No menu items!
13.9 C
Munich
Wednesday, April 29, 2026

ಇದು ಶಾಕಿಂಗ್ ನ್ಯೂಸ್…!

Must read

ಇದು ನಿಜಕ್ಕೂ ಶಾಂಕಿಂಗ್ ನ್ಯೂಸ್…! ರಾಜ್ಯದಲ್ಲಿ ಲಿಂಗಾನುಪಾತ ಇಳಿಮುಖವಾಗಿ ಸಾಗಿದೆ.


2002ರಲ್ಲಿ ಪೂರ್ವ ನಿರ್ಧಾರ ಮತ್ತು ಭ್ರೂಣ ಪತ್ತೆ ಕಾಯ್ದೆಗೆ (ಪಿಸಿ ಅಂಡ್ ಪಿಎನ್ ಡಿಟಿ ಆ್ಯಕ್ಟ್) ತಿದ್ದುಪಡಿ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಬಹುದು…! ಕಳೆದ 15 ವರ್ಷಗಳಲ್ಲಿ ಈ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ 79 ಪ್ರಕರಣಗಳು ವರದಿ ಆಗಿದ್ದರೂ ಶಿಕ್ಷೆ ಆಗಿದ್ದು 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಎಂದು ತಿಳಿಸಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.


ಬೆಳಗಾವಿ ಅಧಿವೇಶದಲ್ಲಿ ಶೂನ್ಯವೇಳೆಯಲ್ಲಿ ಮಾತಾಡಿದ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ರು.  2014ರಲ್ಲಿ ಲಿಂಗಾನುಪಾತ 917 ಇತ್ತು. ಅಂದರೆ ಪ್ರತಿ 1000 ಗಂಡುಮಕ್ಕಳಿಗೆ 917 ಹೆಣ್ಣುಮಕ್ಕಳಿದ್ದರು. 2017ರ ವೇಳೆಗೆ ಈ ಪ್ರಮಾಣ 898ಕ್ಕೆ ಇಳಿಕೆಯಾಗಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದ ಅವರು, ತಪ್ಪಿತಸ್ಥರಿಗೆ ಶಿಕ್ಷೆ ಆದಲ್ಲಿ ಮಾತ್ರ ಲಿಂಗಾನುಪಾತದ ವ್ಯತ್ಯಾಸವನ್ನು ಸರಿದೂಗಿಸಲು ಸಾಧ್ಯ ಅಥವಾ ಅಂತರ ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.


ಲಿಂಗಾನುಪಾತದಲ್ಲಿ ಈ ವ್ಯತ್ಯಾಸ ನಿಜಕ್ಕೂ ಆಘಾತಕಾರಿ ವಿಷಯವಾಗಿದ್ದು, ಭ್ರೂಣ ಪತ್ತೆ, ಭ್ರೂಣ ಹತ್ಯೆಗೆ ಕಡಿವಾಣ ಹಾಕಲೇಬೇಕು.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article