ಯಾವುದೇ ರೀತಿಯ ಸಾಂಸರಿಕ ಸುಖ ಬೇಡ ಅಂತ ಮಠ ಸೇರಿದವರು ಸ್ವಾಮಿಗಳು..! ಇವರು ಲೈಂಗಿಕ ಸುಖದಿಂದಲೂ ಕೂಡ ದೂರವಿರಬೇಕು..! ಸಂಸಾರ ಬೇಡ ಅಂತ ಬಂದವರು ಮಠದಲ್ಲಿ ಸರಸ ಆಡೋಕೆ ಹೋದ್ರೆ ಹೆಂಗೆ..? ಸ್ವಾಮಿಗಳ ಕಾಮದಾಟ ಸಿಕ್ಕಾಪಟ್ಟೆ ದೊಡ್ಡ ಸುದ್ದಿ ಆಗುತ್ತೆ..!
ಇದೀಗ ಹುಣಸಮಾರನಹಳ್ಳಿ ವೀರಶೈವ ಮಠದ ಸ್ವಾಮಿಗಳ ಕಾಮದಾಟ ಕಂಡಾಪಟ್ಟೆ ಸದ್ದು ಮಾಡ್ತಿದೆ..! ಕಾಮವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗದ ಸ್ವಾಮಿ ಹಾಸಿಗೆಯಲ್ಲಿ ಸಿನಿಮಾ ನಟಿ ಓರ್ವಳ ಜೊತೆ ರಾಸಲೀಲೆ ನಡೆಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ಆಗಿರೋದ್ ನಿಮಗೆ ಗೊತ್ತೇ ಇದೆ..! ಮಠದ ಆಸ್ತಿಯಲ್ಲಿ ಪಾಲು ಕೊಡ್ತೀನಿ ಅಂತ ಹೇಳಿ ನಟಿ ಜೊತೆ ಕಾಮದಾಟ ಆಡಿದ ಗುರು ನಂಜೇಶ್ವರ ಶಿವಾಚಾರ್ಯ ದಯಾನಂದ ಸ್ವಾಮಿ ಚಿತ್ರದ ನಾಯಕ ನಟ ಅನ್ನೋದು ಬಹಿರಂಗ ಆಗಿತ್ತು..! ಆದ್ರೆ ನಾಯಕ ನಟಿ ಯಾರು ಅನ್ನೋದು ಗೊತ್ತಿರಲಿಲ್ಲ..!
ಅವ್ಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಟಿಯಂತೆ..! ಚಿತ್ರದುರ್ಗದಲ್ಲಿನ ತನ್ನ ಸಂಬಂಧಿಕರೊಬ್ಬರ ಕೃಪಾಕಟಾಕ್ಷದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈಕೆಯ ಮೊದಲ ಚಿತ್ರ ‘ಖತರ್ನಾಕ್’.
‘141’ ಎಂಬ ಬಿ ಗ್ರೇಡ್ ಸಿನಿಮಾದ ನಾಯಕಿ. ಈ ಚಿತ್ರದದಲ್ಲಿ ಸಲಿಂಗ ರತಿಯಾಗಿರೋ ಇವಳು ಹಸಿಬಿಸಿ ದೃಶ್ಯದಲ್ಲಿ ನಟಿಸಿದ್ದಾಳಂತೆ..! ಅಷ್ಟೇಅಲ್ಲದೆ ‘ಅದೃಷ್ಟ’ ಚಿತ್ರದಲ್ಲಿ ಶುಭಪೂಂಜಾರ ಫ್ರೆಂಡ್ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಸಂತೋಷಕೆ ಎಂಬ ಚಿತ್ರದ 6 ಮಂದಿ ನಾಯಕರಿಯಲ್ಲೊಬ್ಬಳು ಈಕೆ.. ತುಳುವಿನ ‘ಡ್ಯಾನ್ಸ್ ಕುಡ್ಲಾ ಡ್ಯಾನ್ಸ್’ ಚಿತ್ರದ ನಾಯಕಿಯಂತೆ..!