ಲಕ್ನೋ : ನಾಲ್ವರು ಕಾಮುಕರು ಪತಿ ಹಾಗೂ 36 ತಿಂಗಳ ಮಗುವಿನ ಎದುರೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಘಟನೆ ನಡೆದಿದ್ದು, ಗನ್ ತೋರಿಸಿ ವಿವಾಹಿತೆಯನ್ನು ರೇಪ್ ಮಾಡಿದ್ದಾರೆ ಎನ್ನಲಾಗಿದೆ. ಮಗನನ್ನು ಕೊಲ್ಲುವುದಾಗಿ ಬೆದರಿಸಿ, ಪತಿಯ ಮೇಲೆ ಹಲ್ಲೆ ನಡೆಸಿ ತನ್ನನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ರೇಪ್ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.