ಬುಕ್ ಮೈ ಶೋ ವಿರುದ್ಧ ಕನ್ನಡಿಗರು ಸಿಟ್ಟಾಗಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಕೆ. ಮಂಜು ಕೂಡ ಕೆಂಡಮಂಡಲವಾಗಿದ್ದರು. ಬುಕ್ ಮೈ ಶೋನಲ್ಲಿ ದುಡ್ಡುಕೊಟ್ಟರೆ ಒಳ್ಳೆಯ ವಿಮರ್ಶೆ ನೀಡ್ತಾರೆ, ಇಲ್ಲ ಅಂದರೆ ಒಳ್ಳೆಯ ಸಿನಿಮಾಗಳಿಗೆ ಕಳಪೆ ವಿಮರ್ಶೆ ಕೊಡ್ತಾರೆ ಎಂಬ ಆರೋಪ ಕೇಳಿಬಂದಿದೆ.
ಕನ್ನಡ ಸಿನಿಮಾಗಳಿಗೆ ಬುಕ್ ಮೈ ಶೋನಲ್ಲಿ ಕಡಿಮೆ ರೇಟಿಂಗ್ ನೀಡುತ್ತಾರೆ. ಪರಭಾಷಾ ಸಿನಿಮಾಗಳಿಗೆ ಹೆಚ್ಚಿನ ಮಾನ್ಯತೆಯನ್ನು ನೀಡಲಾಗುತ್ತಿದ್ದು, ಕನ್ನಡ ಸಿನಿಮಾಗಳನ್ನು ಕಡೆಗಾಣಿಸಲಾಗಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಕ್ ಮೈ ಶೋಗೆ ಪರ್ಯಾಯವಾಗಿ ಕನ್ನಡ ಆ್ಯಪ್ ತರಲು ಕನ್ನಡ ನಿರ್ಮಾಪಕರು ಚಿಂತನೆ ನಡೆಸಿದ್ದಾರೆ. ಇದೀಗ ಬಹುಭಾಷಾ ನಟ ಪ್ರಕಾಶ್ ರೈ ಅವರು ಸಹ ಇದಕ್ಕೆ ದನಿಗೂಡಿಸಿದ್ದಾರೆ.