ಅವಿನಾಶ್, ಅಕ್ಷತಾಳ ಮಾವನ ಮಗ.! ಅವನು ಅವರೂರು ತೀರ್ಥಹಳ್ಳಿಯಲ್ಲಿಯೇ ಪೈನಲ್ ಈಯರ್ ಬಿಕಾಂ ಮಾಡ್ತಿದ್ದ! ಅಕ್ಷತಾ ಅವಳೂರು ಶೃಂಗೇರಿಯಲ್ಲಿ ದ್ವಿತೀಯ ವರ್ಷದ ಬಿಎಸ್ಸ್ಸಿ ಮಾಡ್ತಾ ಇದ್ಲು! ಅವರಿಬ್ಬರ ಪ್ರೀತಿ, ಮನೆಯವರಿಗೂ ಗೊತ್ತಿತ್ತು! ಬುದ್ದಿ ಹೇಳಿದ್ರೂ ಇಬ್ರೂ ಕೇಳಿರಲಿಲ್ಲ! ಆಮೇಲೆ ಹೇಗಿದ್ರೂ ರಿಲೇಟಿವ್ಸ್ ಅಲ್ವಾ? ಇರ್ಲಿ. ಅಂತ ಅವರಿಬ್ಬರ ಮನೆ ಅವ್ರೇ ಸುಮ್ನೆ ಆಗಿದ್ರು! ಹೀಗಿರುವಾಗ್ಲೇ ಒಂದು ದಿನ…?
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅವಿ, ಹೇ..ಅವಿ..ಹೇ..ಅವಿ.. ಮಾತಾಡೋ ಏನಾಯ್ತು? ಹೇ.. ಮಾತಾಡೋ! ಅಂಥ ಅಕ್ಷತಾ ಎಷ್ಟೇ ಕೂಗಿದ್ರು, ಕಿರುಚಾಡಿದ್ರು ಅವನು ಮಾತಾಡ್ತಾ ಇಲ್ಲ! ಇದ್ದಕ್ಕಿದ್ದ ಹಾಗೆ ಫೋನ್ ಕಾಲ್ ಕಟ್ಟಾಗುತ್ತೆ! ಮತ್ತೆ ಮತ್ತೆ ಫೊನ್ ಮಾಡಿದ್ರೂ ಸ್ವಿಚ್ ಆಫ್! ಕೂಡ್ಲೆ ಅಕ್ಷತಾ ತನ್ನ ತಂದೆಗೆ ಹೇಳ್ತಾಳೆ “ಅಪ್ಪಾ ಅವಿನಾಶ್ ಗೆ ಫೋನ್ ಮಾಡಿದ್ದೆ! ನಮ್ ಮನೆಗೆ ಹೊರಟಿದ್ದೇನೆಂದ! ಆದ್ರೆ ಮಾತಾಡ್ತಾ ಮಾತಾಡ್ತ ಇದ್ದಕ್ಕಿದ್ದ ಹಾಗೆ ಕಾಲ್ ಕಟ್ ಆಯ್ತಾಪ್ಪ! ಮತ್ತೆ ಕಾಲ್ ಹೋಗ್ತಾ ಇಲ್ಲ”! “ಹೌದಾ, ಏನ್ ಬೈಕ್ನಲ್ಲಿ ಹೊರಟಿದ್ನಂತಾ? ಅಂತ ಕೇಳ್ತಾರೆ ಅಕ್ಷತಾಳ ತಂದೆ! ಹೌದಪ್ಪಾ, ಹೊಸ ಬೈಕ್ ತಗೊಂಡಿದ್ನಂತೆ, ಅದಕ್ಕೆ ನಮ್ ಮನೆಗೆ ಬಂದು ಅದನ್ನು ತೋರಿಸಿದ ಹಾಗೂ ಆಗುತ್ತೆ, ಮತ್ತೆ ದೇವಸ್ಥಾನದಲ್ಲಿ ಪೂಜೆ ಮಾಡ್ಸ್ಕೊಂಡು ಹೋದಂಗೂ ಆಗುತ್ತೆ ಅಂತ ಹೊರಿಟಿದ್ನಂತೆ ಅಪ್ಪಾ…, ಅಂತಾಳೆ! “ಬುದ್ದಿ ಭಾಷೆ ಇಲ್ಲ! ಅದೂ ರಾತ್ರಿ ಹೊತ್ತು ಯಾವ್ ಪುರುಷಾರ್ಥಕ್ಕೆ ಬೈಕ್ ಅಲ್ಲಿ ಬರ್ಬೇಕು? ನಾಳೆ ಬೆಳಿಗ್ಗೆ ಬಂದ್ರೆ ಏನ್ ಆಗ್ತಾ ಇತ್ತಂತೆ? ಬೆಂಕಿ ಬಿದ್ದ ಮೊಬೈಲ್ ಬೇರೆ! ಬೈಕ್ನಲ್ಲಿ ಬರುವಾಗ ಯಾಕ್ ಮೊಬೈಲ್ನಲ್ಲಿ ಮಾತಾಡ್ ಬೇಕು? ಯಾವಾಗ ಬುದ್ದಿ ಬರುತ್ತೋ”? ಅಂತಾ ಒಂದೇ ಸಮ್ನೆ ಕೂಗಾಡ್ತಾರೆ ಅಕ್ಷತಾಳ ತಂದೆ! ” ಅಯ್ಯೋ, ಏನೂ ಆಗಲ್ಲ ಬಿಡ್ರಿ ಸುಮ್ನೇ ಯಾಕ್ ಕೂಗ್ತೀರಾ? ಮೊಬೈಲ್ ಬ್ಯಾಟ್ರೀ ಲೋ ಆಗಿ ಸ್ವಿಚ್ ಆಫ್ ಆಗಿರ್ಬಹುದು! ಎಂದು ಅಕ್ಷತಾಳ ಅಮ್ಮಾ ಪ್ರಿಡಿಕ್ಟ್ ಮಾಡ್ತಾರೆ! ತಡೀರಿ, ಅವಿ ಮನೆಗೆ ಫೋನ್ ಮಾಡಿ ನೋಡೋಣ ಎಂದು ಅವಿನಾಶ್ ಮನೆಗೆ ಫೋನ್ ಮಾಡಿದ್ರೂ ಯಾರೂ ಪಿಕ್ ಮಾಡ್ತಾ ಇಲ್ಲ! ಈಗ, ಅಕ್ಷತಾಳ ಅಮ್ಮನಿಗೂ ಕೂಡ ತುಂಬಾನೆ ಗಾಬ್ರಿ ಆಗುತ್ತೆ! ಅಕ್ಷತಾಗೆ ಫುಲ್ ಟೆನ್ಷನ್ ಆಗುತ್ತೆ!
ಸ್ವಲ್ಪ ಹೊತ್ತಿಗೆ ಅವಿನಾಶ್ ತಂದೆ, ಅಕ್ಷತಾಳ ತಂದೆಗೆ ಫೋನ್ ಮಾಡ್ತಾರೆ! “ಭಾವ, ಅರ್ಜೆಂಟ್ ಆಗಿ ದನ್ವಂತರಿ ಹಾಸ್ಪೆಟಲ್ ಗೆ ಹೋಗಿ! ಅವಿನಾಶ್ ಗೆ ಕಮ್ಮರಡಿ ಹತ್ರ ಆ್ಯಕ್ಸಿಡೆಂಟ್ ಆಗಿದೆಯಂತೆ! ಶೃಂಗೇರಿಗೆ ಕರ್ಕೊಂಡು ಬರ್ತಾ ಇದ್ದಾರಂತೆ! ನಮ್ಗೆ ಈಗ ಗೊತ್ತಾಯ್ತು, ನಾವು ಹೊರಟಿದ್ದೇವೆ, ಬರ್ತೀವಿ… ನೀವ್ ಈಗ್ಲೇ ಹೋಗಿ ಭಾವ” ಎಂದು ಹೇಳ್ತಾರೆ! ಅವ್ರು ಅಷ್ಟು ಹೇಳಿದ್ದೇ ತಡ. ತಡಮಾಡದೆ , ಅಕ್ಷತಾಳ ತಂದೆ, ಅಕ್ಷತಾ ಮತ್ತೆ ಅವಳ ಅಮ್ಮಾ ಮೂರೂ ಜನ ದನ್ವಂತರಿ ಹಾಸ್ಪೆಟಲ್ ಗೆ ಹೋಗ್ತಾರೆ! ಅವಿನಾಶ್ ಗೆ ತುರ್ತು ಚಿಕೆತ್ಸೆ ನೀಡಿದ ಡಾಕ್ಟರ್”ಇಲ್ಲಿ ಆಗಲ್ಲ, ಕೂಡ್ಲೆ ನೀವು ಮಣಿಪಾಲ್ ಗೆ ಕರ್ಕೊಂಡು ಹೋಗಿ ಅಂತಾರೆ! ಆ್ಯಕ್ಸಿಡೆಂಟ್ ಆಗಿದೆ ಅಂತೆ!ಅಷ್ಟೊತ್ತಿಗೆ, ಅವಿನಾಶ್ ಅಪ್ಪ, ಅಮ್ಮ ಅಣ್ಣಾ ಕೂಡ ಅಲ್ಲಿಗೆ ಬರ್ತಾರೆ!
