ಶ್ರೀನಗರ : ನಮ್ಮ ಬೆಂಗ್ಳೂರು ಮೂಲದ ಯೋಧ ಆರ್.ನರೇಂದ್ರ ಜಮ್ಮು-ಕಾಶ್ಮಿರದ ಪಹಗಾಮ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಹಗಾಮ್ ಸೈನಿಕ ನೆಲೆಯಲ್ಲಿ ಸೇವೆಸಲ್ಲಿಸುತ್ತಿದ್ದ ಇವ್ರು ನಿನ್ನ ಮಧ್ಯರಾತ್ರಿ (ಭಾನುವಾರ) ತಮ್ಮ ಸರ್ವಿಸ್ ರೈಫಲ್‍ನಿಂದ ಶೂಟ್ ಮಾಡಿಕೊಂಡಿದ್ದು, ಸ್ಥಳಿಯ ಆಸ್ಪತ್ರೆಗೆ ಕರ್ಕೊಂಡು ಹೋಗಲಾಯ್ತಾದ್ರೂ ಪ್ರಯೋಜನವಾಗಿಲ್ಲ. ಅಷ್ಟರಲ್ಲಾಗಲೇ ಅವ್ರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಮೃತ ಯೋಧನ ಪೋಷಕರು ಬೆಂಗಳೂರಿನ ರಾಜಗೋಪಾಲ ನಗರದ ಮಾರುತಿ ಟ್ಯಾಕಿಸ್ ಬಳಿ ವಾಸವಿದ್ದಾರೆ. ಇಂದು ಬೆಳಗ್ಗೆ 11.30ರ ಸುಮಾರಿಗೆ ನರೇಂದ್ರ ಅವರ ಪ್ರಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಲಿದೆ ಎಂದು ತಿಳಿದಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನದಿನ ಪೋಷಕರೊಂದಿಗೆ ವೀಡಿಯೋಕಾಲ್‍ನಲ್ಲಿ ಮಾತನಾಡಿದ್ದ ನರೇಂದ್ರ ಕಳೆದ 10 ದಿನಗಳ ಹಿಂದಷ್ಟೇ ಬೆಂಗಳೂರಿಂದ ಸೇವೆಗೆ ಮರಳಿದ್ದರು. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಪೋಷಕರು ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು ಯೋಧ ಆತ್ಮಹತ್ಯೆ
Date: