ಕನ್ನಡತಿ ದೀಪಿಕಾ ಪಡುಕೋಣೆ ನಟನೆಯ ಬಾಲಿವುಡ್ ಸಿನಿಮಾ ‘ಪದ್ಮಾವತಿ’ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿರೋದು ಗೊತ್ತೇ ಇದೆ…! ಇದೀಗ ಕನ್ನಡದ ‘ಅತಿರಥ’ ಸಿನಿಮಾದ ವಿರುದ್ಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ…!
ಈ ಸಿನಿಮಾದಲ್ಲಿ ಅಂತಹದ್ದೇನಿದೆ…! ಯಾರಿಗೆ ನೋವುಂಟು ಮಾಡುವಂತಹ ಸನ್ನಿವೇಶ ಚಿತ್ರದಲ್ಲಿದೆ…? ಅಂತೆಲ್ಲಾ ಹುಡ್ಕೋಕೆ ಹೋಗ್ಬೇಡಿ. ಈ ಸಿನಿಮಾವನ್ನು ವಿರೋಧಿಸಲು ಕಾರಣ ನಾಯಕ ನಟ ಚೇತನ್…!
ಹೌದು ಅತಿರಥ ಚೇತನ್ ನಟನೆಯ ಸಿನಿಮಾ ಎಂಬ ಕಾರಣಕ್ಕೆ ವಿರೋಧಕ್ಕೆ ತುತ್ತಾಗಿದೆ…! ಚೇತನ್ ಹಿಂದೂ ವಿರೋಧಿ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಚಾಮರಾಜ ನಗರದಲ್ಲಿ ಭಜರಂಗದಳ ಮತ್ತು ಅಜಾದ್ ಹಿಂದೂ ಸೇನೆ ಕಾರ್ಯಕರ್ತರು ಸಿನಿಮಾದ ಪೋಸ್ಟರ್ ಹರಿದು ಹಾಕಿ, ಚಿತ್ರಪ್ರದರ್ಶನ ರದ್ದುಪಡಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.