60 ವರ್ಷದ ವ್ಯಕ್ತಿಯನ್ನು ಮದುವೆಯಾಗಿ ಆಕೆ ಏನ್ ಮಾಡಿದ್ಲು‌ ಗೊತ್ತಾ?

Date:

ಇದು‌ ಇಂದೋರ್ ನಲ್ಲಿ ನಡೆದಿರೋ ಘಟನೆ. 60 ವರ್ಷದ ರೂಪ್ ದಾಸ್ ನಿವೃತ್ತ ಸರ್ಕಾರಿ‌ ಉದ್ಯೋಗಿ. ವಿದ್ಯುತ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು 1992ರಲ್ಲಿ‌ ಹೆಂಡ್ತಿಯನ್ನು ಕಳೆದುಕೊಂಡಿದ್ದರು. ಮಕ್ಕಳು‌ ಸಹ ಇಲ್ಲ. ಹೀಗಾಗಿ ನಿವೃತ್ತಿ ನಂತರ ಮದುವೆಯಾಗಲು ಡಿಸೈಡ್ ಮಾಡಿದ್ರು.


ಏಕಾಂಗಿ ಬದುಕು ಬೇಡವೆಂದು ಮದುವೆಗೆ ಮನಸ್ಸು ಮಾಡಿದ ರೂಪ್ ದಾಸ್ ಗೆ‌ ಅಶೋಕ್ ಕುಮಾರ್ ಎಂಬುವವರು ಪೂಜಾ ಎಂಬ ಮಹಿಳೆಯನ್ನು ಪರಿಚಯಿಸಿದ್ದಾರೆ. ಅಶೋಕ್ ಮಹಿಳೆ ಮತ್ತು ಆಕೆಯ ಹಿನ್ನೆಲೆ ಬಗ್ಗೆ ಪಾಸಿಟೀವ್ ಆಗಿ ಹೇಳಿದ್ರಿಂದ ರೂಪ್ ದಾಸ್ ಅದನ್ನು ನಂಬಿ 2017ರ ನವೆಂಬರ್ 22ರಂದು‌ ಪೂಜಾಳನ್ನು ದೇವಸ್ಥಾನದಲ್ಲಿ‌ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದರು. ಮದುವೆಯಾದ ಆರು‌ ದಿನಕ್ಕೆ ಅಂದ್ರೆ ನವೆಂಬರ್ 29 ರಂದು ಪೂಜಾ ಪರಾರಿಯಾಗಿದ್ದಾಳೆ…!


ರೂಪ್ ದಾಸ್ ಎರಡನೇ ಮಹಡಿಯನ್ನು ಸ್ವಚ್ಛ ಮಾಡುವಾಗ ಸಹಾಯಕ್ಕೆ ಎಂದು ಪೂಜಾಳನ್ನು ಕರೆದರೂ ಆಕೆ ಬರಲಿಲ್ಲ. ಎಷ್ಟು ಕೂಗಿ‌ ಕರೆದರು ಆಕೆಯ ಸದ್ದೇ ಬರದೇ ಇದ್ದಾಗ ರೂಪ್ ದಾಸ್ ಕೆಳಗೆ‌ ಬಂದು ನೋಡಿದ್ರೆ ತಿಜೋರಿ ಬಾಗಿಲು ತೆರೆದಿತ್ತು. ಮೂರು ಲಕ್ಷ ರೂ ನಗದು, ಚಿನ್ನ , ಬೆಳ್ಳಿ ಆಭರಣದೊಂದಿಗೆ ಪೂಜಾ ಪರಾರಿ ಆಗಿದ್ದಳು.


ಈ ಬಗ್ಗೆ ರೂಪ್ ದಾಸ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ರೂಪ್ ದಾಸ್ ಗೆ ಪೂಜಾಳನ್ನು ಭೇಟಿ ಮಾಡಿಸಿದ ಅಶೋಕ್ ಕುಮಾರ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಿದ್ರು. ಆಗ ಅವರು ನನಗೆ ಆಕೆ ವಿಳಾಸ ಗೊತ್ತಿಲ್ಲ, ಮೊಬೈಲ್ ನಂಬರ್ ಮಾತ್ರ ಇದೆ ಎಂದರು. ಅಶೋಕ್ ಮೊಬೈಲ್ ನಿಂದ ಅವರ ಹೆಂಡತಿ ಮೂಲಕ ಪೂಜಾಗೆ ಕರೆ ಮಾಡಿಸಿದ್ರು. ಪೊಲೀಸರು ಹೇಳಿದಂತೆ ಅಶೋಕ್ ಹೆಂಡ್ತಿ , ಅಶೋಕ್ ಗೆ ಆರೋಗ್ಯ ಸರಿ ಇಲ್ಲ ಎಂದು ಮನೆಗೆ ಕರೆಸಿದ್ದಾರೆ. ಆಗ ಪೊಲೀಸರು ಪೂಜಾಳನ್ನು‌ ಬಂಧಿಸಿದ್ದಾರೆ.
ಹೀಗೆ‌45 ದಿನದ ಬಳಿಕ ಪೂಜಾ ಪೊಲೀಸರ ಬಲೆಗೆ‌ಬಿದ್ದಿದ್ದು, ಅಶೋಕ್ ಮತ್ತು ಪೂಜಾ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...