ಬೆಂಗಳೂರು: ಚೆಲುವಿನ ಚಿತ್ತಾರ ಪಪ್ಪುಸಿ ಖ್ಯಾತಿಯ ನಟ ರಾಕೇಶ್ ವಿಧಿವಶರಾಗಿದ್ದಾರೆ.
ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಎರಡು ತಿಂಗಳ ಹಿಂದಷ್ಟೇ ಆಪರೇಷನ್ ಮಾಡಲಾಗಿತ್ತು.
ಬಳಿಕ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದರು.
ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ ನಟನೆಯ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಬುಲ್ಲಿ ಪಾತ್ರ ಮಾಡಿದ್ದ ಇವರು ಬುಲ್ಲಿ, ಪಪ್ಪುಸಿ ಎಂದೇ ಜನಪ್ರಿಯರಾಗಿದ್ದರು. ಸದ್ಯ ಧೂಮಪಾನ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದರು.
ಪಪ್ಪುಸಿ ಖ್ಯಾತಿಯ ರಾಕೇಶ್ ಇನ್ನಿಲ್ಲ
Date: