ಬಿಬಿಎಂಪಿ ಎಲೆಕ್ಷನ್ – ಸಮೀಕ್ಷೆಗಳು ಹೇಳಿದ್ದೆಷ್ಟು..? ಬಂದಿದ್ದೆಷ್ಟು..?

0
87

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ.. ಒಟ್ಟು 198 ಸೀಟುಗಳಲ್ಲಿ 100 ಕ್ಷೇತ್ರಗಳು ಬಿಜೆಪಿಯ ಪಾಲಾಗಿದೆ..! ಕಾಂಗ್ರೆಸ್ 76 ಸ್ಥಾನಗಳಿಗೆ ತೃಪ್ತಿಪಡೆದಿದೆ..! ಜೆಡಿಎಸ್ ಹಂಗೂಹಿಂಗೂ 14 ಕ್ಷೇತ್ರದಲ್ಲಿ ಜೈ ಅಂದಿದೆ..!ಪಕ್ಷೇತರರು ಆಶ್ಚರ್ಯವೆಂಬಂತೆ 8 ಕಡೆಗಳಲ್ಲಿ ಜಯಗಳಿಸಿದ್ದಾರೆ..! ಆದ್ರೆ ಫಲಿತಾಂಶಕ್ಕೆ ಮುಂಚೆ ಸಾಕಷ್ಟು ಸಮೀಕ್ಷೆಗಳೂ ನಡೆದಿದ್ವು. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೇ ಅತಿಹೆಚ್ಚು ಸೀಟು ಸಿಗುತ್ತೆ ಅಂತ ಎಲ್ಲ ಸಮೀಕ್ಷೆಗಳೂ ಭವಿಷ್ಯ ನುಡಿದಿತ್ತು..! ಆದ್ರೆ ಸಮೀಕ್ಷೆ ಈಗ ಉಲ್ಟಾಪಲ್ಟಾ ಆಗಿದೆ. ಯಾವ ಸಮೀಕ್ಷೆಗಳೂ ಫಲಿತಾಂಕ್ಕೆ ಹತ್ತಿರವಾಗಿಲ್ಲದಿರೋದು ನಿಜಕ್ಕೂ ಆಶ್ಚರ್ಯ ಹುಟ್ಟಿಸಿದೆ. ಸಾಮಾನ್ಯವಾಗಿ ಪ್ರತೀಸಲ ಒಂದಲ್ಲಾ ಒಂದು ಸಮೀಕ್ಷೆ ರಿಸಲ್ಟ್ ಗೆ ಹತ್ತಿರ ಇದ್ದೇ ಇರ್ತಿತ್ತು. ಆದ್ರೆ ಈ ಸಲ ಲೆಕ್ಕಾಚಾರ ಎಲ್ಲಾ ಉಲ್ಟಾ ಆಗಿದೆ..! ಬೆಂಗಳೂರಿನ ಮತದಾರ ಗುಟ್ಟುಬಿಟ್ಟುಕೊಡದೇ ಬಿಜೆಪಿಗೇ ಆಶ್ಚರ್ಯವಾಗೋ ಹಾಗೆ ಫಲಿತಾಂಶ ನೀಡಿದ್ದಾನೆ..! ಹಾಗೆ ನೋಡಿದ್ರೆ ಸಮೀಕ್ಷೆಗಳಲ್ಲಿ ಪಬ್ಲಿಕ್ ಟಿವಿ, ಟಿವಿ9 ಮಾತ್ರ ಬಿಜೆಪಿ ತೊಂಭತ್ತರ ಗಡಿ ತಲುಪಬಹುದು ಅಂತ ಊಹಿಸಿತ್ತು. ಬೇರೆ ಎಲ್ಲಾ ಸಮೀಕ್ಷೆಗಳು ಬಿಜೆಪಿ 70ರಿಂದ 85ಕ್ಕೆ ಸುಸ್ತು ಅಂತ ಹೇಳಿತ್ತು..! ಆದ್ರೆ ಸಮೀಕ್ಷೆಗಳು ಸೈಲೆಂಟಾಗೋ ಲೆವೆಲ್ಲಿಗೆ ರಿಸಲ್ಟ್ ಬಂದಿದೆ.. ಯಾವ ಸಮೀಕ್ಷೆ, ಯಾವ್ಯಾವ ಪಕ್ಷಕ್ಕೆ, ಎಷ್ಟು ಸೀಟ್ ಬರಬಹುದು ಅಂತ ಹೇಳಿತ್ತು. ಹಾಗೂ ಈಗ ಬಂದಿರೋ ಸೀಟುಗಳೆಷ್ಟು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ..!

Bruhat-Bengaluru-Mahanagara-Palike-Election-results

-ಕೀರ್ತಿ ಶಂಕರಘಟ್ಟ

LEAVE A REPLY

Please enter your comment!
Please enter your name here