ಅವಿನಾಶ್ ನನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗುತ್ತೆ! ದುರಾದೃಷ್ಟವಶಾತ್ ಅವನ ಎರಡೂ ಕಿಡ್ನಿಗೆ ಬಲವಾದ ಪೆಟ್ಟು ಬಿದ್ದು, ಡ್ಯಾಮ್ಯಾಜ್ ಆಗಿರುತ್ತೆ! ಡಾಕ್ಟರ್ ಹೇಳ್ತಾರೆ, ಅರ್ಜೆಂಟ್ ಆಗಿ ಯಾರಾದ್ರೂ “ಒಪಾಸಿಟೀವ್ ” ಬ್ಲಡ್ ಗ್ರೂಪ್ ನವರು ಕಿಡ್ನಿ ಕೊಟ್ರೆ ಹುಡುಗನನ್ನು ಬದುಕಿಸ ಬಹುದು ಇಲ್ಲಾ ಅಂದ್ರೆ ಸಾಧ್ಯಾನೇ ಇಲ್ಲ. ಅಂತ ಹೇಳ್ತಾರೆ! ಎಲ್ಲರಿಗೂ ಮನೆ ಮಗನನ್ನು ಕಳೆದು ಕೊಳ್ಳಬೇಕಲ್ಲಾ ಎಂಬ ಸಂಕಟ ಶುರುವಾಗುತ್ತೆ! ಆ ನೋವು ಯಾರಿಗೂ ತಡೆದು ಕೊಳ್ಳಲು ಆಗ್ತಾ ಇರಲ್ಲ! ಏನ್ ಮಾಡೋದಪ್ಪಾ ದೇವ್ರೇ ಅಂತಾ ತಲೆ ಜಜ್ಜಿ ಕೊಳ್ತಾ ಇರುವಾಗ! ” ಡಾಕ್ಟ್ರೇ, ನಾನು ಕಿಡ್ನಿ ಕೊಡ್ತೀನಿ, ತಗೊಳಿ ಅಂತಾಳೆ! ಅಕ್ಷತಾ.
