ಸ್ನೇಹನಾ..? ಪ್ರೀತಿನಾ..? ಅಥವಾ ಗುರಿ ಸಾಧನೆನಾ..? ಇವುಗಳಲ್ಲಿ ಯಾವುದು ಮುಖ್ಯ..? ಮೂರೂ ಮುಖ್ಯವೇ…ಆದರೆ, ಕೆಲವೊಮ್ಮೆ ಇವುಗಳಲ್ಲಿ ಒಂದನ್ನಾದರೂ ತ್ಯಾಗ ಮಾಡ್ಬೇಕಾಗುತ್ತೆ..! ಆದರೆ, ಸ್ನೇಹ ಮತ್ತು ಪ್ರೀತಿ ಎರಡರ ಜೊತೆಯಲ್ಲೂ ಸಾಗಿ ಒಟ್ಟಾಗಿ ಗುರಿ ತಲುಪಿದ್ರೆ ಹೇಗೆ..? ಫ್ರೆಂಡ್ ಮತ್ತು ಪ್ರಿಯತಮ/ಮೆ ಹಾಗೂ ನಾವು-ನೀವು ಒಟ್ಟಾಗಿ ಮುನ್ನುಗ್ಗಿ ಅವರವರ ಕನಸು ನನಸು ಮಾಡಿಕೊಳ್ಳೋದು ಸಾಧ್ಯಾನಾ ಎಂಬುದಕ್ಕೆ ಉತ್ತರ ಇದೇ 27ಕ್ಕೆ (ಅಕ್ಟೋಬರ್ 27) ರಿಲೀಸ್ ಆಗಲಿರುವ ‘ಸರ್ವಸ್ವ’..!
ಶ್ರೇಯಸ್ ಕಬಾಡಿ ನಿರ್ದೇಶನದ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ..! ಟ್ರೇಲರ್ ಹಾಗೂ ಹಾಡುಗಳನ್ನು ಈಗಾಗಲೇ ಗೆಲ್ಲಿಸಿರುವ ಸಿನಿ ಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸದೇ ಇರ್ತಾರ..? ಖಂಡಿತಾ ಗೆಲ್ಲಿಸ್ತಾರೆ..! ಸಿನಿಮಾ ನೋಡಿದ ಪ್ರೇಕ್ಷಕ ಕನಿಷ್ಠ 10 ಮಂದಿಯನ್ನಾದರೂ ‘ಸರ್ವಸ್ವ’ ನೋಡ್ಕೊಂಡು ಬಾ ಅಂತ ಹೇಳಿಯೇ ಹೇಳ್ತಾನೆ..ತಾನೂ ಕೂಡ ಮತ್ತೆ ಅವರ ಜೊತೆ ಚಿತ್ರಮಂದಿರಕ್ಕೆ ಬಂದರೂ ಬರಬಹುದು ಎಂದು ಹೇಳುವಷ್ಟರಮಟ್ಟಿಗೆ ಚಿತ್ರತಂಡಕ್ಕೆ ಕಾನ್ಫಿಡೆನ್ಸ್ ಇದೆ..!
ಉಗ್ರಂ, ಕರ್ವ ಖ್ಯಾತಿಯ ನಟ ತಿಲಕ್ ಶೇಖರ್ ಚಿತ್ರದ ನಾಯಕ ನಟ. ಚೇತನ್ ವರ್ಧನ್ ಎರಡನೇ ನಾಯಕ ನಟನಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಿದ್ದಾರೆ..! ಸಿನಿಮಾವೇ ‘ಸರ್ವಸ್ವ’ ಎನ್ನುತ್ತಾ ಇಡೀ ಚಿತ್ರತಂಡ ಕೆಲಸ ಮಾಡಿದೆ..! ಇದೊಂದು ಸಿನಿಮಾದೊಳಗಿನ ಸಿನಿಮಾ ಕತೆ..!
ಸಿನಿಮಾವೇ ನನ್ನ ಸರ್ವಸ್ವ… ಚಿತ್ರರಂಗದಲ್ಲಿ ನಿರ್ದೇಶಕನಾಗಿ ಬೆಳೆಯಬೇಕು ಎಂಬ ಕನಸುಗಳ ಬೆನ್ನತ್ತಿ ಹೊರಟ ಒಬ್ಬ ನಾಯಕ..! ಈತನ ಗೆಳೆಯನಿಗೆ ಸಿನಿಮಾ ಹೀರೋ ಆಗ್ಬೇಕು ಎಂಬ ಕನಸು..! ಇಬ್ಬರೂ ಏನೆಲ್ಲಾ ಕಷ್ಟಪಟ್ಟರು..! ಕೊನೆಗೂ ಗುರಿ ತಲುಪಲು ಸಾಧ್ಯವಾಯ್ತೇ..? ಸಿನಿಮಾವೇ ನನಗೆಲ್ಲಾ.. ಸಿನಿಮಾವೇ ನನ್ನ ಸರ್ವಸ್ವ ಎಂದು ಕನಸುಗಳ ಬೆನ್ನತ್ತಿ ಹೊರಟ ನಾಯಕರು..! ಅವರಿಬ್ಬರ ಬಾಳಲ್ಲಿ ಬರೋ ಹುಡುಗಿಯರು..! ಅವರ ಸ್ನೇಹ+ ಪ್ರೀತಿ ಮತ್ತು ಗುರಿಯೇ ಸಿನಿಮಾದ ಜೀವಾಳ..! ಸಿನಿಮಾ ನೋಡಿದ ಪ್ರೇಕ್ಷಕರಲ್ಲಿ ತನ್ನ ಗುರಿ ಏನು..? ತನ್ನ ಜೀವನದ ಸರ್ವಸ್ವವೇನು..ಎಂಬ ಪ್ರಶ್ನೆ ಮೂಡುತ್ತದೆ..! ಸಿನಿಮಾದಲ್ಲಿ ಒಂದೊಳ್ಳೆ ಸಂದೇಶವಿದೆ ಎಂದು ನಿರ್ದೇಶಕ ಶ್ರೇಯಸ್ ಕಬಾಡಿ ಹೇಳಿದ್ದಾರೆ..!
ಸಾತ್ವಿಕ ಮತ್ತು ರನುಷಾ ಈ ಚಿತ್ರದ ನಾಯಕಿಯರು. ಇದು ಇಬ್ಬರಿಗೂ ಎರಡನೇ ಸಿನಿಮಾ. ವಿಭಿನ್ನ ಪಾತ್ರ ನಮ್ಮದು..ಚಿತ್ರವೂ ಗೆಲ್ಲುತ್ತದೆ…ನಮಗೂ ಯಶಸ್ಸು ಸಿಗುತ್ತೆ ಎಂಬ ಆತ್ಮವಿಶ್ವಾಸ ಯುವ ನಟಿಯರದ್ದು.
ಭೂಪಿಂದರ್ ಪಾಲ್ ಸಿಂಗ್ ರೈನಾ ಅವರ ಅದ್ಭತ ಛಾಯಾಗ್ರಹಣವಿದೆ.. ನಯನ ಮನೋಹರ ತಾಣಗಳನ್ನು ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ವಿ.ಶ್ರೀಧರ್ ಸಂಭ್ರಮ್ ಅವರ ಸಂಗೀತದ ಬಲ ಚಿತ್ರಕ್ಕಿದೆ. ಗುಜರಾತಿನವರಾದ ವಿಮಲ್-ವಾಮ್ದೇವ್ ‘ಸರ್ವಸ್ವ’ ನಿರ್ಮಾಪಕರು.