ಬಿಗ್‍ಬಾಸ್ ಸೀಸನ್-4ನಲ್ಲಿ ಸಖತ್ ಮಿಂಚ್ತಾ ಇರೋದು ಒಳ್ಳೆ ಹುಡ್ಗಾ ಪ್ರಥಮ್.. ಟಾಸ್ಕ್ ನಿಂದ ಹಿಡಿದು.. ಪ್ರತಿಭಟನೆವರೆಗೂ ಕೂಡ ದೊಡ್ಮನೇಲಿ ಪ್ರಥಮ್‍ನದ್ದೇ ಕಾರುಬಾರು.. ಈಗ ಇನ್ನೊಂದು ಸಿಹಿ ಸುದ್ದಿ ಅಂದ್ರೆ ಈ ವಾರದ ಮನೆಯ ನಾಯಕನೂ ಕೂಡ ಪ್ರಥಮ್ ಆಗ್ತಿಟ್ಟಿದ್ದಾನೆ. ಈ ಸುದ್ದಿ ಯಾರಿಗೆ ಅರಗಿಸಿಕೊಳ್ಳೋಕೆ ಆಗ್ತಾ ಇದಿಯೋ ಗೊತ್ತಿಲ್ಲ ಮೋಹನ್ ಅವರಿಗಂತೂ ಸಹಿಸ್ಕೊಳೋಕೆ ಆಗ್ತಾನೆ ಇಲ್ವಂತೆ..! ಬಿಗ್‍ಬಾಸ್-4ನ ಪ್ರಾರಂಭದ ದಿನಗಳಲ್ಲಿ ಮೋಹನ್ ಮಾತೇ ಪ್ರಥಮ್‍ಗೆ ವೇದವಾಕ್ಯ ಆಗಿತ್ತು..! ಆದ್ರೆ ಬರ್ತಾ ಬರ್ತಾ ಇವರಿಬ್ಬರ ನಡುವೆ ಅದೇನೋ ತುಸು ಕಿತ್ತಾಟ ಆಗಿರ್ಬೇಕು ಅನ್ಸತ್ತೆ..! ಪ್ರಥಮ್ ಅಂದ್ರೆ ಮೋಹನ್ ಅವ್ರು ಸ್ವಲ್ಪ ಗರಂ ಆಗ್ತಾರೆ..! ಅದನ್ನ ಮತ್ತೆ ಸಾಬೀತು ಪಡ್ಸಿದ್ದು ಪ್ರಥಮ್ ನಾಯಕ ಆದ್ಮೇಲೆ..! ಹತ್ತು ವಾರಗಳ ನಂತ್ರ ತನ್ನ ಜ್ಞಾನದ ಸಾಮರ್ಥ್ಯ ಹೊರ ಚೆಲ್ಲಿದ ಪ್ರಥಮ್, ಬಿಗ್‍ಬಾಸ್ ಈ ವಾರದ ನಾಯಕ ಪಟ್ಟಕ್ಕಾಗಿ ನೀಡಿದ್ದ ಟಾಸ್ಕ್ ಅತ್ಯುತ್ತಮ ಪ್ರದರ್ಶನ ನೀಡಿ ಈ ವಾರ ದೊಡ್ಮನೆ ಕ್ಯಾಪ್ಟನ್ ಆದ್ರು..! ಆದ್ರೆ ಮೋಹನ್‍ಗೆ ಯಾಕೋ ಇಷ್ಟ ಆಗಿಲ್ಲ ಅನ್ಸತ್ತೆ..!
ಪ್ರಥಮ್ ಕ್ಯಾಪ್ಟನ್ಸಿ ನನಗೆ ಅರಗಿಸಿಕೊಳ್ಳೊಕೆ ಆಗ್ತಾ ಇಲ್ಲ ಅದನ್ನು ಸಹಿಸ್ಕೊಳ್ಳೊ ಕರ್ಮ ನನಗಿಲ್ಲ ಎಂದು ಬೇಸರಗೊಂಡಿದ್ದಾರೆ.
ಕೆಲವೊಂದು ವಿಷಯದಲ್ಲಿ ನನಗೆ ತಡೆದುಕೊಳ್ಳೊಕೆ ಆಗ್ತಾ ಇಲ್ಲ. 10 ವಾರಗಳಿಂದ ನಾನು ಇಗ್ನೋರ್ ಮಾಡ್ಕೊಳ್ತಾನೆ ಬಂದಿದೀನಿ.. ಎಷ್ಟು ವಾರ ಅಂತ ಮಾಡಲಿ..! ಒಂದೇ ತರ ಇರೋಕೆ ನಂಗೂ ಆಗ್ತಾ ಇಲ್ಲ. ಪ್ರತೀ ಬಾರಿನೂ ನನ್ನ ಸಂಯಮ ಪರೀಕ್ಷೆ ಆಗ್ತಾನೆ ಇದೆ.. ನನ್ನ ಪ್ರತಿಭೆ ಪರೀಕ್ಷೆ, ನನ್ನ ಮೇಲೆ ಡೌಟು..! ಆದ್ರೆ ಪ್ರಥಮ್‍ಗೆ ಈ ಮನೇಲಿ ಯಾವ ರಿಸ್ಟ್ರಿಕ್ಷನ್ ಕೂಡ ಇಲ್ಲ..! ಅವ್ನು ಬಿಂದಾಸ್ ಆಗಿ ಇದಾನೆ..! ಅವನು ಬೇಕಾದ್ರೆ ಯಾರಿಗೆ ಏನು ಬೇಕಾದ್ರೂ ಹೇಳ್ಬೋದು.. ಹುಡ್ಗಿಗೆ ಡವ್ವು ಅಂತನಾದ್ರೂ ಹೇಳ್ಬೋದು..! ಇಲ್ವೋ ಒಬ್ಬನ್ನ ಅವಿವೇಕಿ ನೀನು ಅಂತಾನು ಹೇಳ್ಬೋದು..! ಅವನೇನೆ ಹೇಳುದ್ರೂ ಈ ಮನೇಲಿ ಯಾವ ರಿಸ್ಟ್ರಿಕ್ಷನ್ ಇಲ್ಲ..! ಅವೆಲ್ಲಾ ನಮೆಗೇಕೆ..? ಎಂದು ಮೋಹನ್ ಪ್ರಶ್ನೆ ಮಾಡಿದ್ರು. ಎಲ್ಲರತ್ರಾನು ಅನ್ನುಸ್ಕೊಂಡಿರೋ ಗತಿ ನನಗೆ ಬೇಡ.. ಐ ವಿಲ್ ಡಿಕ್ಲೇರ್ ಮೈಸೆಲ್ಫ್ ಆ್ಯಸ್
ಲೂಸರ್. ಈ ಆಟದಲ್ಲಿ ನಾನು ಸೋತೆ. ನನಗೆ ಆಗ್ತಾ ಇಲ್ಲ. ಎಲ್ಲಾ ಸಹಿಸ್ಕೊಂಡಿರೋಕೆ ನನಗೆ ಆಗ್ತಾ ಇಲ್ಲ. ಅದ್ರಲ್ಲೂ ಪ್ರಥಮ್ ವಿಷಯದಲ್ಲಂತೂ ನಾನೆ ಹೆಚ್ಚು ಸಹಿಸ್ಕೊಂಡಿರೋದು..! ಇನ್ನು ಎಷ್ಟು ಅಂತ ಆಗುತ್ತೆ ಎಂದು ಮೋಹನ್ ಬೇಸರಗೊಂಡಿದ್ದಾರೆ..!
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಪ್ರಥಮ್‍ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್‍ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ
ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್
ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!
ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?
ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?