ಕಾಲ ತುಂಬಾ ಕೆಟ್ ಹೋಗ್ತಾ ಇದೆ…! ಯಾರನ್ನ ನಂಬೋದು, ಯಾರನ್ನ ನಂಬದೇ ಇರೋದು ಒಂದು ಅರ್ಥವಾಗಲ್ಲ..! ಸ್ವಲ್ಪ ನಂಬಿದರೂ ಮೋಸ ಹೋಗುವ ಅಪಾಯ ಕಟ್ಟಿಟ್ಟ ಬುತ್ತಿ…! ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ವಂಚಿಸೋದು, ನಿಮಗೆ ಲಾಟರಿ ಹೊಡೆದಿದೆ.. ಇಂತಿಷ್ಟು ದುಡ್ಡು ಪಾವತಿಸಿ ಎಂದು ಯಾಮಾರಿಸೋದು ಸೇರಿದಂತೆ ನಾನಾ ರೀತಿಯ ವಂಚನೆ ಪ್ರಕರಣಗಳ ಬಗ್ಗೆ ತಿಳಿದಿದ್ದೀರಿ. ಆದರೆ, ಮ್ಯಾಟ್ರಿಮೋನಿ ಬಳಸಿಕೊಂಡು ವಂಚಿಸಿರೋ ಬಗ್ಗೆ ಗೊತ್ತಾ..!
ನಿಜ, ಇಂತಹದ್ದೊಂದು ಘಟನೆ ನಮ್ಮ ಬೆಂಗಳೂರಲ್ಲೇ ನಡೆದಿದೆ. ಬೆಂಗಳೂರಿನ ಯುವತಿಯೊಬ್ಬರು ಮ್ಯಾಟ್ರಿಮೋನಿಯಲ್ಲಿ ವರನಿಗೆ ಹುಡುಕಾಟ ನಡೆಸಿದ್ದರು. ಈ 29ರ ಯುವತಿಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದವ ಮೊಹಮ್ಮದ್ ಅಬ್ದುಲ್. ಸಧ್ಯ ತಾನು ಅಮೆರಿಕಾದ ನ್ಯೂಜೆರ್ಸಿಯಲ್ಲಿ ಕೆಲಸ ಮಾಡ್ತಿದ್ದು, ಭಾರತಕ್ಕೆ ಬಂದು ಮದುವೆ ಆಗ್ತೀನಿ ಅಂದಿದ್ದನಂತೆ. ಅಷ್ಟೇಅಲ್ಲ ಆಗಸ್ಟ್ 13ರಂದು ಯುವತಿಗೆ ಫೋನ್ ಮಾಡಿ ನಿನಗೊಂದು ಸಪ್ರೈಸ್ ಗಿಫ್ಟ್ ಕಳುಹಿಸಿ ಕೊಡ್ತೀನಿ ಅಂತ ಹೇಳಿದ್ದನಂತೆ…!
ಕೆಲವು ದಿನದ ನಂತರ ಈಕೆಯೆ ಇನ್ನೋರ್ವ ಯುವತಿಯಿಂದ ಫೋನ್ ಬರುತ್ತೆ..! ಆಕೆ ನಾನು ಕೊರಿಯರ್ ಏಜೆನ್ಸಿ ಅವಳು ಎಂದು ಹೇಳಿಕೊಂಡು, ನಿಮಗೆ 18 ಸಾವಿರ ಯುಎಸ್ ಡಾಲರ್ (11.64 ಲಕ್ಷ ರೂ)ಕೊರಿಯರ್ ಮೂಲಕ ಬಂದಿದೆ. ಇದನ್ನು ಪಡೆಯೋಕೆ ಶೇ.18ರಷ್ಟು ಜಿಎಸ್‍ಟಿ ಪಾವತಿ ಮಾಡಿ ಅಂದಿದ್ದಳಂತೆ..! ಇದನ್ನು ನಂಬಿದ ಯುವತಿ ಆ ಏಜೆನ್ಸಿ ಹೆಸರಿಗೆ 2.85 ಲಕ್ಷ ರೂ ಹಣವನ್ನು ಟ್ರಾನ್ಸ್ ಫರ್ ಮಾಡಿದ್ದಾಳೆ..! ಇಷ್ಟಕ್ಕೆ ಸುಮ್ಮನಾಗದ ಕೊರಿಯರ್ ಏಜೆನ್ಸಿ ಹೆಸರಲ್ಲಿ ಕರೆ ಮಾಡಿದ್ದ ಯುವತಿ ಇನ್ನೂ 2.11 ಲಕ್ಷ ಬಾಕಿ ಮೊತ್ತ ಪಾವತಿ ಮಾಡುವಂತೆ ಹೇಳಿದ್ದಾಳೆ..! ಆಗ ಎಚ್ಚೆತ್ತುಕೊಂಡ ಯುವತಿ ಏಜೆನ್ಸಿ ಸಂಖ್ಯೆಗೆ ವಾಪಸ್ಸು ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು…! ಮ್ಯಾಟ್ರಿಮೋನಿಯಲ್ಲಿ ತನಗೆ ಸಿಕ್ಕಿದ ವರ ಮೊಹಮ್ಮದ್ ಅಬ್ದುಲ್‍ನ ಅಕೌಂಟ್ ಕೂಡ ಡಿಲೀಟ್ ಆಗಿದೆ..! ಹೀಗೆ ಯುವತಿ ವಂಚನೆಗೊಳಗಾಗಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…