ವಾಹನ ವಿಮೆ ಪಾಲಿಸಿದಾರರಿಗೆ ಸುಪ್ರೀಂ ಕೋರ್ಟ್ ಸಿಹಿ ಸುದ್ದಿ ನೀಡಿದೆ. ವಿಮೆ ಪಡೆದವ್ರು ಸ್ವಲ್ಪ ತಡವಾಗಿ ಕ್ಲೇಮ್ ಮಾಡಿದ್ರೂ ವಿಮಾ ಕಂಪನಿ ಪರಿಹಾರ ನೀಡ್ಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ತಡವಾಗಿ ಕ್ಲೇಮ್ ಮಾಡೋಕೆ ಸತ್ಯವಾದ ಕಾರಣಗಳಿದ್ದಲ್ಲಿ ಯಾವುದೇ ಕಾರಣಕ್ಕೂ ಕಂಪನಿ ವಿಮೆ ಪಾಲಿಸಿದಾರರ ಅರ್ಜಿಗಳನ್ನು ತಿರಸ್ಕರಿಸಬಾರ್ದು, ವಿಮಾ ಕಂಪನಿಗಳು ಗ್ರಾಹಕ ಸ್ನೇಹಿ ಆಗೀರ್ಬೇಕು, ಗ್ರಾಹಕರ ಹಿತರಕ್ಷಣೆ ಮುಖ್ಯ ಅಂತ ಕೋರ್ಟ್ ಹೇಳಿದೆ.
ಹಿಂದೆ ಹಿಸಾರ್ ಮೂಲದ ಓಂ ಪ್ರಕಾಶ್ ಎಂಬುವವರ ಲಾರಿ ಕಳ್ಳತನವಾಗಿತ್ತು. ಅವರು ಪರಿಹಾರಕ್ಕೆ ತಡವಾಗಿ ಅರ್ಜಿಸಲ್ಲಿಸಿದ್ದಾರೆ ಅಂತ ಕಂಪನಿ ಅವ್ರ ಅರ್ಜಿಯನ್ನು ತಿರಸ್ಕರಿಸಿತ್ತು. ಅರ್ಜಿ ತಿರಸ್ಕಾರಕ್ಕೆ ಸಲ್ಲಿಕೆ ತಡ ಎಂಬ ಕಾರಣ ಬಿಟ್ರೆ ಬೇರ್ಯಾವ ಕಾರಣವೂ ಇರ್ಲಿಲ್ಲ.
ಆಗ ಓ ಪ್ರಕಾಶ್ ಗ್ರಾಹಕ ಹತ್ತು ಹಲವು ಗ್ರಾಹಕ ಪರಿಹಾರ ಕೋರ್ಟ್ ಗಳ ಮೊರೆ ಹೋಗಿದ್ರು, ಅಂತಿಮವಾಗಿ ಸುಪ್ರೀಂಕೋರ್ಟ್‍ಗೆ ಪ್ರಕರಣ ತಲುಪಿದ್ದು, ಗ್ರಾಹಕರ ಪರ ಕೋರ್ಟ್ ತೀರ್ಪು ನೀಡಿದೆ. ಅಂದಹಾಗೆ ಈ ತೀರ್ಪು ನೀಡಿದ್ದು ಓಂ ಪ್ರಕಾಶ್ ಹಾಗೂ ರಿಲಯನ್ಸ್ ಜನರಲ್ ಇನ್ಷೂರೆನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ. ಇದೀಗ ಕೋರ್ಟ್ ಆದೇಶದಂತೆ ಹಾಗೂ ರಿಲಯನ್ಸ್ ಜನರಲ್ ಇನ್ಷೂರೆನ್ಸ್ ಓ ಪ್ರಕಾಶ್ ಅವ್ರಿಗೆ 8.35 ಲಕ್ಷ ರೂ ಪರಿಹಾರ ನೀಡ್ಬೇಕಂತ ಸುಪ್ರೀಂ ತೀರ್ಪು ನೀಡಿದೆ.