ಕರಾಟೆ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಹಾಲಿವುಡ್ ಮೆಗಾಸ್ಟಾರ್ ಜಾಕಿಚಾನ್ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ರಿಯಲ್ ಸ್ಟಂಟ್ ಹಾಗೂ ಸಖತ್ ಕಾಮಿಡಿ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ಜಾಕಿ ಅವರಿಗೆ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಅವರು ಥಾಂಕ್ಸ್ ಹೇಳಿದ್ದಾರಂತೆ..! ಅದು ಯಾಕೆ ಅಂತೀರಾ..? ಮುಂದಿನ ಫೆ.3 ರಿಂದ ಜಾಕಿಚಾನ್ ಅಭಿನಯಿಸಿರುವ ಕುಂಗ್ ಫು ಯೋಗ ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾ ಪ್ರಮೋಷನ್‍ಗಾಗಿ ಜಾಕಿ ಈಗ ಮುಂಬೈಗೆ ಬಂದಿದ್ದಾರೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ 62 ವರ್ಷದ ಜಾಕಿಚಾನ್ ಅವರನ್ನು ಬಾಲಿವುಡ್ ಸುಲ್ತಾನ್ ಸಲ್ಲುಭಾಯ್ ಭೇಟಿ ಮಾಡಿದ್ದಾರೆ. ಇದೇ ವೇಳೆ ಇವರಿಬ್ಬರೂ ಎರಡು ಪಾಂಡಾಗಳನ್ನು ಹಿಡಿದಿರುವ ಫೋಟೋವನ್ನು ತೆಗೆದುಕೊಂಡಿದ್ದು ಅದನ್ನು ಸಲ್ಲು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂದರ್ಭ ಜಾಕಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಸಲ್ಲು. ದಬಾಂಗ್ ಚಿತ್ರದಲ್ಲಿ ತನ್ನೊಂದಿಗೆ ನಟಿಸಿರುವ ಸೋನು ಸೂದ್ ಕುಂಗ್ ಫು ಯೋಗ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು, ಭಾರತೀಯ ನಟನೊಬ್ಬನಿಗೆ ಈ ಚಿತ್ರದಲ್ಲಿ ಅವಕಾಶ ನೀಡಿದಕ್ಕಾಗಿ ತುಂಬು ಹೃದಯದ ಕೃತಜ್ಞತೆ ಹೇಳಲು ಬಯಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ ಸಲ್ಲು. ಇನ್ನು ಈ ಚಿತ್ರದಲ್ಲಿ ಸೋನು ಸೂದ್ ಮಾತ್ರವಲ್ಲದೆ ದಿಶಾ ಪಟಾನಿ ಮತ್ತು ಅಮೀರ್ ದಸ್ತೂರ್ ಕೂಡ ನಟಿಸಿದ್ದು ಸಿನಿಮಾದ ಟೀಸರ್‍ಗಳು ಸಖತ್ ಕುತೂಹಲಕಾರಿಯಾಗಿ ಮೂಡಿ ಬಂದಿದೆ.
Thank you @EyeOfJackieChan for giving this film to my Chedi Singh @SonuSood . This is the coolest : https://t.co/Nl0qk742pl
— Salman Khan (@BeingSalmanKhan) January 17, 2017
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಕಂಬಳ ಪರ ಹೋರಾಟಕ್ಕೆ ನಿಂತ ಜನ: ಸುಗ್ರಿವಾಜ್ಞೆಗೂ ಸೈ ಅಂದ ರಾಜ್ಯ ಸರ್ಕಾರ
ಕೀರ್ತಿ ಬಿಗ್‍ಬಾಸ್ ಗೆದ್ದು ಬರಲಿ ಎಂದು ಹಾರೈಸಿದ ಉತ್ತರ ಕರ್ನಾಟಕ ಜನರು
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!
ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್