No menu items!
10 C
Munich
Friday, April 24, 2026

ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?

Must read

ಅಮೇರಿಕಾದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ಬುಧವಾರದಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಕೆಲವು ಘಟನೆಗಳನ್ನು ಪ್ರಧಾನಿಯೊಂದಿಗೆ ಮೆಲುಕು ಹಾಕಿದ್ರು ಒಬಾಮಾ. ಭಾರತ ಮತ್ತು ಅಮೆರಿಕಾ ನಡುವಣ ದ್ವಿಪಕ್ಷೀಯ ಒಪ್ಪಂದ ಇನ್ನಷ್ಟು ಉತ್ತಮಪಡಿಸಿದ್ದಕ್ಕಾಗಿ ಪ್ರಧಾನಿಗೆ ಒಬಾಮ ಕೃತಜ್ಞತೆ ಹೇಳಿದ್ದಾರೆ. ಇದೇ ವೇಳೆ ಕಳೆದ ಬಾರಿಯ ಗಣರಾಜ್ಯೊತ್ಸವದಲ್ಲಿ ಭಾಗಿಯಾಗಿದ್ದ ಕುರಿತು ಪ್ರಸ್ಥಾಪಿಸಿ ಒಬಾಮಾ ಈ ಬಾರಿಯ ಗಣರಾಜ್ಯೋತ್ಸವ ದಿನಕ್ಕೆ ಶುಭ ಕೋರಿದ್ದಾರೆ. ಅಲ್ಲದೆ ರಕ್ಷಣಾ ವಿಭಾಗ ಆರ್ಥಿಕ ಭದ್ರತೆ ಜಾಗತೀಕ ತಾಪಮಾನ ಈ ಎಲ್ಲಾ ವಿಷಯಗಳ ಕುರಿತು ಭಾರತದ ಕಳಕಳಿಯನ್ನು ಒಬಾಮಾ ಮೆಚ್ಚಿದ್ದಾರೆ. ಈ ಎಲ್ಲಾ ವಿಚಾರಗಳ ಕುರಿತು ಉಭಯ ದೇಶಗಳ ನಾಯಕರುಗಳು ಕೂಡ ಚರ್ಚೆ ನಡಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರೆ ಮಾಡಿ ಶುಭ ಕೋರಿದ್ದ ಒಬಾಮಾ ಅಮೇರಿಕಾ ಭೇಟಿಗೆ ಅವಕಾಶ ನೀಡಿದ್ದರು. ಸೆಪ್ಟೆಂಬರ್‍ನಲ್ಲಿ ಇಬ್ಬರು ನಾಯಕರು ಭೇಟಿ ಮಾಡಿ ದ್ವೀಪಕ್ಷೀಯ ಒಪ್ಪಂದಗಳಿಗೆ ಸಹಿ ಮಾಡಿದ್ದರು. ಅನಂತರದಲ್ಲಿ ಈ ಇಬ್ಬರು ನಾಯಕರು ಒಟ್ಟು ಎಂಟು ಬಾರಿ ಭೇಟಿ ಮಾಡಿದ್ರು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.

ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!

ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!

ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article