ಲೋಧಾ ಶಿಫಾರಸ್ಸನ್ನು ಅಳವಡಿಕೊಳ್ಳಲು ಒಲ್ಲೆ ಎಂದ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಸಖತ್ ಬಿಸಿ ತೋರ್ಸಿದೆ. ಲೋಧಾ ಶಿಫಾರಸ್ಸನ್ನು ಅಂಗೀಕಾರ ಮಾಡಲು ನೀಡಿದ್ದ ಸಮಯ ಮೀರಿದ ಹಿನ್ನಲೆಯಲ್ಲಿ ಕೋರ್ಟ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಗೆ ಕೋಕ್ ನೀಡಿದೆ. ಹೀಗಾಗಿ ಈ ಕುರ್ಚಿ ಕಳೆದೆರಡು ದಿನಗಳಿಂದ ಖಾಲಿ ಉಳಿದಿದೆ. ಇನ್ನು ಅಧ್ಯಕ್ಷ ಪಟ್ಟಕ್ಕೆ ಈಗಾಗ್ಲೆ ಭಾರಿ ಚರ್ಚೆಗಳು ನಡೆಯುತ್ತಿದ್ದು, ಮಂಡಳಿ ಈ ಸ್ಥಾನಕ್ಕೆ ಸೂಕ್ತ ನಾಯಕರನ್ನು ಹುಡುಕ್ತಾ ಇದೆ. ಆದ್ರೆ ಗವಾಸ್ಕರ್ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕೊಲ್ಕತ್ತಾದ ದಾದಾ ಸೌರವ್ ಗಂಗೂಲಿಯೇ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ..! ಠಾಕೂರ್‍ನಿಂದ ತೆರವಾಗಿರುವ ಈ ಸ್ಥಾನಕ್ಕೆ ಗಂಗೂಲಿಯೇ ಸೂಕ್ತರು ಎಂದು ದಾದಾಗೆ ಬೆಂಬಲ ನೀಡ್ತಾ ಇದಾರೆ ಸುನೀಲ್ ಗವಾಸ್ಕರ್. ತನ್ನ ಮಾತನ್ನು ಇನ್ನಷ್ಟು ಸಮರ್ಥಿಸಿಕೊಂಡ ಸುನಿಲ್ ಗವಾಸ್ಕರ್ 1999ರ ವೇಳೆ ಭಾರತ ಕ್ರಿಕೇಟ್ ತಂಡ ಮ್ಯಾಚ್ ಫಿಕ್ಸಿಂಗ್ ಕಾರ್ಯದಲ್ಲಿ ಕೈಹಾಕಿತ್ತು. ಈ ಸನ್ನಿವೇಶದಲ್ಲಿ ಅಂದಿನ ಟೀಂ ಇಂಡಿಯಾ ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಗಂಗೂಲಿ ತನಗೆ ನೀಡಿದ ಜವಾಬ್ದಾರಿಯನ್ನು ತುಂಬಾ ಅದ್ಭುತವಾಗಿ ನಿರ್ವಹಿಸಿದ್ದಲ್ಲದೆ ಟೀಂ ಇಂಡಿಯಾಕ್ಕೆ ಓರ್ವ ದಕ್ಷ ನಾಯಕನಾಗಿ ಹೊರ ಹೊಮ್ಮಿದ್ರು. ಅದೇ ರೀತಿ ಈಗ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಏರಿದ್ದೇ ಆದಲ್ಲಿ ಮಂಡಳಿ ಕಳೆದುಕೊಂಡಿರುವ ವರ್ಚಸ್ಸನ್ನು ಗಂಗೂಲಿ ಮರಳಿ ತರೋದ್ರಲ್ಲಿ ಎರಡು ಮಾತಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?
ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!
ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!
ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!
ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story