ಅಕ್ಷತಾಳ ಅಮ್ಮ, ಅಪ್ಪ ಏನೂ ಮಾತಾಡದೇ ಮುಖ ಮುಖ ನೋಡಿ ಸುಮ್ನೆ ಆಗ್ತಾರೆ! ಆದ್ರೆ ಅವಿನಾಶ್ ಅಪ್ಪಾ ಕೇಳ್ತಾರೆ “ಹೇ, ಯಾಕಮ್ಮಾ ನೀನು ಕಿಡ್ನಿ ಕೊಡ್ತಿಯಾ? ಇನ್ನೂ ತುಂಬಾ ಚಿಕ್ಕವಳಮ್ಮಾ ನೀನು”! ” ಅಂಕಲ್ ದಯವಿಟ್ಟು ಯಾರು ನನ್ನನ್ನು ತಡಿಬೇಡಿ, ಅವಿನಾಶ್ ಗೆ ಆ್ಯಕ್ಸಿಡೆಂಟ್ ಆಗೋಕೆ ನಾನೇ ಕಾರಣ! ಅವಿ ಬೆಳಿಗ್ಗೆ ಫೋನ್ ಮಾಡಿದ್ದ, ಇವತ್ತು ಬೈಕ್ ಹೊಸ ತಗೋಳ್ತೀನಿ ಅಂದ. ಅದ್ಕೆ ಹೇ, ಬೈಕ್ ತಗೊಂಡು ಸೀದಾ ಶೃಂಗೇರಿಗೇ ಬಾ…, ನಾಳೆ ಹೇಗಿದ್ರು ಕಾಲೇಜಿಗೆ ರಜೆ ಇದ್ಯಲ್ಲಾ? ನಾನು, ನೀನು ದುರ್ಗಾ ದೇವಸ್ಥಾನಕ್ಕೆ ಹೋಗೋಣ! ಹೊಸ ಬೈಕಿಗೆ ಆ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ರೆ ಒಳ್ಳೇದು ಅಂತ ನಾನೇ ಕರ್ದಿದ್ದು! ಮಧ್ಯಾಹ್ನ ಹೊರಡಲಿಕ್ಕೆ ಆಗ್ಲಿಲ್ಲ ಅಂತ, ರಾತ್ರಿ ಏಳು ಗಂಟೆಗೆ ನನಗೋಸ್ಕರ ಹೊರಟು ಬಂದ! ಅವ್ನು ಸುಮ್ನೆ ನಮ್ ಮನೆಗೇ ಬರ್ತಿದ್ದ! ಅವ್ನು ಬೈಕ್ನಲ್ಲಿ ಬರ್ತಿದ್ದಾನೆ ಅಂತ ಗೊತ್ತಿದ್ರೂ ನಾನೇ ಫೋನ್ ಮಾಡಿದ್ದೆ! ನನ್ ಜೊತೆ ಫೋನಲ್ಲಿ ಮಾತಾಡ್ತಾ ಬಂದಿದ್ರಿಂದನೇ ಅವ್ನಿಗೆ ಈ ಪರಿಸ್ಥಿತಿ ಅಂತ ಅಳ್ತಾ ಅಳ್ತಾನೆ, ಕಿಡ್ನಿ ಕೊಡೋಕೆ ಅಂಥ ಆಪರೇಷನ್ ಥಿಯೇಟರ್ ಗೆ ಹೋಗ್ತಾಳೆ ಅಕ್ಷತಾ!
ಅಕ್ಷತಾ ಕಿಡ್ನಿ ಕೊಟ್ಟಿದ್ರಿಂದ ಅವಿನಾಶ್ ಬದುಕುಳಿದ! ಈಗ ಚೇತರಿಸಿ ಕೊಳ್ಳುತ್ತಿದ್ದಾನೆ!
ನಿಜಕ್ಕೂ ಇವಳಂಥಾ ಪ್ರಿಯತಮೆ ಯಾರಿಗೂ ಸಿಗಲ್ಲ ಬಿಡ್ರೀ…! ಅಕ್ಷತಾಳನ್ನ ಮದ್ವೆ ಆಗ್ತಾ ಇರೋ ಅವಿನಾಶ್ ನಿಜಕ್ಕೂ ಅದೃಷ್ಟವಂತ! ಇವ್ರು ನೂರು ಕಾಲ ಚೆನ್ನಾಗಿ ಬಾಳಲಿ! ಈ ಪ್ರೇಮಿಗಳು ಎಲ್ಲರಿಗೂ ಮಾದರಿ ಆಗ್ಲಿ ಅಂತ ಹರಸೋಣ…!
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಪ್ರೀತಿಸಿದ ಹುಡುಗಿ ಅದೆಂಥಾ ಮೋಸ ಮಾಡಿಬಿಟ್ಲು..! ಮಾಡಿದ ಮೋಸಕ್ಕೆ ಅವಳ ಬದುಕು ಏನಾಯ್ತು ಗೊತ್ತಾ..?
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?