No menu items!
12.4 C
Munich
Wednesday, April 29, 2026

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

Must read

ನಮ್ಮ ದಿನ ಶುರು ಆಗೋದು ವಾಟ್ಸಾಪ್ ನೋಡ್ಕೊಂಡು, ದಿನ ಮುಗಿಯೋದು ವಾಟ್ಸಾಪ್ ಜೊತೇಲೆ. ಈಗದು ನಮ್ಮ ದಿನನಿತ್ಯ ಜೀವನದ ಅವಿಭಾಜ್ಯ ಅಂಗ. ಮೆಸೇಜ್ ಕಳಿಸೋಕೆ, ವೀಡಿಯೋ, ಫೋಟೋ, ಆಡಿಯೋ ಫೈಲ್ ಹೀಗೆ ಎಲ್ಲದಕ್ಕೂ ಇವತ್ತು ನಾವು ವಾಟ್ಸಾಪ್ ಮೇಲೆ ಡಿಪೆಂಡ್ ಆಗಿದ್ದೀವಿ. ಆದ್ರೆ ಇಷ್ಟು ದಿನ ಆಟ ಆಡ್ದಂಗೆ ಇನ್ನು ಆಡಕ್ಕಾಗಲ್ಲ ಸ್ವಾಮಿ..! ಈಗ ವಾಟ್ಸಾಪ್ ನಿಮ್ಮನ್ನು ಒಂದು ದಿನ ಜೈಲಿಗೆ ಕರ್ಕೊಂಡು ಹೋದ್ರು ಆಶ್ಚರ್ಯ ಇಲ್ಲ..! ಏನ್ ಗುರೂ ಹಿಂಗಂತಾ ಇದಿಯ ಅಂದ್ರಾ..? ಹೌದು ಸ್ವಾಮಿ, ವಾಟ್ಸಾಪಲ್ಲಿ ಮಾಡೋ ಚ್ಯಾಟ್ ಗಳ ಸುತ್ತ ಸರ್ಕಾರ ನೂರಾರು ರೂಲ್ಸ್ ರೆಗ್ಯುಲೇಶನ್ ಮಾಡಿದೆ. ನೀವು ಮಾಡೋ ಚ್ಯಾಟಿಂಗ್ ಈಗ ನಿಮ್ಮನಿಮ್ಮಲ್ಲೇ ಇರಲ್ಲ..! ಅದು ನೆಟ್ಟಗಿಲ್ಲ ಅಂದ್ರೆ ಅದನ್ನು ಪೊಲೀಸರೋ, ಅಥವಾ ಸೈಬರ್ ಕ್ರೈಂ ನವರೋ ನೋಡಿ ನಿಮ್ಮನ್ನು ಮನೆಗೆ ಬಂದು ಎತ್ತಾಕ್ಕೊಂಡು ಹೋದ್ರು ಹೋಗಬಹುದು..! ಸೋ ಸ್ವಲ್ಪ ಹುಷಾರಾಗಿರಿ..! ಅದ್ರಲ್ಲೂ ನೀವೇನಾದ್ರೂ ವಾಟ್ಸಾಪ್ ಗ್ರೂಪಿನ ಅಡ್ಮಿನ್ ಆಗಿದ್ದು, ನಿಮ್ಮ ಗ್ರೂಪಲ್ಲಿರೋ ಯಾರಾದ್ರೂ ಕೆಟ್ಟ ಕೆಲಸ ಮಾಡಿ ಅದೇನಾದ್ರೂ ಕಂಪ್ಲೇಂಟ್ ಆದ್ರೆ, ಮೆಸೇಜ್ ಕಳಿಸಿದೋರು ಮಾತ್ರ ಅಲ್ಲ, ಅಡ್ಮಿನ್ ಸಹ ಜೈಲೊಳಗೆ ಕಂಬಿ ಎಣಿಸಬೇಕಾಗುತ್ತೆ ಹುಷಾರ್….!
ಈಗ ಮೊಬೈಲಿಗೆ ಐಟಿ ಆಕ್ಟ್, ಸೈಬರ್ ಕ್ರೈಂ ಅದು ಇದು ಅಂತ ನೂರಾರು ರೂಲ್ಸ್ ಇದೆ. ನೀವು ಆಡಿದ್ದೇ ಆಟ ಅನ್ನೋ ಕಾಲ ಹೋಯ್ತು..! ನಿಮ್ಮ ಗ್ರೂಪಲ್ಲಿ 50 ಜನ ಇದ್ದಾರೆ ಅಂತ ಇಟ್ಕೊಳಿ. ಅದ್ರಲ್ಲಿ ಒಂದಷ್ಟು ಜನ ಹುಡುಗೀರೂ ಇರಬಹುದು..! ಯಾರಾದ್ರೂ ಒಬ್ಬ ಗ್ರೂಪಿನ ಮೆಂಬರ್ ಮಾಡೋಕೆ ಕೆಲಸ ಇಲ್ಲದೇ, ಅಥವಾ ಮಿಸ್ ಆಗಿ ಯಾವುದೇ ಅಶ್ಲೀಲ ವೀಡಿಯೋ ಕಳಿಸ್ದ ಅಂತ ಇಟ್ಕೊಳಿ, ಯಾರಾದ್ರೂ ಹುಡುಗಿ ಹೋಗಿ ಹಿಂಗೆಂಗೆ ಅಂತ ಕಂಪ್ಲೇಂಟ್ ಕೊಟ್ರೆ, ಕಳಿಸಿದ ಮಹಾನುಭಾವನ ಜೊತೆ ಗ್ರೂಪಿನ ಅಡ್ಮಿನ್ ಸಹ ಜೈಲು ಹಾದಿ ಹಿಡಿಯಬೇಕಾಗುತ್ತೆ..! ಹಾಗಾಗಿ ಪ್ರೀತಿಯ ಗ್ರೂಪ್ ಮಾಡೋ ಗ್ರೇಟ್ ವ್ಯಕ್ತಿಗಳೇ, ಗ್ರೂಪ್ ಮಾಡೋಕೆ ಮುಂಚೆ ನೂರು ಸಲ ಯೋಚನೆ ಮಾಡಿ, ಅದಕ್ಕೆ ಯಾರನ್ನು ಸೇರಿಸ್ಕೋಬೇಕು ಅಂತ ಡಿಸೈಡ್ ಮಾಡೋಕೆ ಸಾವಿರ ಸಲ ಯೋಚನೆ ಮಾಡಿ..! ಇಲ್ಲ ಅಂದ್ರೆ ಓವರ್ ಟು ಜೈಲು.. ಗ್ಯಾರಂಟಿ..!
ಅಯ್ಯೋ ಅದೆಲ್ಲಾ ಸಾಯ್ಲಿ, ವಾಟ್ಸಾಪಲ್ಲಿ ಏನ್ ಕಳುಸ್ಬೇಕು, ಏನ್ ಕಳುಸಬಾರದು ಅಂತ ಹೇಳಪ್ಪಾ ಅಂತ ಕೇಳುದ್ರಾ..? ಹೇಳ್ತೀನಿ ಕೇಳಿ..
1. ಯಾರದೋ ವೀಡಿಯೋ, ಕಾಪಿರೈಟ್ ಕಂಟೆಂಟ್, ಹಾಡುಗಳು ಕಳಿಸಿ ಸಿಗಾಕ್ಕೊಂಡ್ರೆ ಪ್ರಾಬ್ಲಂ ಫಿಕ್ಸ್..!
2. ಅಶ್ಲೀಲ ವೀಡಿಯೋಗಳನ್ನು, ಫೋಟೋಗಳನ್ನು ಕಳಿಸೋದಂತೂ ಮುಗಿದು ಹೋದ ಅಧ್ಯಾಯ..!
3. ಯಾರನ್ನೋ ತೇಜೋವಧೆ ಮಾಡೋದು, ಕೀಳಾಗಿ ಮಾತಾಡೋದು, ಮಾನನಷ್ಟ ಮಾಡೋದು ಮಾಡಿದ್ರೂ ಮಾವನ ಮನೆಗೆ ಹೋಗಬೇಕು..!
4. ಪುಟ್ಟ ಮಕ್ಕಳು, ಅಂದ್ರೆ ಮೈನರ್ ಗಳ ಸಂಬಂಧವಾಗಿ ಕೆಟ್ಟದಾಗಿ ವೀಡಿಯೋ, ಫೋಟೋ, ಮೆಸೇಜ್ ಕಳಿಸೋದು ಸಹ ಬ್ಯಾನ್..!
5. ಕಾನೂನಿಗೆ ವಿರುದ್ಧವಾದ ಯಾವುದೇ ತರಹದ ಮೆಸೇಜ್ ಕಳಿಸಿದ್ರೂ ಕಾನೂನು ಕ್ರಮ ಗ್ಯಾರಂಟಿ..!
6. ಜನರನ್ನು ಭಯಭೀತಗೊಳಿಸೋ ಹಾಗೆ, ಹೆದರಿಸೋ ಹಾಗೆ ರೂಮರ್ ಹಬ್ಬಿಸಿ ಸಿಗಾಕ್ಕೊಂಡ್ರೆ ಕೃಷ್ಣ ಜನ್ಮಸ್ಥಾನಕ್ಕೆ ಎಂಟ್ರಿ ಖಾಯಂ..!
7. ವಾಟ್ಸಾಪ್ ಮೂಲಕ ವೈರಸ್ ಇರೋ ಕಂಟೆಂಟ್, ಲಿಂಕ್ ಕಳಿಸಿದ್ರೂ ಕಥೆ ಗೋತಾ..!
8. ನಮ್ಮ ದೇಶದ ಬಗ್ಗೆ ಕೆಟ್ಟದಾಗಿ ಚರ್ಚೆ ಮಾಡೋದು, ಮೆಸೇಜ್ ಕಳಿಸೋದು. ಹಾಗೇ ಬೇರೆ ರಾಷ್ಟ್ರಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಿ ಜನರನ್ನು ರೊಚ್ಚಿಗೆಬ್ಬಿಸೋದು ಮಾಡಿದ್ರೂ ಪೊಲೀಸರು ಕರ್ಕೊಂಡು ಹೋಗ್ತಾರೆ..!
