ನೋಡುಗರಿಗೆ ಬಿಗ್ಬಾಸ್ ಮನೇಲಿ ಎಂಟರ್‍ಟೈನ್ಮೆಂಟ್ ಕೊಡಲು ಏನೆಲ್ಲಾ ಸರ್ಕಸ್ ಮಾಡುಸ್ತಾರೆ ನೋಡಿ ಸ್ವಾಮಿ. ಅದ್ರಲ್ಲೂ ಬಿಗ್‍ಬಾಸ್ ಮನೇಲಿ ಬೆಸ್ಟ್ ಎಂಟರ್‍ಟೈನರ್ ಅಂದ್ರೆ ಅದು ಒನ್ ಅಂಡ್ ಒನ್ಲಿ ಪ್ರಥಮ್ ಅಂತ ನಿಮ್ಗೆ ಗೊತ್ತಿದೆ. ಮಾತುಬೇಡ ಕಥೆಯೂ ಬೇಡ ಜಸ್ಟ್ ಪ್ರಥಮ್‍ನ ನೋಡಿದ್ರೆ ಸಾಕು ಜನ ನಗಲು ಶುರುಮಾಡ್ತಾರೆ. ಬಿಗ್‍ಬಾಸ್ ಮನೇಲಿ ಪ್ರಥಮ್ ಇದ್ದಾನೆ ಅನ್ನೊ ಕಾರಣಕ್ಕೆ ಹೆಚ್ಚಿನ ಜನ ನೋಡ್ತಾದ್ದಾರೆ. ಅಷ್ಟೇ ಅಲ್ಲ ರೀ ಜನ್ರಿಗೆ ಪ್ರಥಮ್ ಯಾರು ಅಂಥಾನೇ ಗೊತ್ತಿರ್ಲಿಲ್ಲ ಇವತ್ತು ಪ್ರಥಮ್ ಮನೆ ಮಾತಾಗಿದ್ದಾನೆ ಅಂದ್ರೆ ಮೆಚ್ಚಲೇಬೇಕು.
ಬಿಗ್‍ಬಾಸ್ ಮನೇಲಿ ದುಡ್ಡು ಮಾಡೋಕೆ ಟಾಸ್ಕ್ ಕೊಟ್ಟಿದ್ದಾರೆ ನೋಡ್ರಿ, ಹಣ ಮಾಡೋಕೆ ಇಂಥಾ ಟಾಸ್ಕ್ ಗಳನ್ನೆಲ್ಲಾ ಮೊಡ್ಬೇಕೇನ್ರಿ ಮರದ ಮೇಲಿದ್ದ ಮಡಿಕೆಯಿಂದ ಚೀಟಿ ತೆಗೆದು ಅದ್ರಲ್ಲಿ ಬಂದಿದ್ದನ್ನ ಟಾಸ್ಕ್ ತರ ಮಾಡ್ಬೇಕು. ಪಾಪ ನಮ್ ಪ್ರಥಮ್ ಏನ್ ಪಾಪ ಮಾಡಿರ್ತಾನೋ ಗೊತ್ತಿಲ್ಲ ಅವ್ನಿಗೆ ಕಷ್ಟದ ಮೇಲೆ ಕಷ್ಟ ಬರುತ್ತೆ ನೋಡ್ರಿ. ಏನಪ್ಪಾ ಅಂಥ ಕಷ್ಟ ಅಂದ್ಕೊಂಡ್ರಾ. ನಾವು ಊಟದಲ್ಲಿ ಬೇಯಿಸಿರುವ ಮೆಣಸಿನಕಾಯಿ ತಿನ್ನೊಕೆ ಪರಾದಾಡ್ತೀವಿ. ಅಪ್ಪಿತಪ್ಪಿ ಸಣ್ಣ ಮೆಣಸನಿನಕಾಯಿ ತುಂಡನ್ನು ತಿಂದ್ರೇನೆ ಜೀವಾನೇ ಹೊಯ್ತು ಅನ್ನೊ ತರ ಒಂದು ಚೊಂಬು ನೀರ್ ಕುಡಿತೀವಿ ಆದ್ರೆ ಪಂಟ ಪ್ರಥಮ್ ಬರೋಬ್ಬರಿ 45 ಹಸಿಮೆಣಸಿನಕಾಯಿ ತಿಂದು ಬೀಗಿದ್ದಾನೆ.
