ಯಾರೋ ತಪ್ಪು ಮಾಡಿದ್ದಾರೆ ಅಂತ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು..! ತಪ್ಪು ಮಾಡಿದವರಿಗೆ ಶಿಕ್ಷೆ ನೀಡೋಕೆ ಅಂತ ಕಾನೂನು ವ್ಯವಸ್ಥೆ ಇದೆ..! ಈ ಕಾನೂನನ್ನೇ ಲೆಕ್ಕಿಸದೆ ಆರೋಪಿಯನ್ನು ಪ್ರಜೆಗಳು ಶಿಕ್ಷಿಸುವುದು ತಪ್ಪು..! ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕಿಂತ ದೊಡ್ಡದಾದ ತಪ್ಪು ಮತ್ತೊಂದಿಲ್ಲ ಅನಿಸುತ್ತದೆ..! ಆರೋಪಿಗಳನ್ನು ವಿಚಾರಸಿದೆ ತಮ್ಮಿಷ್ಟದಂತೆ ಊರಮಂದಿಯೇ ಶಿಕ್ಷೆ ಕೊಡುವುದಾದರೆ ಕಾನೂನು, ನ್ಯಾಯಾಂಗ ವ್ಯವಸ್ಥೆ ಇರುವುದಾದರೂ ಏಕೆ ಅಲ್ಲವೇ..! ನಮ್ಮ ಜನರೇ ಕಾನೂನನ್ನು ಕೈಗೆತ್ತಿಕೊಂಡು ಆರೋಪಿಗಳಿಗೆ ಸಹಿಸಲಾಗದ ಶಿಕ್ಷೆಯನ್ನು ನೀಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ..! ಇಂಥಾ ಅಮಾನುಶ ಘಟನೆಯೊಂದು ನವೆಂಬರ್ 7ರಂದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ವರದಿಯಾಗಿದೆ..! ಆ ಘಟನೆಯ ವಿವರ ಇಲ್ಲದೆ.
ಅದು ಮಧ್ಯಪ್ರದೇಶದ ಖಂಡ್ವ. ಕಳೆದ ಶುಕ್ರವಾರ ಸಂಜೆ ಅಂದರೆ ನವೆಂಬರ್ 6ರಂದು ಊರ ಮಂದಿ ಎಲ್ಲಾ 35 ವರ್ಷದ ಮಹಿಳೆಯೊಡನೆ ಜಗಳ ಮಾಡಿದ್ರು..! ಆದಿವಾಸಿ ಸಮುದಾಯಕ್ಕೆ ಸೇರಿರೋ ಆ ಮಹಿಳೆ ಬ್ಲಾಕ್ ಮ್ಯಾಜಿಕ್ ( ಮಾಟ-ಮಂತ್ರ) ಮಾಡ್ತಾ ಇದ್ದಾಳೆ ಅಂತ ಅವಳನ್ನು ಎಲ್ಲರೂ ತರಾಟೆಗೆ ತೆಗೆದು ಕೊಂಡಿದ್ರು..! ಅಷ್ಟೇ ಅಲ್ಲ ಮಧ್ಯರಾತ್ರಿ ಆಕೆಯನ್ನು ಮನೆಯಿಂದ ಹೊರಗಡೆ ಎಳೆದು ಬೀದಿಯಲ್ಲಿ ನಿಲ್ಲಿಸಿದ್ರು..! ಆಕೆಯ ಗಂಡ, ಆಕೆಯನ್ನು ತಪ್ಪಿಸಲು ಬಂದಿದ್ದರಿಂದ ಆತನ ಮೇಲೂ ಹಲ್ಲೆ ಮಾಡಿದ್ರು..! ಕೊನೆಗೆ ಆತ ಅವರಿಂದ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ..! ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸೋ ಮೊದಲು ಆ ಮಹಿಳೆಯ ಬಟ್ಟೆಯನ್ನೆಲ್ಲಾ ಕಿತ್ತು… ಅವಳ ಬೆತ್ತಲೆ ಮೆರವಣಿಗೆ ಮಾಡಿ, ಬಲವಂತದಿಂದ ಚರಂಡಿ ನೀರನ್ನೂ ಕುಡಿಸಿ ತಮ್ಮ ವಿಕೃತ ಮನಸ್ಸನ್ನು ಜನ ತೋರಿಸಿ ಬಿಟ್ಟಿದ್ರು..! ಪೊಲೀಸರು ಬರದೇ ಇದ್ದಿದ್ರೆ ಮುಂದೇನಾಗ್ತಾ ಇತ್ತೋ ಗೊತ್ತಿಲ್ಲ..! ಮೈ ಎಲ್ಲಾ ಗಾಯಗೊಂಡಿರುವ ಆಕೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..!
ಮಹಿಳೆ ಮಾಟ-ಮಂತ್ರವೆಲ್ಲಾ ಮಾಡ್ತಾ ಇದ್ದಳೋ ಇಲ್ಲವೋ ಗೊತ್ತಿಲ್ಲ..! ಮಾಟ ಮಂತ್ರ ಎಲ್ಲಾ ಇದೆ ಅಂತಾದ್ರೆ..ಆಕೆ ಅಂಥಾ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ತಾ ಇದ್ದಳೆಂದಾಗಿದ್ರೆ ಕಾನೂನು ಹೋರಾಟವನ್ನು ಜನ ಮಾಡಬೇಕಿತ್ತು..! ಅದನ್ನು ಬಿಟ್ಟು ಹೀಗೆ ಕ್ರೂರವಾಗಿ ನಡೆದುಕೊಂಡಿರುವುದು ತಪ್ಪು..! ನಮ್ಮ ಕಾನೂನು ವ್ಯವಸ್ಥೆ ಪರಿಣಾಮಕಾರಿಯಾಗಿದೆ ಅಂದಾದರೆ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆ ಆಗಲೇ ಬೇಕಿದೆ..! ಆರೋಪಿಯ ವಿರುದ್ಧ ಕಾನೂನನ್ನು ಕೈಗೆತ್ತಿಕೊಳ್ಳುವುದು ದೊಡ್ಡ ಅಪರಾಧ ಅಂತ ನನಗನಿಸುತ್ತಿದೆ..! ಇಂಥಾ ಘಟನೆಗಳು ನಡೆಯದಂತೆ ನೋಡಿಕೊಳ್ಳ ಬೇಕಾಗಿದ್ದು ನಾಗರಿಕ ಸಮಾಜದ ಪ್ರತಿಯೊಬ್ಬನ ಹೊಣೆ..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!