No menu items!
15 C
Munich
Sunday, April 19, 2026

ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ!

Must read

ಇತ್ತೀಚೆಗಷ್ಟೇ ಜಿಂಬಾಬ್ವೆ ತಂಡದ ಆಟಗಾರ ರ‍್ಯಾನ್ ಬರ್ಲ್‌ ಕ್ರಿಕೆಟ್ ಆಡಲು ಸರಿಯಾದ ಶೂ ಇಲ್ಲ, ಕಿತ್ತುಹೋದ ಶೂಗಳನ್ನು ಧರಿಸಿ ಕ್ರಿಕೆಟ್ ಆಡುತ್ತಿದ್ದೇವೆ, ಪ್ರತಿ ಸರಣಿ ಮುಗಿದ ನಂತರ ಕಿತ್ತುಹೋದ ಶೂಗಳನ್ನು ನಾವೇ ಅಂಟಿಸಿಕೊಳ್ಳುತ್ತಿದ್ದೇವೆ ಹಾಗೂ ಹೊಲಿದುಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡುವುದರ ಮೂಲಕ ಯಾರಾದರೂ ಶೂ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಿ ಎಂದು ಮನವಿಯನ್ನು ಮಾಡಿದ್ದರು.


ರ‍್ಯಾನ್ ಬರ್ಲ್‌ ಮಾಡಿದ ಈ ಟ್ವೀಟ್ ಮನವಿಗೆ 24 ಗಂಟೆಯೊಳಗೆ ಸ್ಪಂದಿಸಿದ ಪ್ರತಿಷ್ಠಿತ ಶೂ ಸಂಸ್ಥೆ ಪೂಮಾ ಜಿಂಬಾಬ್ವೆ ಆಟಗಾರರಿಗೆ ಉಚಿತ ಶೂಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆಯಿತು. ಈ ಮೂಲಕ ಶೂಗಳಿಲ್ಲದೆ ಕಷ್ಟಪಡುತ್ತಿದ್ದ ಜಿಂಬಾಬ್ವೆ ತಂಡಕ್ಕೆ ಹೊಚ್ಚಹೊಸ ಶೂಗಳು ಸಿಕ್ಕಂತಾಯಿತು. ಪೂಮಾ ಸಂಸ್ಥೆ ಮಾಡಿದ ಈ ಕೆಲಸಕ್ಕೆ ಜಿಂಬಾಬ್ವೆ ತಂಡದ ಆಟಗಾರರು ಸಂತೋಷವನ್ನು ವ್ಯಕ್ತಪಡಿಸಿದರು, ಹಾಗೂ ಟ್ವೀಟ್ ಮೂಲಕ ಮನವಿ ಮಾಡಿದ್ದ ರ‍್ಯಾನ್ ಬರ್ಲ್‌ ಬೇಡಿಕೆ ಈಡೇರಿತು.


ಆದರೆ ಇದೀಗ ಈ ಎಲ್ಲಾ ಚಟುವಟಿಕೆಗಳು ಮುಗಿದ ನಂತರ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರ‍್ಯಾನ್ ಬರ್ಲ್‌ನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆ. ರ‍್ಯಾನ್ ಬರ್ಲ್‌ ಶೂ ಪ್ರಾಯೋಜಕತ್ವ ಕೇಳಿ ಮಾಡಿದ್ದ ಟ್ವೀಟ್ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್‌ಗೆ ಮಾಡಿರುವ ಅವಮಾನ ಎಂದು ಹೇಳಲಾಗುತ್ತಿದ್ದು ಆತನ ವಿರುದ್ಧ ಕಠಿಣ ಕ್ರಮಕ್ಕೆ ಬೋರ್ಡ್ ಮುಂದಾಗಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ರ‍್ಯಾನ್ ಬರ್ಲ್‌ಗೆ ತಂಡದಲ್ಲಿ ಅವಕಾಶ ಸಿಗುವುದು ಅವಮಾನ ಎಂದು ಹೇಳಲಾಗುತ್ತಿದ್ದು ಟ್ವೀಟ್ ಮೂಲಕ ಕಷ್ಟವನ್ನು ಹಂಚಿಕೊಂಡು ಸಹಾಯ ಪಡೆದಿದ್ದ ರ‍್ಯಾನ್ ಬರ್ಲ್‌ ಸಂಕಷ್ಟಕ್ಕೆ ಒಳಗಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article