ಪ್ರಧಾನಮಂತ್ರಿ ಮುದ್ರಾ ಯೋಜನೆ ಬಗ್ಗೆ ಮಾಹಿತಿ ಪ್ರತಿಯೊಬ್ಬರೂ ತಿಳಿಯೆಲೇ ಬೇಕಾದ ಮಾಹಿತಿ ಇಲ್ಲಿದೆ

Date:

ಪ್ರಧಾನಿಮಂತ್ರಿಯವರು `ಮುದ್ರ ಯೋಜನೆ’ ಯನ್ನು ಜಾರಿಗೊಳಿಸಿದ್ದಾರೆಂಬುದು ನಿಮಗೆಲ್ಲಾ ಗೊತ್ತಿಲ್ಲದೇ ಇರೋ ವಿಚಾರವೇನೂ ಅಲ್ಲ. ಆದ್ರೆ ಈ ಯೋಜನೆ ಏನು..? ಎಂಥಾ..? ಈ ಯೋಜನೆ ಅಡಿಯಲ್ಲಿ ಸಾಲ ತಗೋಳೋಕೆ ಇರೋ ಮಾನದಂಡಗಳೇನು..? ಅಂತೆಲ್ಲಾ ಸ್ವಲ್ಪ ಸಂಕ್ಷಿಪ್ತವಾಗಿ ತಿಳಿಸ್ತಾ ಇದ್ದೀವಿ. ಇಂಥಾ ಯೋಜನೆಗಳು ಅರ್ಹರಿಗೆ ತಲುಪಲೇ ಬೇಕು ಅಂತಾದ್ರೆ ನಾವು ನೀವು ಎಲ್ಲರೂ.., ಜನರಿಗೆ ಯೋಜನೆ ಬಗ್ಗೆ ಮಾಹಿತಿ ನೀಡೋ ಕೆಲಸ ಮಾಡ್ಬೇಕು..! ಫ್ರೆಂಡ್ಸ್, ಸರಿ.., ಯೋಜನೆ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ನೀಡ್ತಾ ಇದ್ದೀವಿ..ಪ್ರತಿಯೊಬ್ಬರಿಗೂ ಈ ಮಾಹಿತಿ ಮುಟ್ಟಿಸುವ ಕೆಲಸವನ್ನು ನೀವು ಮಾಡೇ ಮಾಡ್ತೀರ ಅನ್ನೋ ನಂಬಿಕೆ ನಮಗಿದೆ.

ಏನಿದು `ಮುದ್ರಾ ಯೋಜನೆ’..?

ಸ್ವ ಉದ್ಯೋಗ ಮಾಡ್ಬೇಕು ಅಂತ ಆಸಕ್ತಿ ಹೊಂದಿರೋರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ “ಮುದ್ರಾ” ಬ್ಯಾಂಕ್ ಸ್ಥಾಪಿಸಿ, ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತಿದೆ. ಈ ಸಾಲ ನೀಡೋ ಯೋಜನೆಯನ್ನು ಮೊತ್ತದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.
1. ಶಿಶು ಸಾಲ : 50,000 ರೂವರೆಗಿನ ಸಾಲವನ್ನು ಶಿಶು ಸಾಲ ಅಂತಾರೆ.

2. ಕಿಶೋರ ಸಾಲ : 50,000 ರೂಪಾಯಿಗಳಿಗಿಂತ ಮೇಲ್ಪಟ್ಟು 5ಲಕ್ಷ ರೂಪಾಯಿಗಳ ತನಕದ ಸಾಲವನ್ನು `ಕಿಶೋರ’ ಸಾಲವೆಂದು ಕರೀತಾರೆ.

3. ತುರುಣ್ ಸಾಲ : 5ಲಕ್ಷ ದಿಂದ 10 ಲಕ್ಷದವರೆಗಿನ ಸಾಲವನ್ನು ತರುಣ್ ಸಾಲ ಅಂತಾರೆ.

ಫಲಾನುಭವಿಯ ಅರ್ಹತೆ
ಪ್ರಧಾನಮಂತ್ರಿ ಮುದ್ರಾಯೋಜನೆಯಡಿ ಉತ್ಪಾದನೆ, ವ್ಯಾಪಾರ, ಸೇವಾ ವಲಯ, ಕೃಷಿಯೇತರ ವಾಣಿಜ್ಯ ಚಟುವಟಿಕೆ ಕೈಗೊಳ್ಳುವವರಿಗೆ ಕನಿಷ್ಟ 50 ಸಾವಿರದಿಂದ 10 ಲಕ್ಷ ರೂ ವರೆಗೆ ಸಾಲ ನೀಡಲಾಗುತ್ತಿದೆ. ಮೊದಲೇ ಹೇಳಿದಂತೆ ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಎಲ್ಲಾ ಸಾರ್ವಜನಿಕವಲಯದ ಬ್ಯಾಂಕ್ಗಳೂ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳೂ ಕೂಡ ಮುದ್ರಾದ ಅಡಿಯಲ್ಲಿ ಬರುತ್ತವೆ.

