ಭಯದ ಭಕ್ತಿ

0
206

ಬೆರಳೆಣಿಕೆಯ ಬರಹವಿದು
ಬರೆದಷ್ಟು ಮುಗಿಯದಿದು
ಬರಡಾದ ಜೀವದಲಿ
ಹೊಸ ಹುರುಪಿನ ಚಿಗುರು ಇದು
ದೂರದೂರಿನ ಚಂದಿರನ ಹಸ್ತವ
ಧರಣಿಗೆ ಹಿಡಿದಾಗ
ನೂರೆಂಟು ಮನದ ಉಬ್ಬರ ಇಳಿತವಿದು
ಅರಳಿ ಉರುಳುವ ಕಾಲದಿ
ಮನದಿ ಕೆರಳಿ ಮರಳಿದ
ಮೂರಕ್ಷರದ ಜ್ಞಾನವಿದು
ವೇದ ಶಾಸ್ತ್ರದ ಸೂತ್ರವಿಲ್ಲಿಲ್ಲ
ನೋವು-ನಲಿವಲಿ ತೇದಿಹ
ಬರಹಗಳೇ ಜೀವಂತ
ನಕ್ಷತ್ರಗಳ ಸೂರಿನಲಿ ಕುಂತು
ಮಳೆಯ ಹನಿಯ
ಮೈಗಂಟಿಸಿಕೊಂಡ ಮೈಯಿದು
ಏನೇ ಹೇಳಲಿ ಕಾವ್ಯದತ್ತ
ಮಾನವನ ಬೆತ್ತಲೆಯ ಬದುಕಲ್ಲಿ
ಕತ್ತಲೆಯು ಸುಳಿದಾಗ
ಸುತ್ತೆಲ್ಲಾ ಹುಡುಕಿ ತೆಗೆದ
ಬೆಂಕಿಯ ಕಿಡಿಯು
ಊರ ಬೆಳಗುವ ಬರದಿ
ಸಾವಿನ ಕತ್ತಲೂ ನರನ ಎದೆಯಲಿ
ಶಿವನ ನಾಮವ
ಪಾಡುವಂತೆ ಮಾಡಿಹುದು.
ಏನೀ ಜನುಮ ಅಂಜಿಕೆಯಲೇ
ಅಂತರಂಗವ ಶುದ್ಧಿಸುತಿಹುದು –
ಶಕ್ತಿಯ ಆರಾಧಿಸುತಿಹುದು.⭐
✍?ದತ್ತರಾಜ್ ಪಡುಕೋಣೆ

LEAVE A REPLY

Please enter your comment!
Please enter your name here