ಉಡುಪಿ: ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ರಾಜಕೀಯ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಯಾವುದೇ ಪಕ್ಷವನ್ನು ಸೇರದೆ ಸ್ವತಂತ್ರ ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶಿಸಲು ಅನುಪಮಾ ಶೆಣೈ ಮುಂದಾಗಿದ್ದಾರೆ.
ರಾಜಕಾರಣವನ್ನು ‘ಪೊಲೀಸಿಂಗ್’ ಮಾಡಬೇಕಿದೆ ಎಂದು ಹೇಳಿರುವ ಅವರು ಹೊಸ ಪಕ್ಷವನ್ನು ಕಟ್ಟುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸಮಾನ ಮನಸ್ಕರೊಂದಿಗೆ , ತಜ್ಞರೊಂದಿಗೆ ಚರ್ಚಿಸಿ ಒಂದು ತಿಂಗಳೊಳಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ತೀನಿ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ. ಅಂತೆಯೇ ಬಳ್ಳಾರಿಯಿಂದಲೇ ಚುನಾವಣ ಕಣಕ್ಕೆ ಇಳಿಯುವುದಾಗಿಯೂ ತಿಳಿಸಿದ್ದಾರೆ.