ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರತ್ನ ಪ್ರಭಾ ಅವರನ್ನು ನೇಮಕಮಾಡಲಾಗಿದೆ.
ಸುಭಾಸ್ ಚಂದ್ರ ಕುಂಟಿಯಾ ಅವರು ನವೆಂಬರ್ 11ಕ್ಕೆ ನಿವೃತ್ತರಾಗಿದ್ದರು. ಇವರ ನಿವೃತ್ತಿಯಿಂದ ತೆರವಾದ ಹುದ್ದೆಗೆ ರತ್ನ ಪ್ರಭಾ ಅವರನ್ನು ನೇಮಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರತ್ನಾ ಪ್ರಭ ಅವರು 1981ರ ಐಎಎಸ್ ಬ್ಯಾಚ್‍ನವರಾಗಿದ್ದು, ಇವರ ಸೇವಾವಧಿ 6 ತಿಂಗಳು ಮಾತ್ರವಿದೆ. ಮಾರ್ಚ್ 13ಕ್ಕೆ ನಿವೃತ್ತರಾಗಲಿದ್ದಾರೆ. ಡಿಜಿ ಐಜಿಯಾಗಿ ನೀಲಮಣಿ ರಾಜು ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಮುಖ್ಯಕಾರ್ಯದರ್ಶಿ ಹುದ್ದೆಗೆ ರತ್ನ ಪ್ರಭಾ ಅವರನ್ನು ನೇಮಕಮಾಡಿರುವುದರಿಂದ ರಾಜ್ಯದ ಪ್ರಮುಖ ಎರಡು ಹುದ್ದೆಗಳುವ ಮಹಿಳೆಯರ ಪಾಲಾದಂತಾಗಿದೆ.