No menu items!
6.3 C
Munich
Friday, May 1, 2026

ಸೆಲ್ಫಿ ಕ್ರೇಜ್ ತೆಗೆಯಿತು ಮೂರು ವಿದ್ಯಾರ್ಥಿಗಳ ಜೀವ

Must read

ರಾಮನಗರ : ಸೆಲ್ಫಿ ತೆಗೆದುಕೊಳ್ಳಲು ಹೋದ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ದುರ್ಮರಣವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಬಿಡದಿ ಸಮೀಪದ ವಂಡರ್ ಲಾ ಮಂಚನಾಯಕನ ಹಳ್ಳಿಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಗಳ ದೇಹ ಗುರುತು ಸಿಗದಂತೆ ಛಿದ್ರವಾಗಿದೆ.
ಮೃತ ಮೂವರು ಯುವಕರು ರೈಲ್ವೆ ಹಳಿಯ ಮೇಲೆ ನಿಂತು ಫೋಟೋ ಕ್ಲಿಕ್ಕಿಸುವಾಗ ರೈಲಿಗೆ ಸಿಲುಕಿದ್ದಾರೆ. ಘಟನೆ ನಡೆದ ಸ್ಥಳ ಯಾರೂ ಓಡಾಡುವ ಸ್ಥಳವಲ್ಲ. ಈ ವಿದ್ಯಾರ್ಥಿಗಳು ರೈಲು ಬರುವುದನ್ನು ನೋಡಿ, ಅದರ ಜೊತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.


ಮೃತರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದ್ದು,ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ದೇಹ ಗರುತು ಸಿಗದಂತೆ ಆಗಿರುವುದರಿಂದ ಪತ್ತೆ ಕಾರ್ಯ ವಿಳಂಬವಾಗಿದೆ. ಇನ್ನು ಇವರ ಐಡಿ ಕಾರ್ಡ್ ಇತ್ಯಾದಿ ದಾಖಲೆಗಳು ಸಿಕ್ಕರೆ ಅದರ ಸಹಾಯದಿಂದ ಇವರಾರು ಎಂಬುದನ್ನು ಪತ್ತೆ ಮಾಡಬೇಕಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article