ನೀವ್ ಅಂದ್ಕೊಳ್ಳಬಹುದು ಇವ್ನೇನ್ ಮನುಷ್ಯನಾ ಅಂಥ ಪ್ರಥಮ್ ಅಂದ್ರೇನೆ ಅಂಗೆ ಕಣ್ರಿ ನನ್ನ ಕೈಯಲ್ಲಿ ಆಗೊಲ್ಲ ಅಂಥ ಕೈಕಟ್ಟಿ ಕುಳಿತುಕೊಳ್ಳೋ ಮಗನೇ ಅಲ್ಲ. ಪ್ರಾಣ ಹೊದ್ರು ಪರವಾಗಿಲ್ಲ ಕೊಟ್ಟ ಕೆಲಸ ಮಡ್ಬೇಕು ಅಂಥಾ ಮುನ್ನುಗ್ಗೊ ಜಾಯಮಾನದವನು. ಏನಪ್ಪಾ ಪಾಪ ಈ ಪ್ರಥಮ್ ಗೆ ಮಾತ್ರ ಕೊಟ್ಟಿದ್ರು ಅಂದ್ಕೊಂಡ್ರ ಇಲ್ಲ ಮಾಳವಿಕಾಗೆ ಬೌಲ್ನಲ್ಲಿನ ಕಾರದ ಪುಡಿಯಲ್ಲಿದ್ದ ಗೋಲಿಯನ್ನು ಬಾಯಿಯಿಂದಲೇ ತೆಗೆಯಬೇಕಿತ್ತು, ಶಾಲಿನಿ 2 ಗಂಟೆ ಈಜಬೇಕಿತ್ತ, ಕೀರ್ತಿ ಕುಮಾರ್ ಸಿಕ್ಕಾಪಟ್ಟೆ ಉಪ್ಪುಹಾಕಿದ ಮೊಸರು ಕುಡಿಯಬೇಕಿತ್ತು, ರೇಖಾ ರಾತ್ರಿಯಲ್ಲಾ ನಿದ್ದೆ ಮಾಡದೆ ಮಾತನಾಡಬೇಕಿತ್ತು ಪಾಪ ಪ್ರಥಮ್‍ಗಾದ್ರು ಈ ಟಾಸ್ಕ್ ಸಿಕ್ಕಿದ್ರೆ ಮಜಾ ಮಾಡ್ತಿದ್ದ ಅಲ್ವಾ? ಅವ್ನು ಮಾತನಾಡೊದಲ್ದೆ ಮನೇಲಿದ್ದರನ್ನೆಲ್ಲಾ ನಿದ್ದೆ ಮಾಡದೆ ಎಬ್ಬಿಸಿರುತ್ತಿದ್ದ. ಮೋಹನ್ 2 ಗಂಟೆ ವಾಕ್ ಮಾಡಬೇಕಿತ್ತು.
ಪ್ರಥಮ್ ಗೆ ಮನೆಯರೆಲ್ಲಾ ಮೆಣಸಿನಕಾಯಿ ತಿನ್ನಬೇಡ ಅಂಥಾ ಹೇಳಿದ್ರೂ ಸಹ ನನಗೇನೂ ಆಗಲ್ಲ ಅನ್ನುವಂತೆ ಪ್ರಥಮ್ ಹಸಿಮೆಣಸಿನಕಾಯಿಯನ್ನು ಸರಾಗವಾಗಿ ತಿಂದಾಕಿದ್ದಾರೆ. ನನಗೇನೂ ಆಗಿಲ್ಲ ಅಂಥ ಮನೆಯವರ ಬಳಿ ಪೋಸ್‍ಕೊಟ್ಟು, ನಂತರ ಕ್ಯಾಮರಾದ ಮುಂದೆ ಉರಿಯ ಬಗ್ಗೆ ಹೇಳೊಕೊಂಡಿದ್ದಾರೆ. ಪಾಪ ಪ್ರಥಮ್ ಎಂಟರ್‍ಟೈನ್ ಮಾಡೊಕೆ ಹೋಗಿ ಏನೆಲ್ಲಾ ರಿಸ್ಕ್ ತೆಗೆದುಕೊಳ್ತಾನೆ ನೋಡಿ. ಮೆಣಸಿಕಾಯಿ ತಿಂದು ದೇಹದ ಯಾವ್ ಯಾವ್ ಪಾರ್ಟ್ಸ್ ಏನೇನ್ ಆಗಿದೆಯೋ ಪ್ರಥಮ್ ಒಬ್ಬನಿಗೆ ಗೊತ್ತು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!
ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್