ಅಯ್ಯೋ ಕೆಲವೊಂದು ಸಲ ತಪ್ಪು ಮಾಡದೇ ಇದ್ರೂ ದೊಡ್ಡ ಶಿಕ್ಷೆಯನ್ನು ಎದುರಿಸಬೇಕಾಗುತ್ತೆ..! ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲಂತೂ ಸುಖಾ ಸುಮ್ಮನೆ ತಪ್ಪಿತಸ್ಥರಾದ್ರೂ ಆಗಬಹುದು..! ಟೈಮು ಸರಿಯಿಲ್ಲ ಅಂತಾದ್ರೆ ಇಡೀ ಸಮಾಜದ ದೃಷ್ಟಿಯಲ್ಲಿ ಕೆಟ್ಟವರಾಗಿ, ಗಲ್ಲು ಶಿಕ್ಷೆಗೂ ಒಳಗಾಗುವ ಗ್ರಹಚಾರವೂ ಬಂದೊದಗಬಹುದು..! ಫೋಟೋ ಎಡಿಟಿಂಗ್, ವೀಡಿಯೋ ಎಡಿಂಗ್ ಸಾಫ್ಟ್ ವೇರ್ ಗಳು ಎಷ್ಟೊಂದು ಉಪಯುಕ್ತಕರವಾಗಿವೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿವೆ..! ಈ ಸ್ಟೋರಿ ಓದಿ, ಒಮ್ಮೆ ಆ ಯುವಕನ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕೊಂಡ್ರೆ ಭಯಪಡ್ತೀರಾ..?! ಗ್ರಹಚಾರ ಕೆಟ್ರೆ ಏನೂ ಮಾಡೋಕೆ ಆಗಲ್ಲ..ಭಯ ಪಡ್ಬೇಡಿ.. ಹಿಂಗಿಂಗೇ ಆಗುತ್ತೆ ಅಂತ ಮೊದಲೇ ಡಿಸೈಡ್ ಆಗಿ ಬಿಟ್ಟಿರುತ್ತೆ..! ಈ ಸ್ಟೋರಿ ಓದಿಬಿಡಿ ಹಾಗೇ ಸುಮ್ಮನೆ..!
ಸಿಖ್ ಸಮುದಾಯಕ್ಕೆ ಸೇರಿರೋ ಆ ಯುವಕನ ಹೆಸರು `ವೀರೇಂದ್ರ ಜುಬ್ಬಲ್’..! ಈತ ಕೆನಡಾ ನಿವಾಸಿ. ಈತನ ಅದೃಷ್ಟ ಚೆನ್ನಾಗಿತ್ತು..! ಇಲ್ದೇ ಹೋಗಿದ್ರೆ ಇಷ್ಟೊತ್ತಿಗೆ ಜೈಲೂಟ ತಿನ್ತಾ ಇರ್ತಿದ್ದ..! ಭಯೋತ್ಪಾದಕ ಎಂಬ ಸರ್ಟಿಫಿಕೇಟ್ ಬೇರೆ ಇವನ ಜೊತೆ ಇರ್ತಾ ಇತ್ತು..!
ಯೆಸ್, ಈತನನ್ನು ಪ್ಯಾರಿಸ್ ದಾಳಿಯ ಆರೋಪಿಯನ್ನಾಗಿ ತೋರಿಸಲು ದುಷ್ಕರ್ಮಿಗಳು ಪ್ರಯತ್ನಪಟ್ಟಿದ್ರು..! ಫೋಟೋಶಾಪ್ ಮೂಲಕ ಈತನನ್ನು ಉಗ್ರ ಅಂತ ತೋರಿಸಿ ಬಿಟ್ಟಿದ್ರು..! ನಕಲಿ ಫೋಟೋದಲ್ಲಿ ಈ ಯುವಕ ಸೂಸೈಡ್ ಬಾಂಬರ್ ಜಾಕೆಟ್ ತೊಟ್ಟಿರುವಂತೆ ಚಿತ್ರಿಸಿದ್ದರು..! ಆ ಯುವಕನ ಹಣೆಬರ ಚೆನ್ನಾಗಿತ್ತು..!
ಇದು ನಕಲಿ ಫೋಟೋ ಅಂತ ಗೊತ್ತಾಗಿದೆ..! ಪಾಪ, ಗೊತ್ತಾಗ್ದೇ ಇದ್ದಿದ್ರೆ ಆ ಯುವಕ ಇವತ್ತು ಉಗ್ರನೆಂದು ವಿಶ್ವಕ್ಕೆ ಪರಿಚಯ ಆಗಿಬಿಡ್ತಾ ಇದ್ದ..! ವಿಚಾರಣೆ ಮುಗಿದು, ನಿರಪರಾಧಿ ಅಂತ ಗೊತ್ತಾಗುವಷ್ಟರಲ್ಲಿ ಏನೇನೆಲ್ಲಾ ಆಗುತ್ತಿತ್ತೇನೋ…?! ಆ ಶಿವನೇ ಬಲ್ಲ. ಅಯ್ಯೋ ನಮಗೂ ಹೀಗಾದ್ರೆ..?! ಸತ್ಯಕ್ಕೆ ಜಯವಿದೆ ಕಣ್ರೀ..! ಆಗೋದೆಲ್ಲಾ ಒಳ್ಳೆಯದಕ್ಕೇ..! ಏನೂ ಆಗಲ್ಲ.. ಹೆದರ ಬೇಡಿ.
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!
ಇಂಗ್ಲೆಂಡಿನಲ್ಲಿ `ಇಮ್ರಾನ್ ಖಾನ್’ರನ್ನು ಹೊಗಳಿದ ನರೇಂದ್ರ ಮೋದಿ..! ಆ ಇಮ್ರಾನ್ ಖಾನ್ ಯಾರುಗೊತ್ತೇ..?!
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!