ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಮತ್ತೆ ಸಾನ್ವಿ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಅವರ ಸಾನ್ವಿ ಮಾತ್ರ, ಆ ಸ್ಟೈಲ್ ಎಲ್ಲರಿಗೂ ಇಷ್ಟವಾಗಿತ್ತು. ಹುಡುಗಿಯರು ಸಾನ್ವಿಯಂತೆ ಕನ್ನಡಕ ಹಾಕೋಳಕ್ಕೆ ಶುರು ಮಾಡಿದ್ರೆ, ಹುಡುಗರು ಸಾನ್ವಿ, ಸಾನ್ವಿ ಅಂತ ಜಪ ಮಾಡೋಕೆ ಆರಂಭಿಸಿದ್ರು. ಒಂದೇ ಸಿನಿಮಾದಲ್ಲಿ ರಶ್ಮಿಕ ಹುಡುಗರ ನಿದ್ರೆ ಗೆಡಿಸಿದ್ರು.
ಈ ಸಿನಿಮಾ ಮೂಲಕ ರಶ್ಮಿಕಾ ಅವರಿಗೆ ಹೆಚ್ಚಿನ ಅವಕಾಶಗಳು ಬರುತ್ತಿವೆ. ಇದೀಗ ಮತ್ತೆ ಸಾನ್ವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಕಿರಿಕ್ ಚೆಲುವೆ. ಆದರೆ, ಈ ಬಾರಿ ಅವರು ಸಾನ್ವಿಯಾಗಿರೋದು ಕನ್ನಡದಲ್ಲಿ ಅಲ್ಲ…! ತೆಲುಗಿನಲ್ಲಿ.
ತೆಲುಗಿನ ಚಲೋ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಾಗಶೌರ್ಯ ನಾಯಕ ನಟನಾಗಿ ಅಭಿನಯಿಸ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ನಾಯಕಿ. ಇದರಲ್ಲಿ ಇವರು ಸಾನ್ವಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.