ವಿರಾಟ್ ಕೋಹ್ಲಿ…ವಿಶ್ವಕ್ರಿಕೆಟ್‍ನ ನಂಬರ್ 1 ಬ್ಯಾಟ್ಸ್‍ಮನ್. ಟೀಂ ಇಂಡಿಯಾದ ನಾಯಕ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟುತ್ತೆ..! ವಿರಾಟ್ ಅವರನ್ನು ಫೆವಿಲಿಯನ್‍ಗೆ ವಾಪಸ್ಸು ಕಳುಹಿಸುವುದೇ ಬೌಲರ್‍ಗಳಿಗೆ ದೊಡ್ಡ ತಲೆನೋವು..! ವಿರಾಟ್‍ಗೆ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲು ಬಿಟ್ಟರೆ ಉಳಿಗಾಲವಿಲ್ಲ ಅನ್ನೋದು ವಿಶ್ವದ ಪ್ರತಿಯೊಂದು ಕ್ರಿಕೆಟ್ ತಂಡಕ್ಕೂ ಗೊತ್ತಿದೆ..!
ಬೌಲರ್‍ಗಳನ್ನು ಇನ್ನಿಲ್ಲದಂತೆ ಕಾಡಿದ ವಿರಾಟ್ ಕೋಹ್ಲಿ ಅವರೇ ಹೇಳಿರುವಂತೆ ಅವರನ್ನು ಕಾಡಿದ ಬೌಲರ್ ಪಾಕಿಸ್ತಾನದ ಮೊಹಮದ್ ಆಮೀರ್ ಅಂತೆ..! ಆಮೀರ್ ಬೌಲಿಂಗ್ ಅಂದ್ರೆ ಕೋಹ್ಲಿಗೆ ಭಯವಂತೆ..! ಹೀಗಂತ ಸ್ವತಃ ವಿರಾಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ..! ಅಷ್ಟೇ ಅಲ್ಲ ತಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಗುಟ್ಟುಬಿಟ್ಟುಕೊಟ್ಟಿರೋ ಟೀಂ ಇಂಡಿಯಾ ಕ್ಯಾಪ್ಟನ್ ಕೋಹ್ಲಿ ಪ್ರಥಮ ಪಿಯುಸಿವರೆಗೆ ಮಾತ್ರ ಓದಿರೋದಾಗಿ ಹೇಳಿಕೊಂಡಿದ್ದಾರೆ..!