ಪ್ರಕ್ರಿಯೆ ಏನು..?
ಶಿಶು ಸಾಲವೇ., ಕಿಶೋರ್ ಸಾಲವೇ ಅಥವಾ ತರುಣ್ ಸಾಲವೇ ಎಂದು ನೋಡಲಾಗುತ್ತದೆ. ಅಂದರೆ ಫಲಾನುಭವಿಗೆ ಎಷ್ಟು ಸಾಲಬೇಕು..? ಅವನು ಮಾಡಹೊರಟಿರುವ ಉದ್ಯೋಗವೇನು ಅಂತ ತಿಳಿದು ಅದಕ್ಕನುಗುಣವಾಗಿ ಸಾಲವನ್ನು ನೀಡುವ ಪ್ರಕ್ರಿಯೆ ಶುರುವಾಗುತ್ತೆ.
ಫಲಾನಿಭವಿಯು ತನ್ನ ಹತ್ತಿರದ ಬ್ಯಾಂಕ್ ಅನ್ನು ಸಂಪರ್ಕಿಸಿ ಅಲ್ಲಿಂದ ಮುದ್ರಾ ಸಾಲಯೋಜನೆಯ ಅಡಿಯಲ್ಲಿ ಸಾಲ ಪಡೆಯ ತಕ್ಕದ್ದು.

ಪುರಾವೆ ಗುರುತೇನು(ಪ್ರೂಫ್ ಆಫ್ ಐಡೆಂಟಿಟಿ) :
* ಸೆಲ್ಫ್ ಅಟೆಸ್ಟೆಡ್ (ಸ್ವಯಂ ಸಹೀಕೃತ) ಚುನಾವಣ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ ಆಗಬಹುದು.

* ವಾಸಸ್ಥಳ ಪುರಾವೆಗಾಗಿ , ಇತ್ತೀಚಿನ ಟೆಲಿಫೋನ್ ಬಿಲ್ ಅಥವಾ ಎಲೆಕ್ಟ್ರಿಸಿಟಿ ಬಿಲ್, ಕಂದಾಯ ರಶೀದಿ( ಎರಡು ತಿಂಗಳಿಗಿಂತ ಹಳೆಯದಾಗಿರಬಾರದು) ಅಥವಾ ಚುನಾವಣ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ವಸತಿ ಪ್ರಮಾಣ ಪತ್ರ ಅಥವಾ ಸ್ಥಳೀಯ ಅಧಿಕಾರಿಯಿಂದ ಕೊಡಲಾದ ಯಾವುದೇ ಗುರುತಿನ ಪತ್ರ

* ಅರ್ಜಿದಾರನ ಇತ್ತೀಚಿಗಿನ ಭಾವಚಿತ್ರ

* ಕೊಂಡುಕೊಳ್ಳುವ ಯಂತ್ರೋಪಕರಣಗಳು ಅಥವಾ ವಸ್ತುವಿನ ಕೊಟೇಷನ್

* ಸರಬರಾಜುದಾರರ ಹೆಸರು ಮತ್ತು ವಿವರ
* ವ್ಯಾಪಾರ ಉದ್ಯಮದ ವಿಳಾಸ ( ಸಂಬಂಧಿಸಿದ ಪರವಾನಿಗೆ ಪತ್ರ)
* ವರ್ಗ ಅಥವಾ ಕೆಟಗರಿ ಪುರಾವೆ (ಪ್ರೂಫ್)
ಮುದ್ರಾ ಒಂದು ಬ್ಯಾಂಕ್ ಅಲ್ಲ :
ಇದನ್ನು ನೆನಪಿನಲ್ಲಿಟ್ಟುಕೊಳ್ಳಿ, ಕರ್ನಾಟಕ ಬ್ಯಾಂಕ್, ಎಸ್.ಬಿ.ಎಮ್. ಇವೇ ಮೊದಲಾದ ಬ್ಯಾಂಕ್ ಗಳ ರೀತಿಯಲ್ಲಿ ಮುದ್ರಾ ಅನ್ನೋದು ಪ್ರತ್ಯೇಕ ಬ್ಯಾಂಕ್ ಅಲ್ಲ. ಈ ಮುದ್ರಾ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಮೊದಲೇ ಹೇಳಿದಂತೆ ಸ್ಥಳೀಯ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದು.

ಮುದ್ರಾ ಕಾರ್ಡ್ :
ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಮಂಜೂರಾದ ನಂತರ ಅಭ್ಯರ್ಥಿ `ಮುದ್ರಾ ಕಾರ್ಡ್’ ಅನ್ನು ಪಡೆಯುತ್ತಾರೆ. ಈ ಕಾರ್ಡ್ ಕ್ರೆಡಿಟ್ ಕಾರ್ಡ್ ರೀತಿಯದ್ದಾಗಿದೆ. ಈ ಕಾರ್ಡ್ ಮೂಲಕ ಅಭ್ಯರ್ಥಿ ತನ್ನ ವ್ಯವಹಾರಕ್ಕೆ ಸಂಬಂಧಿಸಿದಂತ ಕಚ್ಚಾ ಸಾಮಗ್ರಿಗಳನ್ನು ಪಡೆಬಹುದು. ಆದರೆ ಇದರ ಮಿತಿ ಸಾಲದ ಶೇಕಡ 10ರಷ್ಟು..! ಅಂದರೆ ಹೆಚ್ಚೆಂದರೆ 10000 ಮಾತ್ರ.

ಮುದ್ರಾಯೋಜನೆ ಲಾಭವನ್ನು ಪಡೆಯಿರಿ.. ಸಾಧ್ಯವಾದಷ್ಟು ಸ್ವಯಂ ಉದ್ಯೋಗಿಗಳಾಗಿ..ಇನ್ನೂ ಮಾಹಿತಿ ಬೇಕು ಅಂತಾದ್ರೆ ನಿಮ್ಮ ಸ್ಥಳೀಯ ಬ್ಯಾಂಕ್ ಗಳಿಗೆ ಭೇಟಿ ಕೊಡಿ

  • ಶಶಿಧರ ಡಿ ಎಸ್ ದೋಣಿಹಕ್ಲು

 

If you Like this Story , Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...