ರಮ್ಯಾ, ಪೂಜಾಗಾಂಧಿ ನಂತರ ಸ್ಯಾಂಡಲ್‍ವುಡ್‍ನ ಮತ್ತೊಬ್ಬ ನಟಿ ರಾಜಕೀಯಕ್ಕೆ ಪ್ರವೇಶ ಮಾಡ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ..!
ನಟಿ ರಮ್ಯಾ ಈಗ ಮಾಜಿ ಸಂಸದೆ..! ಇವರೀಗ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.
ಇದೀಗ ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ರಾಜಕೀಯ ರಂಗ ಪ್ರವೇಶಿಸುತ್ತಾರೆ ಎಂಬ ಪ್ರಶ್ನೆ ಮೂಡುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ವೈರಲ್ ಆಗ್ತಿದೆ.
ಅಮೂಲ್ಯ ಅವರ ಮಾವ ಆರ್ ಆರ್ ನಗರದ ಮಾಜಿ ಕಾರ್ಪೋರೇಟರ್ ಆಗಿದ್ದಾರೆ. ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಕೂಡ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಒಂದು ಕಡೆ ಮಾವ ರಾಮಚಂದ್ರ, ಇನ್ನೊಂದೆಡೆ ಶಿಲ್ಪಾ ಗಣೇಶ್ ಅವರ ಸಪೋರ್ಟ್ ಅಮೂಲ್ಯ ಅವರಿಗಿದೆ. ಶಿಲ್ಪಾ ಗಣೇಶ್ ಮತ್ತು ರಾಮಚಂದ್ರ ಇಬ್ಬರೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು ಅಮೂಲ್ಯ ಕೂಡ ಬಿಜೆಪಿ ಪ್ರವೇಶಿಸ್ತಾರೆ ಎಂದು ಹೇಳಲಾಗ್ತಿದೆ. ಇತ್ತೀಚೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅಮೂಲ್ಯ ಕಾಣಿಸಿಕೊಳ್ತಾ ಇರೋದು ಈ ಸುದ್ದಿಗೆ ಪುಷ್ಟಿ ನೀಡ್ತಿದೆ.