14 -16 ಜುಲೈ ತನಕ ಮೂರು ದಿನಗಳ ಪ್ರಾಕ್ಟೀಸ್ ಮ್ಯಾಚ್ ಆಡಲಾಗುತ್ತಿದೆ.

B.C.C.I ಪ್ರಕಾರ,ಸರ್ ವೀವ್ ರಿಚರ್ಡ್ ಸ್ಟೇಡಿಯಂ ನಲ್ಲಿ 21 ಜುಲೈಯಿಂದ ಮೊದಲ ಟೆಸ್ಟ್ ಹಾಗೂ ಎರಡನೇಯ ಟೆಸ್ಟ್ ನ್ನು ಜಮೈಕಾದ ಸಬೀನಾ ಪಾರ್ಕ್ ನಲ್ಲಿ 30 ಜುಲೈಯಿಂದ ನಡೆಯುತ್ತದೆ.

ಆ ಬಳಿಕ ಮೂರನೇಯ ಟೆಸ್ಟ್ ಗಾಗಿ ತಂಡವು ಸೈಂಟ್ ಲೂಸಿಯಾಗೆ ತೆರಳುವುದು.ಇಲ್ಲಿನ ಡೆರೇನ್ ಸೈಮಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ 9 ಆಗಸ್ಟ್ ನಿಂದ ಮ್ಯಾಚ್ ನಡೆಯುತ್ತದೆ.

ಸೀರೀಸ್ ನ ಕೊನೇಯ ಟೆಸ್ಟ್ 18 ಆಗಸ್ಟ್ ನಿಂದ ತ್ರಿನಿದಾದ್ ನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆಯುವುದು.ತಂಡವು 23  ಆಗಸ್ಟ್ ನಂತರ ನಮ್ಮ ದೇಶಕ್ಕೆ ಹಿಂತಿರುಗುತ್ತದೆ.

  • ಸ್ವರ್ಣಲತ ಭಟ್

POPULAR  STORIES :

ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

 

 

 

 

 

 

 

 

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...