ಪರೀಕ್ಷೆಯಲ್ಲಿ ಫೇಲ್ ಅಂತ ಆತ್ಮಹತ್ಯೆ ಮಾಡಿಕೊಂಡ, ನಾಲ್ಕು ತಿಂಗಳ ಬಳಿಕ ಬಂದ ಮರು ಫಲಿತಾಂಶದಲ್ಲಿ ಇವನೇ ತರಗತಿ ಟಾಪರ್ ಆಗಿದ್ದ..!

Date:

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೊಂದು ಲೋಪವಿದೆ ಅನ್ನೋದಕ್ಕೆ ಈ ಸ್ಟೋರಿ ಉದಾಹರಣೆ ಆಗುತ್ತೆ..! ಇಲಾಖೆಯವರ ಬೇಜವಬ್ದಾರಿತನ ವಿದ್ಯಾರ್ಥಿಯೊಬ್ಬನ ಜೀವವನ್ನೇ ತೆಗೆದ ಕರುಣಾಜನಕ ಕತೆಯಿದೆ..! ಈ ಸ್ಟೋರಿಯನ್ನು ಓದಿದ ನೀವು ಸಿಕ್ಕಸಿಕ್ಕಲ್ಲಿ ಶೇರ್ ಮಾಡಿ, ಇಡೀ ದೇಶದ ವ್ಯವಸ್ಥೆಗೆ ಉಗಿದು ಉಪ್ಪಿನಕಾಯಿ ಹಾಕಿ..! ಯಾಕಪ್ಪ ಅಂದ್ರೆ ಇನ್ನಾದ್ರೂ ಶಿಕ್ಷಣ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಕೊಳ್ಳಲಿ..! ಇವರ ಎಡವಟ್ಟಿನಿಂದ ಸಾವನಪ್ಪಿದ ವಿದ್ಯಾರ್ಥಿ ಮತ್ತೆ ಹುಟ್ಟಿ ಬರಲಾರ..! ಆದ್ರೆ ಇನ್ನಾದರೂ ಇಂಥಾ ಅಚಾತುರ್ಯ ನಡೆಯದೇ ಹೋಗಲಿ ಅಲ್ವಾ..?!
ಆ ಹುಡುಗನ ಹೆಸರು `ಮಹಮ್ಮದ್ ಅದ್ನಾನ್ ಹಿಲಾಲ್’. ಭವಿಷ್ಯದ ಕನಸನ್ನು ಕಟ್ಟಿಕೊಂಡಿದ್ದ ಆ ಹುಡುಗನಿಗಿನ್ನೂ ಕೇವಲ 17 ವರ್ಷ ಮಾತ್ರ..! ಜಮ್ಮು ಕಾಶ್ಮೀರದ ಈ ಹುಡುಗ ಶ್ರೀನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಓದ್ತಾ ಇದ್ದ..! ಆದ್ರೆ ಪರೀಕ್ಷಾ ಫಲಿತಾಂಶವೇ ಇವನ ಸಾವಿಗೆ ಕಾರಣವಾಗಿ ಬಿಡ್ತು..! ಭೌತಶಾಸ್ತ್ರದಲ್ಲಂತೂ ತುಂಬಾನೇ ಚುರುಕಾಗಿದ್ದ ಮಹಮ್ಮದ್ ಗೆ ಫಲಿತಾಂಶ ಶಾಕ್ ನೀಡಿ ಬಿಟ್ಟಿತ್ತು..! ಕೇವಲ 28 ಅಂಕಗಳನ್ನು ಗಳಿಸಿದ ಈತ ಅನುತ್ತೀರ್ಣನಾಗಿಬಿಟ್ಟಿದ್ದ..! ಆದರೆ ತಾನು ಪಾಸ್ ಆಗಿಯೇ ಆಗುತ್ತೇನೆಂಬ ನಂಬಿಕೆಯಿಂದ ಮರು ಮೌಲ್ಯಪಾನಕ್ಕೆ ಕೋರಿದ್ದ. ತಿಂಗಳು ಕಳೆದರೂ ಫಲಿತಾಂಶ ಬರದೇ ಇದ್ದಿದ್ದರಿಂದ ಬೇಸತ್ತ ಈತ `ಝೀಲಂ’ ನದಿಗೆ ಹಾರಿ ಪ್ರಾಣವನ್ನೇ ಬಿಟ್ಟ..! ಇವನ ಆತ್ಮಹತ್ಯೆ ಮಾಡಿಕೊಂಡ ನಾಲ್ಕು ತಿಂಗಳ ನಂತರ ಮರು ಮೌಲ್ಯಮಾಪನದ ಫಲಿತಾಂಶ ಬಂದಿದೆ..! ಈತ ಭೌತಶಾಸ್ತ್ರದಲ್ಲಿ ನಲವತ್ತೆಂಟು ಅಂಕಗಳನ್ನು ಪಡೆದಿದ್ದಾನೆ..! ಅಷ್ಟೇ ಅಲ್ಲ ಒಟ್ಟಾರೆ ಅಂಕ 70%..! ಇವನೇ ಕ್ಲಾಸಿಗೆ ಟಾಪರ್..! ಆದ್ರೆ ಈ ಖುಷಿ ಹಂಚಿಕೊಳ್ಳಲು ಆತನೇ ಇಲ್ಲ..! ನೊಂದು ಮಾತನಾಡುವ ತಂದೆ ಹಿಲಾಲ್ ಅಹಮ್ಮದ್ ಗಿಲ್ಕರ್ “ನಿನ್ನ ಫಲಿತಾಂಶವಿದು.. ನೀನೇ ತರಗತಿಗೆ ಟಾಪರ್ ಅಂತ ಹೇಳೋಕೆ ಮಗನನ್ನು ಹುಡುಕುವುದಾದರೂ ಎಲ್ಲಿ..?! ಎಂದು ಅಳುತ್ತಾರೆ. ತಾಯಿ ಅಭಿದಾಬಿ, “ನಾನು ಎಲ್ಲವನ್ನೂ ಕಳೆದುಕೊಂಡಿರುವೆ ನನಗೆ ಈ ಬದುಕೇ ಬೇಡವಾಗಿದೆ” ಎಂದು ದುಃಖಿಸ್ತಾರೆ..!
ಈ ಬಗ್ಗೆ ಜಮ್ಮು ಕಾಶ್ಮೀರದ ಸ್ಟೇಟ್ ಬೋರ್ಡ್ ಆಫ್ ಟೆಕ್ನಿಕಲ್ ಎಜುಕೇಷನ್ ಅನ್ನು ಪ್ರಶ್ನಿಸಿದ್ರೆ, ” ಇದೊಂದು ಮಿಸ್ಟೇಕ್, ತಿಳಿಯದೇ ಆದ ತಪ್ಪು..! ಇಂಥಾ ಘಟನೆಗಳು ಬೇರೆ ವಿಶ್ವವಿದ್ಯಾಲಯಗಳಲ್ಲೂ ಆಗ್ತಾ ಇರುತ್ತವೆ” ಎಂದು ಹೇಳ್ತಾರೆ..!? ಅಲ್ಲಾ ಸ್ವಾಮಿ.. ಇಂಥಾ ತಪ್ಪು ಆಗ್ತಾ ಇರುತ್ತೆ ನಿಜ, ಆದ್ರೆ ಇಷ್ಟೊಂದು ತಡವಾಗಿ ಮರುಮೌಲ್ಯಮಾನದ ಫಲಿತಾಂಶ ಬಿಟ್ಟು ಒಬ್ಬ ವಿದ್ಯಾರ್ಥಿಯನ್ನೇ ಕೊಂದು ಬಿಟ್ಟಿದ್ದಾರಲ್ಲಾ..?! ಅವರ ಅಪ್ಪ- ಅಮ್ಮನಿಗೆ ಅವರು ಕಳೆದುಕೊಂಡ ಮಗನನ್ನು ತಂದುಕೊಡಲಾದೀತೇ..?!
ಫ್ರೆಂಡ್ಸ್ ಇಂಥಾ ಬೇಜಾವಬ್ದಾರಿಯುತ ಇಲಾಖೆ ಜಮ್ಮು ಕಾಶ್ಮೀರದಲ್ಲಿ ಮಾತ್ರ ಇರೋದಲ್ಲ ದೇಶದ ಬೇರೆ ಬೇರೆ ಕಡೆಗಳಲ್ಲೂ ಇವೆ..! ನಮ್ಮ ರಾಜ್ಯದಲ್ಲೂ ನೀವು ಇಂಥಾ ಘಟನೆಗಳನ್ನು ನೋಡಿರ್ತೀರಾ..! ಸರಿಯಾಗಿ ಮೌಲ್ಯಮಾಪನ ಮಾಡ್ದೇ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುವವರಿಗೆ ಈಗಲೇ ಎಚ್ಚರಿಕೆ ಕರೆಕೊಟ್ಟು ಬಿಡಿ..! ಇದೇ ಕೊನೆ ಇನ್ನು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲೂ ಇಂಥಾ ಘಟನೆ ಮರುಕಳಿಸದಂತೆ ಎಚ್ಚರವಹಿಸುವಂತಾಗಲಿ..! ವಿದ್ಯಾರ್ಥಿಗಳೂ ಅಷ್ಟೇ ಫಲಿತಾಂಶದಿಂದ ನೊಂದು ಜೀವ ತೆಗೆದುಕೊಳ್ಳೋದಲ್ಲ..! ನಾವೇನೋ ಜೀವ ತೆಗೆದುಕೊಂಡು ಬಿಡ್ತೀವಿ,..! ಆದ್ರೆ ಇಷ್ಟುವರ್ಷ ನಮ್ಮನ್ನ ಸಾಕಿದ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡಿ ಪ್ಲೀಸ್..! ಪರೀಕ್ಷೆಯಲ್ಲಿ ಫೇಲ್ ಆದ್ರೆ ಏನಂತೆ ಲೈಫ್ ನಲ್ಲಿ ಫಾಸ್ ಆಗೋಣ..!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

