ನೋಟ್ ಬ್ಯಾನ್ ನಂತ್ರ ಡಿಜಿಟಲ್ ಇಂಡಿಯಾದತ್ತ ಜನ ಮುಖ ಮಾಡಿ ನಿಂತಿದ್ದು, ಅದರ ವೇಗ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. ಈ ಹಿಂದೆ ಕೇವಲ ನೋಟಿನ ಮೂಲಕವೇ ವ್ಯವಹಾರ ನಡುಸ್ತಾ ಇದ್ದ ಜನ ಇದೀಗ ಕ್ಯಾಶ್‍ಲೆಸ್ ವ್ಯವಹಾರಕ್ಕೂ ಒಗ್ಗಿಕೊಂಡಿದ್ದಾರೆ. ಇದೇ ರೀತಿ ಕ್ಯಾಶ್‍ಲೆಸ್ ವ್ಯವಹಾರವನ್ನು ಇನ್ನು ಹೆಚ್ಚು ಹೆಚ್ಚು ಪ್ರಚುರ ಪಡಿಸಬೇಕು ಎಂಬ ನಿಟ್ಟಿನಲ್ಲಿ ಮೋದಿ ಯೋಜನಗೆ ಕೈಜೋಡಿಸಲು ಮುಂದಾಗಿರುವ ವಿಜಯಾ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ..! ಉಡುಪಿ ಜಿಲ್ಲೆಯ ಕುತ್ಯಾರು ಗ್ರಾಮ ಇದೀಗ ಡಿಜಿಟಲ್ ಗ್ರಾಮವಾಗಿ ಆಯ್ಕೆಯಾಗಿದೆ..! ಈ ಕುತ್ಯಾರು ಗ್ರಾಮದಲ್ಲಿ ಸದ್ಯಕ್ಕೆ ಇರೋದು ಒಂದೇ ಬ್ಯಾಂಕ್. ಆದ್ರೂ ಕೂಡ ಈ ಗ್ರಾಮ ಇನ್ಮುಂದೆ ಕ್ಯಾಶ್‍ಲೆಸ್ ಗ್ರಾಮ ಎಂಬ ಕೀರ್ತಿಗೆ ಪಾತ್ರವಾಗಲಿದೆ..! ಹೌದು ಈ ಗ್ರಾಮದಲ್ಲಿರುವ ವಿಜಯಾ ಬ್ಯಾಂಕ್ ಡಿಜಿಟಲ್ ಗ್ರಾಮ ಅನ್ನೋ ಹೊಸ ಯೋಜನೆ ಕೈಗೆತ್ತಿಕೊಂಡಿದ್ದು, ಜನವರಿ 26ರಿಂದ ಈ ಯೋಜನೆ ಕಾರ್ಯಾರಂಭಗೊಳ್ಳಲಿದೆ. ಇನ್ನು ದೇಶದಲ್ಲಿ ಒಟ್ಟು 100 ಗ್ರಾಮಗಳನ್ನು ಡಿಜಿಟಲ್ ಗ್ರಾಮವನ್ನಾಗಿ ಮಾಡುವ ಗುರಿ ಇಟ್ಕೊಂಡಿರೋ ವಿಜಯಾ ಬ್ಯಾಂಕ್ ತನ್ನ ಮೊದಲನೇ ಗ್ರಾಮವಾಗಿ ಉಡುಪಿಯ ಕುತ್ಯಾರ ಗ್ರಾಮವನ್ನ ಆಯ್ಕೆ ಮಾಡಿಕೊಂಡಿದೆ. ಕ್ಯಾಶ್‍ಲೆಸ್ ಯೋಜನೆ ಗುರಿ ಹೊಂದಿರುವ ಪ್ರಧಾನಿ ಮೋದಿ ಕನಸಿಗೆ ಕೈಜೋಡಿಸಿರುವ ವಿಜಯಾ ಬ್ಯಾಂಕ್ ಮೊದಲ ಕ್ಯಾಶ್‍ಲೆಸ್ ಗ್ರಾಮವನ್ನಾಗಿ ಮಾಡಲು ಕರಾವಳಿ ಪ್ರದೇಶವನ್ನೆ ಆಯ್ಕೆ ಮಾಡಿಕೊಂಡಿದ್ದು ಹೆಮ್ಮೆಯ ಸಂಗತಿ
ಏನಿರತ್ತೆ ಡಿಜಿಟಲ್ ಗ್ರಾಮದಲ್ಲಿ..?
ಪ್ರತಿಯೊಂದು ಮನೆಯ ಸದಸ್ಯನಿಗೂ ಬ್ಯಾಂಕ್ ಅಕೌಂಟ್
ಈ ಹಳ್ಳಿಯ ಪ್ರತಿ ಮನೆಗೂ 2 ಗಂಟೆ ಉಚಿತ ವೈ-ಫೈ ಸೇವೆ..!
ಮನೇಲೆ ಕೂತು ಬ್ಯಾಂಕ್ ವ್ಯವಹಾರ ಮಾಡುವ ವ್ಯವಸ್ಥೆ
ಸ್ವೈಪಿಂಗ್ ಮೆಷಿನ್ ಮೂಲಕವೇ ವ್ಯವಹಾರ
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..!
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!
ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!