ಬಸ್ ಕಂಡಕ್ಟರ್ "ಬಂಗಾರದ ಮನುಷ್ಯ"ನಾಗಿದ್ದು ಹೇಗೆ..?

Date:

ಮುಂದೆ ಗುರಿ ಇರಬೇಕು.., ಹಿಂದೆ ಗುರುವಿರಬೇಕೆಂದು ಹೇಳ್ತಾರೆ..! ಇದು ನಿಜ, ಗುರಿ ಸಾಧಿಸುವಲ್ಲಿ ಗುರುವಿನ ಮಾರ್ಗದರ್ಶನ ಬೇಕೇ ಬೇಕು..! ಆದ್ರೆ ಇವತ್ತು ಗುರಿಯಿದ್ದವರಿಗೆಲ್ಲಾ ಆ ದಾರಿಯಲ್ಲಿ ನಡೆಸಲು ಗುರು ಇರಲ್ಲ..! ಗುರು ದುಬಾರಿಯೂ ಆಗಿದ್ದಾರೆ..! ಆದ್ರಿಂದ ಬಡವರು ಗುರುವಿಲ್ಲದೇ ಗುರಿ ಮುಟ್ಟುಲೇ ಬೇಕು..! ಗುರು ಬೇಕೆಂದು ಕುಳಿತರೆ ಗುರುವೂ ಸಿಗಲ್ಲ, ಗುರಿಯೂ ಮುಟ್ಟಲ್ಲ..! ಆದ್ದರಿಂದ ಗುರಿ ಮುಟ್ಟುವ ಛಲವಿದ್ದರೆ ಗುರುವಿಲ್ಲದೇನೇ ಸತತ ಪರಿಶ್ರಮದಿಂದ ಗುರಿ ಮುಟ್ಟಿಯೇ ಮುಟ್ಟಬಹುದು..! ಇದೆಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ “ಅಬಾಸಾಹೆಬ್”..!
ಈ ಗಾಯಕ್ವಾಡ್ ಯಾರು..? ಇವರಿಟ್ಟುಕೊಂಡಿದ್ದ ಗುರಿಯಾದ್ರೂ ಏನು..? ಅದನ್ನ ತಲುಪಲು ಏನೆಲ್ಲಾ ಕಷ್ಟಪಡ್ತಾರೆ..? ಅನ್ನೋದನ್ನ ನಿಮಗೇ ಹೇಳ್ಲೇ ಬೇಕು..! ಕೇಳಿದ ಮೇಲೆ ನೀವು ಇವರಿಗೊಂದು ಸಲಾಂ ಹೇಳೇ ಹೇಳ್ತೀರಾ..! ಹಂಗಾದ್ರೆ ಬನ್ನಿ ಇವರ ಬಗ್ಗೆ ನೋಡಿಕೊಂಡು ಬರೋಣ..!
“ಅಬಾಸಾಹೆಬ್” ಒಬ್ಬ ಸಾಮಾನ್ಯ ಬಸ್ ಕಂಡೆಕ್ಟರ್..! ಮಹಾರಾಷ್ಟ್ರದ ಸಾಂಗ್ಲಿಯ ಶೆತ್ಜಾಲ್ ಹಳ್ಳಿಯವರು..! ಇವರೊಬ್ಬ ಬಸ್ ಕಂಡಕ್ಟರ್ ಮಾತ್ರವಲ್ಲ ರಾಜ್ಯ ಮತ್ತು ರಾಷ್ಟ್ರಮಟ್ಟದ ಅಥ್ಲೀಟ್..! 2013ರಲ್ಲಿ ಇಟಲಿಯಲ್ಲಿ ನಡೆದ ಟೊರಿನೋ ಅಂತರಾಷ್ಟ್ರೀಯ ಮಾಸ್ಟರ್ ಗೇಮ್ ನಲ್ಲಿ “ಡಿಸ್ಕಸ್ ಥ್ರೋ” ಮತ್ತು “ಜಾವ್ಲಿನ್” ನಲ್ಲಿ ಬಂಗಾರದ ಪದಕ ಗೆದ್ದಿದ್ದರು..! ಈಗ ಮತ್ತೊಮ್ಮೆ ಅಡಿಲೇಡ್ ನಲ್ಲಿ ನಡೆದ ಆಸ್ಟ್ರೇಲಿಯನ್ ಮಾಸ್ಟರ್ ಗೇಮ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ..! 30-65 ವಯೋಮಿತಿಯ “ಶಾಟ್ಪುಟ್”, “ಡಿಸ್ಕಸ್ ಥ್ರೋ”, ಮತ್ತು “ಹ್ಯಾಮರ್ ಥ್ರೋ” ನಲ್ಲಿ ಆಸ್ಟ್ರೇಲಿಯನ್ನರೂ ಸೇರಿದಂತೆ ಏಳು ದೇಶದ ಆಟಗಾರರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ…! ಇವರು ಚಿನ್ನ ಗೆದ್ದಿದ್ದು ವಿಶೇಷ ಅಲ್ದೇ ಇರ್ಬಹುದು ಅಥವಾ ಕೆಲವರ ಕಣ್ಣಿಗೆ ಸಾಧನೆಯಾಗಿ ಕಾಣದಿರಬಹುದು..! ಆದ್ರೆ ಈ ಚಿನ್ನ ಗೆದ್ದಿದ್ದು ಯಾವುದೇ ಕೋಚ್ ಅಥವಾ ತರಬೇತಿ ಇಲ್ಲದೆ..! ಆಸ್ಟ್ರೇಲಿಯಾ ಪ್ರವಾಸ ಹೊರಡುವಾಗಲೂ ಪಟ್ಟ ಕಷ್ಟ ಅಷ್ಟಿಷ್ಟಲ್ಲ..! ಸ್ನೇಹಿತರು ಮತ್ತು ಸಹೋದ್ಯೋಗೊಗಳಿಂದ ಹಣ ಪಡೆದು, ದಿನಾ ಬೆಳಿಗ್ಗೆ ಅಭ್ಯಾಸ ನಡೆಸಿ, ಕೆಲಸಕ್ಕೂ ಹೋಗಿ ಬರುತ್ತಾ.., ಮಾಸ್ಟರ್ ಗೇಮ್ ಆರಂಭವಾಗುವ ಹೊತ್ತಲ್ಲಿ ರಜೆ ಹಾಕಿ, ಆಸ್ಟ್ರೇಲಿಯಾಕ್ಕೆ ಹೋಗಿ “ಬಂಗಾರ ಮನುಷ್ಯ”ನಾಗಿದ್ದಾರೆ..!
ನೋಡಿದ್ರಾ ಗುರಿ ಇದ್ದರೆ, ಕಷ್ಟಪಟ್ಟರೆ, ಏನನ್ನು ಬೇಕಾದ್ರೂ ಸಾಧಿಸಬಹುದು..! ಮನಸ್ಸಿದ್ದರೇ ಮಾರ್ಗ..! ಗುರು ಇದ್ದರೂ ಸೋಲಿನ ಪರಿಪಾಠ ಮಾಡಿಕೊಂಡಿರುವ ನಮ್ಮ ಕ್ರಿಕೇಟಿಗರ ಮುಂದೆ, ಅವಕಾಶ ಸಿಕ್ಕರೂ ಬಳಸಿ ಕೊಳ್ಳದವರ ನಡುವೆ ನಿಜಕ್ಕೂ “ಅಬಾಸಾಹೆಬ್” ಮಾದರಿಯಾಗಿ ನಿಲ್ತಾರೆ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...