ಇಂಗ್ಲೆಂಡಿನಲ್ಲಿ `ಇಮ್ರಾನ್ ಖಾನ್’ರನ್ನು ಹೊಗಳಿದ ನರೇಂದ್ರ ಮೋದಿ..! ಆ ಇಮ್ರಾನ್ ಖಾನ್ ಯಾರುಗೊತ್ತೇ..?!

ಈಗ ರೈಲು ಹೊರಡುವ 30 ನಿಮಿಷ ಮೊದಲು ಟಿಕೆಟ್ ಕಾಯ್ದಿರಿಸಬಹುದು..! ರೈಲ್ವೇ ಪರಿಷ್ಕೃತ ನಿಯಮಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!

ಅಪ್ಪ ಕೊಟ್ಟಿದ್ದು ಹತ್ತು ಲಕ್ಷ, ಇವಳು ಮಾಡಿದ್ದು ಕೋಟಿ ಕೋಟಿ..! ಎಂ.ಬಿ.ಎ ವಿದ್ಯಾರ್ಥಿನಿ ಪ್ರಿಯಾಂಕ ಕೋಟ್ಯಾಧಿಪತಿ ಹೇಗಾದ್ರು ಗೊತ್ತಾ..?!

ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?

ಕನ್ನಡ ನಾಡು, ನುಡಿಯ ಬಗ್ಗೆ ಗೊತ್ತೇ ಇಲ್ಲದವರು ಬೆಂಗಳೂರಲ್ಲೇ ಇದ್ದಾರೆ..! ವರನಟ ಡಾ.ರಾಜಕುಮಾರ್ ಅವರನ್ನೇ ಗುರುತಿಸದವರು ಕನ್ನಡನಾಡಲ್ಲಿದ್ದಾರೆ..!

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...