ಅಮೆರಿಕಾದ ಪ್ರತಿಷ್ಠಿತ ಕಂಪನಿ ಆ್ಯಪಲ್ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಕ್ಯಾಂಪಸ್ ಇಂಟರ್ ವ್ಯೂ ನಡೆಸೋಕೆ ಮುಂದಾಗಿದೆ...!
ಭಾರತೀಯ ಇಂಜಿನಿಯರಿಂಗ್ ಕಾಲೇಜುಗಳಿಗೆ ಆಗಮನಿಸಿತ್ತಿರೋ ಆ್ಯಪಲ್ ಕಂಪನಿ ಭಾರತೀಯ ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ನೀಡ್ತಿದೆ...!
ಇದರಿಂದ ವಿದ್ಯಾರ್ಥಿಗಳಲ್ಲಿ ಆಶಾಭಾವನೆ ಮೂಡಿದೆ. ಹೈದರಾಬಾದ್ ನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಲು ಸಂಸ್ಥೆ ಉದ್ದೇಶಿಸಿದೆ.
ಅಷ್ಟೇ ಅಲ್ಲದೆ ನಮ್ಮ ಬೆಂಗಳೂರಲ್ಲೂ ಆ್ಯಪಲ್ ತನ್ನ ಘಟಕ ಆರಂಭಿಸಿದೆ. ಇಲ್ಲಿಯೂ ಉದ್ಯೋಗಿಗಳನ್ನು ಹುಡುಕುತ್ತಿದ್ದು, ಕನ್ನಡಿಗರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಆ್ಯಪಲ್ ಮಾತ್ರವಲ್ಲದೆ ಮೈಕ್ರೋಸಾಫ್ಟ್ , ಫಿಲಿಪ್ಸ್ , ಗೂಗಲ್ ಮತ್ತಿತರ ಕಂಪನಿಗಳೂ ಕೂಡ ಹೈದರಾಬಾದ್ ನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿಎಚ್)ನಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಲಿವೆ.