8 ತಿಂಗಳು ವೇತನ ನೀಡಿಲ್ಲ ಎಂಬ ಸುದ್ದಿ ಬಗ್ಗೆ BCCI ಹೇಳಿದ್ದೇನು?

Date:

ನವದೆಹಲಿ: ಮೇ 19ರಂದು BCCI ಭಾರತ ಮಹಿಳಾ ಕ್ರಿಕೆಟಿಗರ ವಾರ್ಷಿಕ ಒಪ್ಪಂದ ಪಟ್ಟಿ ಬಿಡುಗಡೆ ಮಾಡಿತ್ತು. ಯುವ ಆಟಗಾರ್ತಿಯರಾದ ರಿಚ ಘೋಷ್ ಮತ್ತು ಶೆಫಾಲಿ ವರ್ಮಾ ಸಿ ಗ್ರೇಡ್​ನಿಂದ ಬಿ ಗ್ರೇಡ್​ಗೆ ತೇರ್ಗಡೆಯಾಗಿದ್ದರು. ಆದರೆ, ಏಕ್ತ ಬಿಷ್ತ್, ವೇದಾ ಕೃಷ್ಣಮೂರ್ತಿ, ಅನುಜಾ ಪಾಟೀಲ್ ಮತ್ತು ಡಿ. ಹೇಮಲತಾ ಅವರ ಗುತ್ತಿಗೆಯಿಂದ ಹೊರ ಬಿದ್ದಿದ್ದರು.

ಆದರೆ, ಇಂಗ್ಲೆಂಡ್ ದಿನಪತ್ರಿಕೆಯೊಂದು BCCI ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ಆ ನಾಲ್ಕು ಆಟಗಾರ್ತಿಯರಿಗೆ 8 ತಿಂಗಳ ವೇತನ ನೀಡಿಲ್ಲ ಎಂದು ವರದಿ ಮಾಡಿತ್ತು. ಆದರೆ, ಬಿಸಿಸಿಐ ಈ ವರದಿಯನ್ನು ಅಲ್ಲಗಳೆದಿದ್ದು, ಒಪ್ಪಂದದಲ್ಲಿರುವ ಎಲ್ಲ ಆಟಗಾರ್ತಿಯರಿಗೂ ತಿಂಗಳ ವೇತನ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

” ಇದು ಸಂಪೂರ್ಣವಾಗಿ ಸುಳ್ಳು. ಪ್ರತಿಯೊಬ್ಬ ಕ್ರಿಕೆಟರ್​ಗೂ ಬಿಸಿಸಿಐನೊಂದಿಗಿನ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಒಪ್ಪಂದದ ಅವಧಿಗೆ 2020ಕ್ಕೆ ಕೊನೆಗೊಂಡಿದೆ. ಆ ಒಪ್ಪಂದದ ನಂತರದ 8 ತಿಂಗಳ ವೇತನವನ್ನು ನೀಡಲಾಗುವುದಿಲ್ಲ. ಏಕೆಂದರೆ ವಾರ್ಷಿಕ ಒಪ್ಪಂದದಲ್ಲಿ ಆ ನಾಲ್ವರು ಇರುವುದಿಲ್ಲ. ವರದಿ ಸಂಪೂರ್ಣ ತಪ್ಪಾಗಿದೆ” ಎಂದು ಬಿಸಿಸಿಐ ಅಧಿಕಾರಿ ಎಎನ್​ಐಗೆ ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಬಿಸಿಸಿಐ 2020ರ ಟಿ20 ವಿಶ್ವಕಪ್​ ಬಹುಮಾನ ಮೊತ್ತವನ್ನು ನೀಡಿಲ್ಲ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿತ್ತು. ಬಿಸಿಸಿಐ ಅಧಿಕಾರಿ ಈ ವರದಿಯನ್ನು ಅಲ್ಲೆಗೆಳೆದಿದ್ದಾರೆ.

ನಾವು ಕಷ್ಟದ ಸಮಯ ಮತ್ತು ನಾವೆಲ್ಲ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ನಾನು ಇಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ಬಹುಶಃ ನಮ್ಮ ಕಡೆಯಿಂದಲೂ ತಪ್ಪುಗಳಾಗಿರಬಹುದು. ಆದರೆ, ಭವಿಷ್ಯದಲ್ಲಿ ಯಾವುದೇ ದೋಷಗಳಿರುವುದಿಲ್ಲ ಎಂದು ವಿಶ್ವಾಸ ನೀಡುತ್ತೇನೆ. ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಮಹಿಳಾ ಕ್ರಿಕೆಟಿಗರಿಗೆ 2020ರ ಟಿ20 ವಿಶ್ವಕಪ್​ ರನ್ನರ್​ ಅಪ್ ಮೊತ್ತವನ್ನು ಇನ್ನೂ ನೀಡಿಲ್ಲ ಎಂಬುದು ವರದಿಯಾಗುತ್ತಿದ್ದಂತೆ BCCI ಸೋಮವಾರ ಎಲ್ಲಾ ಆಟಗಾರ್ತಿಯರಿಗೆ ಸಿಗಬೇಕಾದ ಮೊತ್ತವನ್ನು ತಲುಪಿಸಿತ್ತು. 3.5 ಕೋಟಿ ಬಹುಮಾನ ಮೊತ್ತವನ್ನು ಆಟಗಾರ್ತಿಯರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ವಿತರಿಸಲಾಗಿತ್ತು.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...