ಹೆಣ್ಣಿನ ಕತ್ತು ಖಾಲಿ ಇರ್ಬಾರ್ದು ಎಂಬುದು ಹಿಂದಿನಿಂದ ಬಂದ ಪದ್ಧತಿ. ಹಾಗಾಗಿ ಆ ಕಾಲದಿಂದಲೂ ಹೆಣ್ಣು ಕತ್ತಿನಲ್ಲಿ ಕಡೆ ಪಕ್ಷ ಒಂದೆಳೆಯ ಸರವನ್ನಾದರೂ ಧರಿಸುತ್ತಿದ್ದಳು. ಅದು ಹೆಚ್ಚಾಗಿ ಚಿನ್ನದ್ದೇ ಆಗಿರ್ತಿತ್ತು .ಆದ್ರೆ, ಈಗ ಕಾಲ ಬದಲಾಗಿದೆ, ಚಿನ್ನದ ಸರ ಅಲಂಕೃತವಾಗುತ್ತಿದ್ದ ಕೊರಳಲ್ಲಿ ಇಂದು ತರಹೇವಾರಿ ಮಾಡರ್ನ್ ನೆಲದ ಸೆಟ್ ಗಳು ರಾರಾಜಿಸುತ್ತಿವೆ. ಅದರಲ್ಲೂ ಇತ್ತೀಚಿಗೆ ಎಲ್ಲರ ಕತ್ತಿನಲ್ಲೂ ಚೋಕರ್ಸಗಳದ್ದೇ ದರ್ಬಾರ್.
ಚೋಕರ್ಸ್ ಗಳು ಫ್ಯಾಷನ್ ಜಗತ್ತಿಗೆ ಮೊನ್ನೆ ಮೊನ್ನೆ ಪರಿಚಿತಗೊಂಡರೂ ಕಡಿಮೆ ಸಮಯದಲ್ಲಿ ಮಹಿಳಾ ಮಣಿಗಳ ಮನಸೋರೆಗೊಂಡಿರುವುದರಂತು ನಿಜ. ಲಾಂಗ್ ಮಿಡಿ, ಜೀನ್ಸ್, ಲಾಂಗ್ ಫ್ರಾಕ್ ನಂತಹ ಮಾಡರ್ನ್ ಉಡುಪಿನ ಜೊತೆಗೆ ಅತ್ಯಂತ ಸೊಗಸಾಗಿ ಒಪ್ಪುತ್ತೆ. ಚೋಕರ್ಸ್ ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ ನಮ್ಮ ಉಡುಪಿಗೆ ಹೊಂದುವ ಬಣ್ಣದ ಚೋಕರ್ ಅನ್ನು ನಾವು ಧರಿಸಬಹುದು. ಹಾಗೆ ಹಲವಾರು ಡಿಸೈನಗಳನ್ನು ನಮಗೆ ಸಿಗುತ್ತವೆ.
ಜೀನ್ಸ್ ಪ್ಯಾಂಟ್ ಟೀ ಶರ್ಟ್ ನೊಂದಿಗೆ ಸಿಂಪಲ್ ಆದಂತಹ ವಿಕರ್ಣ ಧರಿಸಿದರೆ, ಇನ್ನು ಕೊಂಚ ಗ್ರ್ಯಾಂಡ್ ಡ್ರೆಸ್ ಗಳೊಂದಿಗೆ ಮಣಿ ಪೋಣಿಸಿದರೆ ಅಥವಾ ಒಂದೇ ಪೆಂಡೆಂಟ್ ಇರುವ ಚೋಕರ್ ಗಳು ಅಂದವಾಗಿ ಕಾಣುತ್ತವೆ.
ಚೋಕರ್ಸ್ ಗಳು ಹೆಚ್ಚಾಗಿ ಉದ್ದ ಕುತ್ತಿಗೆ ಉಳ್ಳವರಿಗೆ ಹೇಳಿಮಾಡಿಸಿದಂತಿದೆ. ಇವುಗಳು ಸುಮಾರು ಐವತ್ತು ರೂಪಾಯಿಂದ ಹಿಡಿದು ಸಾವಿರ ರುಪಾಯಿ ವರೆಗು ಮಾರ್ಕೆಟ್ ನಲ್ಲಿ ಸಿಗುತ್ತವೆ. ಕಲರ್ ಡಿಸೈನ್ ಗೆ ತಕ್ಕಂತೆ ಅದರ ಬೆಲೆಯು ಭಿನ್ನವಾಗಿದೆ. ಆನ್ ಲೈನಲ್ಲೂ ಸಹ ಇವು ಸಿಗುತ್ತವೆ. ಕೊಂಚ ದುಬಾರಿ ಎನಿಸಿದರೂ ನಮ್ಮ ಅಂದ0-ಚಂದ ವನ್ನು ಹೆಚ್ಚಿಸುವಲ್ಲಿ ಸಂಶಯವಿಲ್ಲ….
-ರಕ್ಷಾ. ಎಸ್. ದೇಶಪಾಂಡೆ