ರಿಯಲ್ ಸ್ಟಾರ್ ಉಪೇಂದ್ರ ಅವರ 50 ನೇ ಸಿನಿಮಾ ಯಾವುದಾಗುತ್ತೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಉಪ್ಪಿ-ರುಪ್ಪಿ ಉಪ್ಪಿಯ 50 ನೇ ಚಿತ್ರವಾಗಲಿದೆಯಂತೆ.
ರಾಜಕೀಯ ಪ್ರವೇಶವೇ ನನ್ನ 50ನೇ ಸಿನಿಮಾ ಆಗಬಹುದು ಎಂದು ಹೇಳಿಕೊಳ್ಳುತ್ತಿದ್ದರು ಪ್ರಜಾಕೀಯದ ಉಪೇಂದ್ರ. ಪ್ರಜಾಕೀಯ ಕಲ್ಪನೆ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ರಿಯಲ್ ಸ್ಟಾರ್ ಉಪ್ಪಿ-ರುಪ್ಪಿ ಚಿತ್ರದಲ್ಲಿ ನಟಿಸಲಿದ್ದಾರೆ. ಇದು ಇವರ ರಿಯಲ್ ಲೈಫ್‍ಗೆ ತುಂಬಾ ಹತ್ತಿರದಲ್ಲಿರುವ ಸಿನಿಮಾ ಆಗುತ್ತೆ ಅಂತ ಹೇಳಲಾಗ್ತಾ ಇದೆ.
ವಿಜಯ ಲಕ್ಷ್ಮೀ ಅರಸ್ ಬಂಡವಾಳ ಹಾಕುತ್ತಿರುವ ಉಪ್ಪಿ-ರುಪ್ಪಿಯ ನಿರ್ದೇಶಕ ಕೆ. ಮಾದೇಶ್. ಈ ಸಿನಿಮಾದಲ್ಲಿ ನೋಟು ಅಮಾನೀಕರಣದ ವಿಷಯವೂ ಇದೆಯಂತೆ. ಉಪ್ಪಿಗೆ ರಚಿತಾ ರಾಮ್ ನಾಯಕಿ ಎಂದು ತಿಳಿದುಬಂದಿದೆ.
ಸದ್ಯ ಪ್ರಜಾಕೀಯ ಭದ್ರಪಡಿಸುವಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಉಪ್ಪಿ-ರುಪ್ಪಿಗೆ ಹೇಗೆ ಟೈಮ್ ಕೊಡ್ತಾರೆ ಎಂಬುದು ಸಹ ಮುಖ್ಯ. ಉಪೇಂದ್ರ ಅವರು ಇಷ್ಟು ದಿ ಹೇಳಿದಂತೆ ಅವರ ರಾಜಕೀಯ ಎಂಟ್ರಿಯೇ 50 ನೇ ಸಿನಿಮಾ ಆಗುತ್ತಾ ಅಥವಾ ಉಪ್ಪಿ ರುಪ್ಪಿ ಮೂಲಕ ತೆರೆಮೇಲೆ ಮತ್ತೆ ಕಾಣಿಸಿಕೊಳ್ತಾರ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.