No menu items!
7.9 C
Munich
Wednesday, September 23, 2026

ಚಿನ್ನಕ್ಕಾಗಿ ಹೆಣದ ಮೇಲೆ ದರೋಡೆ..!

Must read

ಹಣ ಎಂದ್ರೆ ಹೆಣಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಇಲ್ಲಿ ಹೆಣದ ಮೇಲೆ ಚಿನ್ನಕ್ಕಾಗಿ ಬಾಯ್ಬಿಟ್ಟಿದ್ದಾರೆ ಖದೀಮರು..!


ಮನೆ, ಬ್ಯಾಂಕ್‍ಗಳಿಗೆ ನುಗ್ಗಿ ದರೋಡೆ ಮಾಡಿರೋದ್, ಕಳವು ಮಾಡಿರೋದು ನಿಮ್ಗೆ ಗೊತ್ತು. ಅಷ್ಟೇಅಲ್ಲ ಹೆದ್ದಾರಿ ದರೋಡೆಗಳೂ ಸಾಕಷ್ಟು ನಡೆಯುತ್ತವೆ..! ಆದರೆ, ಹೆಣದ ಮೇಲೆ ದರೋಡೆ ಮಾಡಿದ್ದನ್ನು ತಿಳಿದಿದ್ದೀರ..? ಇದೂ ಕೂಡ ನಡೆದೇ ಬಿಟ್ಟಿದೆ..!
ಕಲಬುರಗಿಯ ಆಳಂದ ತಾಲೂಕಿನ ಖಜೂರಿ ಗ್ರಾಮದ ಪ್ರೇಮಾಬಾಯಿ ಡಗೆ (75) ಎಂಬ ಅಜ್ಜಿ ಕಳೆದ 5 ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇವರಿಗೆ ಮಕ್ಕಳಿಲ್ಲದ ಕಾರಣ ಊರವರೇ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ರು..!
ಆದರೆ, ಕಳೆದ ರಾತ್ರಿ ಸಮಾಧಿಯಿಂದ ಶವ ಆಚೆ ಬಂದಿದೆ..! ಗಾಬರಿ ಆಗ್ಬೇಡಿ.. ಅಜ್ಜಿಗೆ ಜೀವಬಂತಾ ಅಂತ..! ಈ ಕೆಲಸ ಮಾಡಿದ್ದು ಖದೀಮರು. ಅಜ್ಜಿ ಶವದ ಮೇಲಿನ 50 ಗ್ರಾಂ ಚಿನ್ನದ ಆಸೆಗೆ ಶವ ತೆಗೆದು ಚಿನ್ನ ದೋಚಿ ಪರಾರಿ ಆಗಿದ್ದಾರೆ..! ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article