9. ಜಾತಿ ನಿಂದನೆ ಮಾಡೋದು, ಧರ್ಮದ ಹೆಸರಲ್ಲಿ ಕೆಟ್ಟದಾಗಿ ಮಾತಾಡೋದು ಮಾಡಿದ್ರಂತೂ ಜೈಲೂಟ ಫಿಕ್ಸ್..!
ಹೀಗೆ ಸಿಕ್ಕಾಪಟ್ಟೆ ಇದೆ..! ಯಾರಿಗೋ ಅಪರಿಚಿತರಿಗೆ ನಂಬರ್ ಸಿಕ್ತು ಅಂತ ಸುಮ್ಮನೆ ಹಾಯ್ ಅಂತ ಕಳಿಸೋಕೆ ಮುಂಚೇನೂ ತುಂಬಾ ಯೋಚನೆ ಮಾಡಿ..! ವಾಟ್ಸಾಪ್ ಆಟಗಳಿಗೆ ಬ್ರೇಕ್ ಬೀಳೋ ಟೈಮ್ ಬಂದಿದೆ..! ಹಾಗೇ ನೆನಪಿರಲಿ ಬರೀ ಮೆಸೇಜ್ ಕಳಿಸಿದವರು ಮಾತ್ರ ಅಲ್ಲ, ಅಡ್ಮಿನ್ ಸಹ ವೇದಿಕೆ ಕಲ್ಪಿಸಿಕೊಟ್ಟ ಕಾರಣಕ್ಕೆ ಒಳಗೆ ಹೋಗ್ಬೇಕಾಗುತ್ತೆ..! ಈಗಾಗ್ಲೇ ಈ ತರಹದ ಕೇಸಲ್ಲಿ ಸಾಕಷ್ಟು ಜನರನ್ನು ಬೇರೆಬೇರೆ ರಾಜ್ಯದ ಪೊಲೀಸರು ಅರೆಸ್ಟ್ ಮಾಡಿದ್ದಾರೆ..! ಸೋ, ಯಾರೋ ಕ್ರಿಯೇಟ್ ಮಾಡಿದ ಗ್ರೂಪಿಗೆ ನಿಮ್ಮನ್ನು ಅಡ್ಮಿನ್ ಮಾಡೋ ಸಾಧ್ಯತೇನೂ ವಾಟ್ಸಾಪಲ್ಲಿದೆ..! ಯಾಕೆ ರಿಸ್ಕ್ ತಗೋತೀರ ಸ್ವಾಮಿ, ನಿಮ್ಮ ಎಲ್ಲಾ ಗ್ರೂಪನ್ನು ಒಮ್ಮೆ ಚೆಕ್ ಮಾಡಿ. ಎಲ್ಲಿ ಸೇಫ್ ಅನ್ಸುತ್ತೋ ಅಲ್ಲಿರಿ. ಇಲ್ಲ ಅಂದ್ರೆ ಜಾಗ ಖಾಲಿ ಮಾಡ್ರಿ..! ಇನ್ನು ಮುಂದೆ ವಾಟ್ಸಾಪ್ ಅಂದ್ರೆ ಬರೀ ಹಾಯ್ ಬಾಯ್ ಅಷ್ಟೆ,..! ಸುಮ್ಮನೆ `ಬೇಬಿ’ ಅಂತ ಕಳಿಸಿ ಯಾಕೆ ಬೆಂಡ್ ಎತ್ತುಸ್ಕೋತೀರ..! ನಾನಂತೂ ವಾಟ್ಸಾಪ್ ಕಿತ್ತಾಕಿ ನೆಮ್ಮದಿಯಾಗಿರೋಣ ಅಂತ ಯೋಚನೆ ಮಾಡ್ತಿದೀನಿ..! ಇದನ್ನೂ ನನ್ನ ಹೆಸರು ಹಾಕದೇ ವಾಟ್ಸಾಪಲ್ಲಿ ಕಾಪಿ ಪೇಸ್ಟ್ ಮಾಡಿದ್ರೆ ಅದೂ ಕಾನೂನು ಬಾಹಿರ, ನೆನಪಿರಲಿ..!

Video :

ಕೀರ್ತಿ ಶಂಕರಘಟ್ಟ

Story Courtesy : The New Indian Express

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅಕ್ಟೋಬರ್ 14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್..!

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article